ಮಳೆಗಾಲದಲ್ಲಿ ಜಲಪಾತಗಳಲ್ಲಿ ಜನದಟ್ಟಣೆ: ಕಿರು ಜಲಪಾತಗಳನ್ನು ಜನತೆಗೆ ಪರಿಚಯಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ

ಕರ್ನಾಟಕದಲ್ಲಿ ಹಲವು ಪ್ರಮುಖ ಜಲಪಾತಗಳಿವೆ, ಮಳೆಗಾಲದಲ್ಲಿ ಜಲಪಾತಗಳಿಂದ ಹರಿಯುವ ನೀರನ್ನು ನೋಡುವುದೆಂದರೆ ಎಲ್ಲಿಲ್ಲದ ಖುಷಿ. ಪಶ್ಚಿಮ ಘಟ್ಟಗಳಲ್ಲಿರುವ ಇನ್ನೂ ಅಷ್ಟೊಂದು ಜನಪ್ರಿಯವಾಗಿರದ, ಪ್ರವಾಸಿಗರಿಗೆ ಪರಿಚಯವಿಲ್ಲದ ಕಿರು ಜಲಪಾತಗಳನ್ನು ಪ್ರಚಾರ ಮಾಡುವ ಪ್ರಸ್ತಾವ ಪ್ರವಾಸೋದ್ಯಮ ಇಲಾಖೆ ಮುಂದಿದೆ.
ಜಲಪಾತ
ಜಲಪಾತ

ಹುಬ್ಬಳ್ಳಿ: ಕರ್ನಾಟಕದಲ್ಲಿ ಹಲವು ಪ್ರಮುಖ ಜಲಪಾತಗಳಿವೆ, ಮಳೆಗಾಲದಲ್ಲಿ ಜಲಪಾತಗಳಿಂದ ಹರಿಯುವ ನೀರನ್ನು ನೋಡುವುದೆಂದರೆ ಎಲ್ಲಿಲ್ಲದ ಖುಷಿ. ಪಶ್ಚಿಮ ಘಟ್ಟಗಳಲ್ಲಿರುವ ಇನ್ನೂ ಅಷ್ಟೊಂದು ಜನಪ್ರಿಯವಾಗಿರದ, ಪ್ರವಾಸಿಗರಿಗೆ ಪರಿಚಯವಿಲ್ಲದ ಕಿರು ಜಲಪಾತಗಳನ್ನು ಪ್ರಚಾರ ಮಾಡುವ ಪ್ರಸ್ತಾವ ಪ್ರವಾಸೋದ್ಯಮ ಇಲಾಖೆ ಮುಂದಿದೆ.

ಅಂತಹ ಪ್ರಸ್ತಾಪವು ಈಗ ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಮುಂದೆ ಇದ್ದು, ಪ್ರವಾಸೋದ್ಯಮ ಇಲಾಖೆಯ ನೆರವಿನೊಂದಿಗೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಜನಸಂದಣಿಯಿಂದ ಕೂಡಿರುವ ನಿಯಮಿತ ಜಲಪಾತಗಳಿಂದ ಒತ್ತಡವನ್ನು ತಗ್ಗಿಸುವುದು ಮತ್ತು ಪ್ರವಾಸಿಗರಿಂದ ದೂರವುಳಿದಿರುವ ಅನೇಕ ಜಲಪಾತಗಳನ್ನು ಪ್ರವಾಸಿಗರಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ.

ಕರ್ನಾಟಕದ ಎಲ್ಲಾ ಅರಣ್ಯ ವಲಯಗಳಿಗೆ ಆಯಾ ಮುಖ್ಯಸ್ಥರಿಂದ ವಿವರಗಳನ್ನು ಕಳುಹಿಸಲಾಗಿದೆ ಎಂದು ಪರಿಸರ ಪ್ರವಾಸೋದ್ಯಮ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಅನ್ವೇಷಿಸದ ಜಲಪಾತಗಳು ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಪ್ರದೇಶಗಳಲ್ಲಿವೆ.

ವಿಭಿನ್ನ ವಿಭಾಗಗಳು ಒಳಗೊಂಡಿರುವುದರಿಂದ ಮತ್ತು ಪ್ರತಿ ವನ್ಯಜೀವಿ ಪ್ರದೇಶವು ನಿರ್ದಿಷ್ಟ ರಕ್ಷಣಾ ಯೋಜನೆಯನ್ನು ಹೊಂದಿರುವುದರಿಂದ, ನಾವು ಎಲ್ಲಾ ವಿಭಾಗಗಳಿಂದ ಜಲಪಾತಗಳ ಬಗ್ಗೆ ವಿವರಗಳನ್ನು ಕೋರಿದ್ದೇವೆ. ಒಂದು ವೇಳೆ ಅಧಿಕಾರಿಗಳು ತಮ್ಮ ಪ್ರದೇಶದಿಂದ ಯಾವುದೇ ನಿರ್ದಿಷ್ಟ ಜಲಪಾತಗಳನ್ನು ಜನಪ್ರಿಯಗೊಳಿಸಲು ಆಸಕ್ತಿ ತೋರಿಸಿದರೆ, ಪರಿಸರ ಪ್ರವಾಸೋದ್ಯಮ ಮಂಡಳಿ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ತನ್ನ ಸಹಾಯವನ್ನು ನೀಡುತ್ತವೆ ಎಂದು ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com