ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟ: ಸರ್ಕಾರದ ವಿರುದ್ಧ ರಾಮಲಿಂಗಾ ರೆಡ್ಡಿ ಆಕ್ರೋಶ

ರೆಮಿಡಿಸಿವರ್ ಔಷದಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದರ ಹಿಂದೆ ರಾಜ್ಯಸರ್ಕಾರದ ಕೈವಾಡವಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. 
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಕೋಲಾರ: ರೆಮಿಡಿಸಿವರ್ ಔಷದಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದರ ಹಿಂದೆ ರಾಜ್ಯಸರ್ಕಾರದ ಕೈವಾಡವಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. 

ಕೋಲಾರದಲ್ಲಿ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ರೆಮ್ಡಿಸಿವರ್ ಔಷದಿಯನ್ನು ಸರ್ಕಾರವೇ ನೇರವಾಗಿ ಕಂಪನಿಗಳಿಂದ ಖರೀದಿಸುತ್ತಿದ್ದು, ಬೇರೆ ಯಾರ ಕೈಗೂ ಸಿಗುತ್ತಿಲ್ಲ. ಹೀಗಿರುವಾಗ ಕಾಳಸಂತೆಯಲ್ಲಿ ಎಷ್ಟು ಬೇಕಾದರೂ ರೆಮಿಡಿಸಿವರ್ ಸಿಗುತ್ತಿರುವುದು ಕಂಡುಬಂದಿದೆ. 

ರೆಮಿಡಿಸಿವರ್ ಔಷಧಿ ಖರೀದಿಯಲ್ಲಿ ಮಧ್ಯವರ್ತಿಗಳು ಹಾಗೂ ಡೀಲರ್‌ಗಳೇ ಇಲ್ಲ ಎಂದ ಮೇಲೆ ಕಾಳಸಂತೆಯಲ್ಲಿ ಹೇಗೆ ಸಿಗುತ್ತಿದೆ. ಇದೆಲ್ಲಾ ತಿಳಿದಿದ್ದರೂ ಸರ್ಕಾರ ಯಾವುದೇ ಕ್ರಮ ಕಣ್ಮುಚ್ಚಿ ಕುಳಿತಿದೆ. 900 ರಿಂದ 5000 ರೂಪಾಯಿ ಒಳಗೆ ಸಿಗಬೇಕಾದ ರೆಮ್ಡಿಸಿವಿರ್ ಔಷಧಿಯನ್ನು ಬ್ಲಾಕ್ ಮಾರ್ಕೆಟ್‌ನಲ್ಲಿ 25,000 ರಿಂದ 35,000 ರೂಪಾಯಿವರೆಗೂ ಮಾರಾಟವಾಗುತ್ತಿದೆ. ಬ್ಲಾಕ್ ಮಾರ್ಕೆಟ್ ಗೆ ರೆಮ್ಡಿಸಿವರ್ ಔಷಧಿ ಹೇಗೆ ಪೂರೈಕೆಯಾಯಿತು ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.

ರಾಜ್ಯಾದ್ಯಂತ ಹಾಸಿಗೆಗಾಗಿ ಜನರು ಹೆಣಗಾಡುತ್ತಿದ್ದಾರೆ, ಇದು ಸರ್ಕಾರದ ವೈಫಲ್ಯವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com