ಕೋವಿಡ್ ಆರೈಕೆ ಕೇಂದ್ರಗಳಾಗಿ ದೇವಾಲಯಗಳ ಸಮುದಾಯ ಭವನ, ಹಜ್ ಭವನಗಳ ಮಾರ್ಪಾಡು!

ಸ್ಥಳೀಯ ಜನರಿಗೆ ಸಹಾಯ ಮಾಡಲು ಕರ್ನಾಟಕದಲ್ಲಿರುವ ದೇವಾಲಯಗಳ ಸಮುದಾಯ ಭವನಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಸ್ಥಳೀಯ ಜನರಿಗೆ ಸಹಾಯ ಮಾಡಲು ಕರ್ನಾಟಕದಲ್ಲಿರುವ ದೇವಾಲಯಗಳ ಸಮುದಾಯ ಭವನಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ, ರೋಗಿಗಳಿಗೆ ಚಿಕಿತ್ಸೆ ನೀಡಲು ದೇವಾಲಯಗಳ ಪಕ್ಕದಲ್ಲಿರುವ ಎಲ್ಲಾ ಸಮುದಾಯ ಭವನಗಳನ್ನು ತೆರೆಯಲು ರಾಜ್ಯ ದತ್ತಿ ಇಲಾಖೆ ಮುಂದಾಗಿದೆ. ವಕ್ಫ್ ಮಂಡಳಿಯೂ ಸಹ ಹಜ್ ಭವನವನ್ನು ಸಿಸಿಸಿ ಆಗಿ ಪರಿವರ್ತಿಸಲು ಮುಂದಾಗಿದೆ.

ಸಮುದಾಯ ಸಭಾಂಗಣಗಳನ್ನು ಬಳಸಿಕೊಳ್ಳಲು ಡಿಸಿಗಳಿಗೆ ಮಾಹಿತಿ ಸೂಚನೆ ನೀಡಿದ್ದೇವೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ಮೊದಲಿಗೆ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಪಕ್ಕದಲ್ಲಿರುವ ಸಭಾ ಭವನವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಅಭಿವೃದ್ಧಿಪಡಿಸಲಾಗುವುದು, ಅಲ್ಲಿ ಆಮ್ಲಜನಕ ಘಟಕವನ್ನು ಸೇರಿಸಲಾಗುವುದು.  ಮುಜರಾಯಿ ಇಲಾಖೆ ವ್ಯಾಪ್ತಿ ಅಡಿ 34 ಸಾವಿರ ದೇವಾಲಯಗಳು ಬರಲಿವೆ, ಸದ್ಯ ಈ ದೇವಾಲಯಗಳು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವಿದೆ, ಹೀಗಾಗಿ ಸಿಸಿಸಿಗೆ ಬಳಸಿಕೊಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಎ. ದರ್ಜೆಯ ದೇವಾಲಯದ ಸಮುದಾಯಭವನಗಳು ಹೆಚ್ಚು ವಿಶಾಲವಾಗಿದ್ದು ಚಿಕಿತ್ಸೆಗೆ ಅನುಕೂಲವಾಗಲಿದೆ, ಯಾವುದೇ ಜಾತಿ, ಧರ್ಮ ಪರಿಗಣಿಸದೇ ಎಲ್ಲರಿೂ ಇಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಜ್ ಭವನ ಮತ್ತು ಅಲ್ಪ ಸಂಖ್ಯಾತ ಇಲಾಖೆಯ ಸಮುದಾಯ ಭವನಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ  ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಹಜ್ ಭವನವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದ್ದು 140 ಬೆಡ್ ವ್ಯವಸ್ಥೆ ಮಾಡಲಾಗಿದೆ, ಇದಕ್ಕೆ ಶಾಸಕ ಕೃಷ್ಣ ಭೈರೇಗೌಡ ಸಹಾಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com