ಕಲಬುರಗಿಯಲ್ಲಿ ಕೋವಿಡ್ ಸೋಂಕಿತೆಯ ಅತ್ಯಾಚಾರಕ್ಕೆ ಯತ್ನ: ಆ್ಯಂಬುಲೆನ್ಸ್ ಚಾಲಕ ಬಂಧನ

ಕೋವಿಡ್ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕಲಬುರಗಿ ನಗರದ ಜಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ರಾತ್ರಿ ನಡೆದಿದೆ.
ಆರೋಪಿ ಪಿಂಟು
ಆರೋಪಿ ಪಿಂಟು

ಕಲಬುರಗಿ: ಕೋವಿಡ್ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕಲಬುರಗಿ ನಗರದ ಜಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ರಾತ್ರಿ ನಡೆದಿದೆ.

25 ವರ್ಷದ ಸೋಂಕಿತೆ ಮಹಿಳೆ ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಖಾಸಗಿ ಆ್ಯಂಬುಲೆನ್ಸ್ ಚಾಲಕ ಪಿಂಟು ಎಂಬಾತ ಮಹಿಳೆ ಮಲಗಿದ್ದ ವೇಳೆ ಅತ್ಯಾಚಾರ ಯತ್ನಕ್ಕೆ ಮುಂದಾಗಿದ್ದಾನೆ. ಈ ವೇಳೆ ಮಹಿಳೆ ಎಚ್ಚರಗೊಂಡು ಚೀರಾಟ ನಡೆಸಿದಾಗ ಅಕ್ಕ-ಪಕ್ಕದ ರೋಗಿಗಳು ಕೂಡ ಎಚ್ಚರಗೊಂಡಿದ್ದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ನಂತರ ಕೋವಿಡ್ ಸೋಂಕಿತರ ಸಂಬಂಧಿಕರು ಜಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಜಮಾವಣೆಗೊಂಡು ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬ್ರಹ್ಮಪೂರ ಪೊಲೀಸರು ಜಿಮ್ಸ್ ಆಸ್ಪತ್ರೆಗೆ ದೌಡಾಯಿಸಿ ಘಟನೆ ವಿವರ ಪಡೆದುಕೊಂಡಿದ್ದಾರೆ

ಆ ನಂತರ ಖಾಸಗಿ ಆ್ಯಂಬುಲೆನ್ಸ್  ಚಾಲಕ ಪಿಂಟು ಈ ಕೃತ್ಯ ನಡೆಸಿದ್ದಾಗಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com