ನಮ್ಮ ಮೆಟ್ರೋ: ಮರಗಳ ಸ್ಥಳಾಂತರಕ್ಕೆ ಬಿಎಂಆರ್'ಸಿಎಲ್'ಗೆ ಹೈಕೋರ್ಟ್ ಅನುಮತಿ

ನಮ್ಮ‌ ಮೆಟ್ರೋ 2ನೇ ಹಂತದಲ್ಲಿನ ನಾಗವಾರ-ಗೊಟ್ಟಿಗೆರೆ ಮಾರ್ಗದ ಹಲವು ಕಡೆ ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಮ್ಮ‌ ಮೆಟ್ರೋ 2ನೇ ಹಂತದಲ್ಲಿನ ನಾಗವಾರ-ಗೊಟ್ಟಿಗೆರೆ ಮಾರ್ಗದ ಹಲವು ಕಡೆ ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಸೂರಜ್ ಗೋವಿಂದ್ ರಾಜ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಅನುಮತಿ ನೀಡಿತು. ತೆರವುಗೊಳಿಸುವ ಮರಗಳಿಗೆ ಪರ್ಯಾಯವಾಗಿ ನೆಡಲಾಗುವ ಸಸಿಗಳ (ಅರಣ್ಯೀಕರಣ) ವಿವರ ಒಳಗೊಂಡ ವರದಿ ನೀಡುವಂತೆಯೂ ಸೂಚಿಸಿತು.

ತಜ್ಞರ‌ ಸಮಿತಿ ಸಲಹೆಯಂತೆ ನಿಗಮವು ಮೆಟ್ರೋ ನಿರ್ಮಾಣಕ್ಕಾಗಿ ಈ ಮಾರ್ಗದಲ್ಲಿ ಮರಗಳನ್ನು‌ ಕಡಿಯಲು ಮತ್ತು ಸ್ಥಳಾಂತರಿಸಲು ನ್ಯಾಯಾಲಯದ ಅನುಮತಿ ಕೋರಿತ್ತು. ಅಲ್ಲದೆ, 2021ರ ಮಾರ್ಚ್‌ನಿಂದ ಮೇ ತಿಂಗಳ ಅವಧಿಯಲ್ಲಿ ಈ ಕುರಿತು ಹಲವು ಅಧಿಸೂಚನೆಗಳನ್ನೂ ಹೊರಡಿಸಿತ್ತು.

‘ಮರಗಳನ್ನು ಸ್ಥಳಾಂತರಿಸುವ ವೇಳೆ ತಾನು ನೇಮಿಸಿದ ಅಧಿಕಾರಿ ಅಥವಾ ವೃಕ್ಷ ಅಧಿಕಾರಿಯು ಹಾಜರಿರಬೇಕು. ಮರಗಳ ನಿರ್ವಹಣೆ ಮತ್ತು ಸಂರಕ್ಷಣೆ ಕುರಿತಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಬಿಎಂಆರ್‌ಸಿಎಲ್‌ನಿಂದ ಮಾಹಿತಿ ಪಡೆದು, ಆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದೂ ಪೀಠವು ನಿರ್ದೇಶಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com