ಉಚಿತ ಆಕ್ಸಿಜನ್ ಬಸ್: ಖಾಸಗಿ ಆಸ್ಪತ್ರೆಯೊಂದಿಗೆ ಬೆಂಗಳೂರು ಶಾಲೆ ಸಹಯೋಗ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ಸಾವಿರಾರು ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವಂತೆಯೇ ಇತ್ತ ಖಾಸಗಿ ಶಾಲೆಯೊಂದು ಖಾಸಗಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆಕ್ಸಿಜನ್ ಬಸ್ ಸೇವೆಗೆ ಚಾಲನೆ ನೀಡಿದೆ.
ಆಕ್ಸಿಜನ್ ಬಸ್ ಸೇವೆ
ಆಕ್ಸಿಜನ್ ಬಸ್ ಸೇವೆ

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ಸಾವಿರಾರು ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವಂತೆಯೇ ಇತ್ತ ಖಾಸಗಿ ಶಾಲೆಯೊಂದು ಖಾಸಗಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆಕ್ಸಿಜನ್ ಬಸ್ ಸೇವೆಗೆ ಚಾಲನೆ ನೀಡಿದೆ.

ಬೆಂಗಳೂರಿನ ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಸ್ಕೂಲ್‌, ಮಹಾರಾಜ ಅಗ್ರಸೆನ್‌ ಆಸ್ಪತ್ರೆಯ ಸಹಯೋಗದೊಂದಿಗೆ ಐದು ಆಕ್ಸಿಜನ್ ಬಸ್‌ಗಳನ್ನು ಪ್ರಾರಂಭಿಸುತ್ತಿದ್ದು, ಇದು ಸೋಂಕಿತ ಜನರಿಗೆ ಉಚಿತ ಆಮ್ಲಜನಕವನ್ನು ಒದಗಿಸುತ್ತದೆ. ಅಗತ್ಯವಿರುವವರಿಗೆ ಸಹಾಯ ಮಾಡಲು ವಾಹನಗಳನ್ನು ನಗರದ ಆಸ್ಪತ್ರೆಗಳ ಹೊರಗೆ ಇಡಲಾಗುವುದು. ಪ್ರತಿ ಬಸ್‌ನಲ್ಲಿ ಒಂದು ಸಮಯದಲ್ಲಿ 12 ರೋಗಿಗಳಿಗೆ ಅವಕಾಶ ಕಲ್ಪಿಸಬಹುದು ಎನ್ನಲಾಗಿದೆ.

ಈ ಉಚಿತ ಆಕ್ಸಿಜನ್ ಸೇವೆಗಾಗಿ ರೋಗಿಗಳು ವೈದ್ಯರ ಪ್ರಿಸ್ಕ್ರಿಪ್ಷನ್ ಅಥವಾ ಆರ್‌ಟಿಪಿಸಿಆರ್ ವರದಿ ಮತ್ತು ರೋಗಿಯ ಆಧಾರ್ ಕಾರ್ಡ್‌ನ ನಕಲನ್ನು ಒದಗಿಸಬೇಕು. ರೋಗಿಯ ಅಟೆಂಡೆಂಟ್ ಅಥವಾ ಸಹಾಯಕರು ಈ ವಿವರಗಳನ್ನು ಒದಗಿಸಬೇಕೇ ಹೊರತು ರೋಗಿಯಲ್ಲ ಎಂದು ಮಹಾರಾಜ ಅಗ್ರಸೆನ್ ಆಸ್ಪತ್ರೆಯ  ಅಧ್ಯಕ್ಷ ಡಾ. ಸತೀಶ್ ಜೈನ್ ಹೇಳಿದರು. 

ಈ ವಿಶೇಷ ಸೇವಾ ಕಾರ್ಯಕ್ರಮವನ್ನು ಕಂದಾಯ ಸಚಿವ ಆರ್ ಅಶೋಕ್ ಅವರು ಗುರುವಾರ ಉದ್ಘಾಟಿಸಿದರು. ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಸ್ಕೂಲ್ ನ ಶಾಲಾ ಬಸ್ ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದ್ದು, ಆಂತರಿಕ ಸಲಕರಣೆಗಳ ವೆಚ್ಚವನ್ನು ಆಸ್ಪತ್ರೆ ನಿರ್ವಹಿಸಿಕೊಂಡಿದೆ. ಆಕ್ಸಿಜನ್ ಸಿಲಿಂಡರ್, ಫೇಸ್ ಮಾಸ್ಕ್ ಸಲಕರಣೆಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಸಹಾಯವನ್ನು ಆಸ್ಪತ್ರೆಯಿಂದ ಒದಗಿಸಲಾಗುವುದು ಎಂದು ಗ್ರೀನ್‌ವುಡ್ ಶಾಲೆಯ ಅಧ್ಯಕ್ಷ ಬಿಜಯ್ ಅಗರ್ವಾಲ್ ಹೇಳಿದ್ದಾರೆ.

'ಮಹಾರಾಜ ಅಗ್ರಸೆನ್ ಆಸ್ಪತ್ರೆ ವೈದ್ಯ ಡಾ.ಸತೀಶ್ ಜೈನ್ ಅವರು ಈ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದಾಗ ನಾನಗೆ ಈ ಉಪಾಯ ವಿಶೇಷವೆನಿಸಿತು. ಈ ವಿಶೇಷ ಸೇವೆಯಿಂದ ಪ್ರತಿ ರೋಗಿಯು ಎರಡು ಗಂಟೆಗಳ ಕಾಲ ಆಮ್ಲಜನಕವನ್ನು ಬಳಸಲು ಸಾಧ್ಯವಾಗುತ್ತದೆ. ಒಂದು ಬಸ್ ನಲ್ಲಿ ಏಕಕಾಲಕ್ಕೆ 12 ಮಂದಿ  ರೋಗಿಗಳಿಗೆ ಆಕ್ಸಿಜನ್ ನೀಡಬಹುದು. ಮುಂದಿನ ಹತ್ತು ದಿನಗಳವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, 10 ದಿನಗಳ ಬಳಿಕ ಬೇಡಿಕೆಯನ್ನಾಧರಿಸಿ ಮುಂದಿನ ನಿರ್ಧಾರ ಮಾಡುತ್ತೇವಲೆ ಎಂದು ಹೇಳಿದರು.

ಇನ್ನು ಈ ಉಚಿತ ಸೇವೆ ಬಳಸಿಕೊಳ್ಳಲು ಆಸ್ಪತ್ರೆಯ ನಿರ್ವಾಹಕರಿಗೆ: 09620304864 ಸಂಖ್ಯೆಗೆ ಕರೆ ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com