ಮಸೀದಿ, ಮದರಸಾಗಳಿಗೆ ನೀಡುತ್ತಿದ್ದ ತಸ್ತಿಕ್ ಭತ್ಯೆ ನಿಲ್ಲಿಸಿದ ಮುಜರಾಯಿ ಇಲಾಖೆ!

ಮಸೀದಿ ಮತ್ತು ಮದರಸಾಗಳ ಮೌಲ್ವಿಗಳಿಗೆ ನೀಡಲಾಗುತ್ತಿದ್ದ ತಸ್ತಿಕ್ ಭತ್ಯೆಯನ್ನು ನಿಲ್ಲಿಸುವಂತೆ ರಾಜ್ಯ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬುಧವಾರ ಆದೇಶಿಸಿದ್ದಾರೆ.
ಮಸೀದಿ
ಮಸೀದಿ

ಮಂಗಳೂರು: ಮಸೀದಿ ಮತ್ತು ಮದರಸಾಗಳ ಮೌಲ್ವಿಗಳಿಗೆ ನೀಡಲಾಗುತ್ತಿದ್ದ ತಸ್ತಿಕ್ ಭತ್ಯೆಯನ್ನು ನಿಲ್ಲಿಸುವಂತೆ ರಾಜ್ಯ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬುಧವಾರ ಆದೇಶಿಸಿದ್ದಾರೆ.

ಮುಜರಾಯಿ ಇಲಾಖೆಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ಯೆ ವಿತರಣೆಯಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ಯ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಸಚಿವ ಕೋಟಾ ಶ್ರೀನಿವಾಸ  ಪೂಜಾರಿ ಆದೇಶ ಹೊರಡಿಸಿದ್ದಾರೆ. 

ವಿಎಚ್‌ಪಿ ಮುಖಂಡರಾದ ಶರಣ್ ಪಂಪ್‌ವೆಲ್ ಮತ್ತು ಇತರರು ಸಚಿವರಿಗೆ ಇಂದು ಬೆಳಗ್ಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದರು. ಅದರಲ್ಲಿ ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಹಿಂದೂ ಅರ್ಚಕರಿಗೆ ತಸ್ತಿಕ್ ಭತ್ಯೆ ನೀಡುವ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ 

ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಣವನ್ನು ಮಸೀದಿಗಳು ಮತ್ತು ಮದರಸಾಗಳ ಮೌಲ್ವಿಗಳಿಗೆ ಕೋವಿಡ್ ಭತ್ಯೆಯಾಗಿ ಬಳಸುವುದನ್ನು ವಿಎಚ್ ಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದರು. 

ದಕ್ಷಿಣ ಕನ್ನಡದಲ್ಲಿ 41 ಮೌಲ್ವಿಗಳಿಗೆ ತಸ್ಡಿಕ್ ಭತ್ಯೆ ನೀಡಲಾಗುತ್ತಿದೆ. ದೇವಾಲಯದ ನಿಧಿಯನ್ನು ದೇವಾಲಯಗಳಿಗೆ ಮಾತ್ರ ಬಳಸಬೇಕು. ಮಸೀದಿಗಳು ಮತ್ತು ಮದರಸಾಗಳಿಗೆ ಬಳಸಬಾರದು. ಅದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸಂಜೆ 6.30ರ ಸುಮಾರಿಗೆ, ಹಿಂದೂಯೇತರರಿಗೆ ತಲುಪಿರುವ ಕೋವಿಡ್ ಭತ್ಯೆಯನ್ನು ತಸ್ತಿಕ್ ರೂಪದಲ್ಲಿ ಹಿಂಪಡೆಯಲು ಸಚಿವರು ಆದೇಶಿಸಿದ್ದಾರೆ ಎಂದು ಡಿಐಪಿಆರ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹಿಂದೂ ಅಲ್ಲದ ಪೂಜಾ ಕ್ಷೇತ್ರಗಳಿಗೆ ಮುಜರಾಯಿ ನಿಧಿಯನ್ನು ಬಳಸುತ್ತಿರುವ ಬಗ್ಗೆ ಹಿಂದೂ ನಾಯಕರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ತಸ್ತಿಕ್ ನಿಧಿಯನ್ನು ಹಿಂದೂಯೇತರ ಪೂಜಾ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ. ಅದನ್ನು ಈಗ ನಿಲ್ಲಿಸಲಾಗುವುದು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಒಂದು ವರ್ಷದಲ್ಲಿ 27,000ಕ್ಕೂ ಹೆಚ್ಚು ಹಿಂದೂ ದೇವಾಲಯಗಳು ಒಟ್ಟು 133 ಕೋಟಿ ರೂ.ಗಳ ತಸ್ತಿಕ್ ಭತ್ಯೆಯನ್ನು ಪಡೆಯುತ್ತಿವೆ ಎಂದು ಟಿಪ್ಪಣಿ ತಿಳಿಸಿದೆ. ಈ ಪೈಕಿ 764 ಹಿಂದೂಯೇತರ ಪೂಜಾ ಕ್ಷೇತ್ರಗಳು ಸಹ ತಸ್ತಿಕ್ ಸ್ವೀಕರಿಸುತ್ತಿವೆ. ಸಚಿವರ ಸೂಚನೆಯ ಆಧಾರದ ಮೇಲೆ, ಹಿಂದೂಯೇತರ ಪೂಜಾ ಕ್ಷೇತ್ರಗಳಿಗೆ ತಸ್ತಿಕ್ ಭತ್ಯೆಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com