ಪಂಡಿತ್ ರಾಜೀವ್ ತಾರನಾಥ್, ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ಗೆ ಬಸವಶ್ರೀ ಪ್ರಶಸ್ತಿ

ಶಾಸ್ತ್ರೀಯ ಸಂಗೀತಗಾರ ಪಂಡಿತ್ ರಾಜೀವ್ ತಾರನಾಥ್ ಮತ್ತು ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿ ರಂಗನ್ ಅವರಿಗೆ ಕ್ರಮವಾಗಿ 2019 ಮತ್ತು 2020 ರ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ನೀಡಲಾಗಿದೆ.
ಕಸ್ತೂರಿ ರಂಗನ್ ಮತ್ತು ರಾಜೀವ್ ತಾರಾನಾಥ್
ಕಸ್ತೂರಿ ರಂಗನ್ ಮತ್ತು ರಾಜೀವ್ ತಾರಾನಾಥ್

ಚಿತ್ರದುರ್ಗ: ಶಾಸ್ತ್ರೀಯ ಸಂಗೀತಗಾರ ಪಂಡಿತ್ ರಾಜೀವ್ ತಾರನಾಥ್ ಮತ್ತು ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿ ರಂಗನ್ ಅವರಿಗೆ ಕ್ರಮವಾಗಿ 2019 ಮತ್ತು 2020 ರ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ನೀಡಲಾಗಿದೆ.

2019ನೇ ಸಾಲಿನ ಪ್ರಶಸ್ತಿಗೆ ಪಂಡಿತ್ ರಾಜೀವ್‌ ತಾರಾನಾಥ್‌ ಹಾಗೂ 2020ನೇ ಸಾಲಿಗೆ ಕಸ್ತೂರಿ ರಂಗನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 5 ಲಕ್ಷ ರು ನಗದು ಹಾಗೂ ಫಲಕ  ಒಳಗೊಂಡಿದೆ. ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ಬಳಿಕ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಪ್ರಕಟಿಸಿದ್ದಾರೆ.

ಸರೋದ್‌ ವಾದಕರಲ್ಲಿ ರಾಜೀವ್‌ ತಾರಾನಾಥ್‌ ಅವರು ಅಗ್ರಗಣ್ಯರು. ಸಾಂಪ್ರದಾಯಿಕ ಹಿಂದೂಸ್ತಾನಿ ಸಂಗೀತದಲ್ಲಿನ ಆಳ ಹಾಗೂ ಭಾವನಾ ಲೋಕದ ತೀಕ್ಷ್ಣತೆಯನ್ನು ತಮ್ಮ ವಾದನದಲ್ಲಿ ಸಮ್ಮಿಶ್ರಗೊಳಿಸುವ ಸಾಧಕ’ 1932 ರಲ್ಲಿ ಜನಿಸಿದ ರಾಜೀವ್ ತಾರಾನಾಥ್ ತಮ್ಮ 9ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಿದರು.

20ನೇ ವಯಸ್ಸಿಗೂ ಮೊದಲು ತಾರಾನಾಥ್ ಅವರು ಆಲ್ ಇಂಡಿಯಾ ರೇಡಿಯೋ ನಲ್ಲಿ ಗಾಯನ ಆರಂಭಿಸಿದ್ದರು. ಉಸ್ತಾದ್ ಅಲಿ ಅಕ್ಬರ್ ಖಾನ್, ಪಂಡಿತ್ ರವಿ ಶಂಕರ್ ಮತ್ತು ನಿಖಿಲ್ ಬ್ಯಾನರ್ಜಿ, ಆಶೀಸ್ ಖಾನ್ ಮತ್ತು ಅನ್ನಪೂರ್ಣದೇವಿ ಅವರ ಬಳಿ ತರಬೇತಿ ಪಡೆದಿದ್ದಾರೆ.

‘ಕಸ್ತೂರಿ ರಂಗನ್ ಅವರು ಒಂಬತ್ತಕ್ಕೂ ಹೆಚ್ಚು ವರ್ಷ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇತೃತ್ವ ವಹಿಸಿದ್ದರು. ಯೋಜನಾ ಆಯೋಗದ ಸದಸ್ಯರಾಗಿದ್ದವರು. ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com