ಅಯೋಧ್ಯೆಯ ರಾಮ ಮಂದಿರಕ್ಕಾಗಿ ಕುಂಭಾಶಿಯಲ್ಲಿ ಬ್ರಹ್ಮರಥ ನಿರ್ಮಾಣ ಕಾರ್ಯ ಪ್ರಾರಂಭ

ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬ್ರಹ್ಮರಥ (ತೇರು) ನಿರ್ಮಾಣವು ಅಕ್ಷಯ ತೃತೀಯದ ಶುಭ ದಿನದಂದು ಕುಂದಾಪುರದ ಸಮೀಪದ ಕುಂಭಾಶಿಯಲ್ಲಿ ಪ್ರಾರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕುಂದಾಪುರ: ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬ್ರಹ್ಮರಥ (ತೇರು) ನಿರ್ಮಾಣವು ಅಕ್ಷಯ ತೃತೀಯದ ಶುಭ ದಿನದಂದು ಕುಂದಾಪುರದ ಸಮೀಪದ ಕುಂಭಾಶಿಯಲ್ಲಿ ಪ್ರಾರಂಭವಾಗಿದೆ.

ಸುಮಾರು 4 ಕೋಟಿ ರೂ. ವೆಚ್ಚದ ಈ ಬ್ರಹ್ಮರಥ ಪೂರ್ಣಗೊಂಡ ನಂತರ ಕಿಷ್ಕಿಂದೆಯ ಹನುಮ ಜನ್ಮಭೂಮಿ ಕ್ಷೇತ್ರದ ಪರವಾಗಿ ರಾಮ ಮಂದಿರಕ್ಕೆ ಸೇರಲಿದೆ.

ಪ್ರಸಿದ್ದ ಶಿಲ್ಪಿಗಳಾದ ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ನಿನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯರು 50 ನುರಿತ ಕುಶಲಕರ್ಮಿಗಳ ತಂಡದ ಸಹಾಯದಿಂದ ಬ್ರಹ್ಮರಥದ ನಿರ್ಮಾಣ ಮಾಡಲಿದ್ದಾರೆ. ಈ ರಥ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ರಥದ ಮಾದರಿಯಲ್ಲಿರಲಿದೆ.

84 ಅಡಿ ಎತ್ತರ ಮತ್ತು 26 ಅಡಿ ಅಗಲದ ರಥದಲ್ಲಿ 10 ಅಡಿ ಎತ್ತರದ ಚಕ್ರಗಳಿವೆ. ರಥದ ಮಂಟಪ ಐದು ಅಡಿಗಳಿದ್ದರೆ, ಕಲಶ ಸಹ ಅಷ್ಟೇ ಎತ್ತರವನ್ನು ಹೊಂದಿರಲಿದೆ. ರಥದ ತೂಕ 50 ಟನ್ ಆಗಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com