ಕೋಲಾರ: 60 ಸಿಬ್ಬಂದಿಗೆ ಕೊರೋನಾ ಪಾಸಿಟಿವ್, ಐಫೋನ್‌ ತಯಾರಿಸುವ ವಿಸ್ಟ್ರಾನ್ ಕಂಪನಿ ಒಂದು ವಾರ ಬಂದ್

ಐಫೋನ್ ತಯಾರಿಸುವ ನರಪುರ ಕೈಗಾರಿಕಾ ಪ್ರದೇಶದ ವಿಸ್ಟ್ರಾನ್ ಕಾರ್ಪೊರೇಶನ್ ನ ಸುಮಾರು 60 ಸಿಬ್ಬಂದಿಗೆಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕಂಪನಿಯನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ.
ಕಾರ್ಖಾನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ
ಕಾರ್ಖಾನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಕೋಲಾರ: ಐಫೋನ್ ತಯಾರಿಸುವ ನರಪುರ ಕೈಗಾರಿಕಾ ಪ್ರದೇಶದ ವಿಸ್ಟ್ರಾನ್ ಕಾರ್ಪೊರೇಶನ್ ನ ಸುಮಾರು 60 ಸಿಬ್ಬಂದಿಗೆ
ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕಂಪನಿಯನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ.

ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯವರ ಸೂಚನೆಯ ಮೇರೆಗೆ, ಕಂಪನಿಯನ್ನು ಮೇ 1 ರಿಂದ ಮೇ 7 ರವರೆಗೆ ಎಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಮತ್ತು ಇಡೀ ಆವರಣವನ್ನು ಸೋಂಕುನಿವಾರಕಗೊಳಿಸಲು ಪ್ರಾರಂಭಿಸಿದೆ.

ಕೋಲಾರ್ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರೊಂದಿಗೆ ಕಾರ್ಖಾನೆಗೆ ಭೇಟಿ ನೀಡಿ, ಪರೀಶಿಲಿಸದ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಡಾ. ಸೆಲ್ವಮಣಿ ಅವರು, ನಿರ್ವಹಣೆಯಲ್ಲಿರುವ ಕೆಲಸಗಾರರು ಮತ್ತು ಇತರರಿಗೂ ಕೋವಿಡ್ ಪರೀಕ್ಷೆ ನಡೆಸುವಂತೆ  ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಘಟಕ ಬಂದ್ ಮಾಡದಿದ್ದರೆ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದ್ದವು, ಆದ್ದರಿಂದ ತಕ್ಷಣವೇ ಮುಚ್ಚಿ ಆವರಣವನ್ನು ಸೋಂಕುರಹಿತಗೊಳಿಸಲು ಸೂಚಿಸಲಾಗಿದೆ ಎಂದು ಕಾರ್ತಿಕ್ ರೆಡ್ಡಿ ಅವರು ಹೇಳಿದರು.

ಮೇ 8 ರಂದು ಕೆಲಸಕ್ಕೆ ಮರಳುವಾಗ ಎಲ್ಲಾ ಕಾರ್ಮಿಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಅದರ ವರದಿಯನ್ನು ಸಲ್ಲಿಸುವಂತೆ ಮೇಲ್ ಮೂಲಕ ವಿಸ್ಟ್ರಾನ್‌ ಮ್ಯಾನೇಜ್ ಮೆಂಟ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com