ಆಕ್ಸಿಜನ್ ಕೊರತೆ ಎದುರಿಸುತ್ತಿದ್ದ ಬೆಳಗಾವಿಗೆ ನೆರೆಯ ಧಾರವಾಡ ಜಿಲ್ಲೆ ನೆರವು!

ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಅವರ ಅಗತ್ಯಕ್ಕೆ ಸಾಕಾಗುವಷ್ಟು ಆಕ್ಸಿಜನ್ ಪೂರೈಸಲು ರಾಜ್ಯದ ಇತರ ಜಿಲ್ಲೆಗಳು ಪರದಾಡುತ್ತಿದ್ದರೆ ಸಾಕಷ್ಟು ಸಂಗ್ರಹ ಹೊಂದಿರುವ ಧಾರವಾಡ, 20 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಕ್ಸಿಜನ್ ನ್ನು ನೆರೆಯ ಬೆಳಗಾವಿಗೆ ನೀಡಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ನಿಂತಿದ್ದ ಆಕ್ಸಿಜನ್ ಟ್ಯಾಂಕರ್
ಕಿಮ್ಸ್ ಆಸ್ಪತ್ರೆಯಲ್ಲಿ ನಿಂತಿದ್ದ ಆಕ್ಸಿಜನ್ ಟ್ಯಾಂಕರ್

ಹುಬ್ಬಳ್ಳಿ: ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಅವರ ಅಗತ್ಯಕ್ಕೆ ಸಾಕಾಗುವಷ್ಟು ಆಕ್ಸಿಜನ್ ಪೂರೈಸಲು ರಾಜ್ಯದ ಇತರ ಜಿಲ್ಲೆಗಳು ಪರದಾಡುತ್ತಿದ್ದರೆ ಸಾಕಷ್ಟು ಸಂಗ್ರಹ ಹೊಂದಿರುವ ಧಾರವಾಡ, 20 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಕ್ಸಿಜನ್ ನ್ನು ನೆರೆಯ ಬೆಳಗಾವಿಗೆ ನೀಡಿದೆ.

ಧಾರವಾಡದಲ್ಲಿ 6000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಸುಮಾರು 2100 ರೋಗಿಗಳು ಆಕ್ಸಿಜನ್ ನೆರವಿನಲ್ಲಿದ್ದಾರೆ. ಪ್ರತಿದಿನ 42 ರಿಂದ 45 ಮೆಟ್ರಿಕ್ ಟನ್ ಆಕ್ಸಿಜನ್ ಜಿಲ್ಲೆಗೆ ಅಗತ್ಯವಿದ್ದು, ಪ್ರತಿದಿನ 41 ಮೆಟ್ರಿಕ್ ಟನ್ ಆಕ್ಸಿಜನ್ ನ್ನು ಪೂರೈಸಲಾಗುತ್ತಿದೆ.

ಧಾರವಾಡ ಮತ್ತು ನೆರೆಯ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು, ಕಿಮ್ಸ್ ನಲ್ಲಿ ದಾಖಲಾಗಿರುವ ರೋಗಿಗಳಿಗಾಗಿ ಮೇ 17 ರಂದು ಕುವೈತ್ ನಿಂದ ಬಂದಿದ್ದ 50 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಬೃಹತ್ ಆಕ್ಸಿಜನ್ ಟ್ಯಾಂಕರು ಗಳನ್ನು ಧಾರವಾಡಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ 20 ಟನ್ ಮೆಟ್ರಿಕ್ ಟನ್ ಆಕ್ಸಿಜನ್ ನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಸಂಗ್ರಹಿಸಿ, ಉಳಿದ 30 ಟನ್ ಆಕ್ಸಿಜನ್ ನ್ನು ನೆರೆಯ ಜಿಲ್ಲೆಗಳಿಗೆ ಕಳುಹಿಸಲಾಗಿತ್ತು. ಆದೇ ದಿನ ಮಧ್ಯಪ್ರದೇಶದಿಂದ 20 ಮೆಟ್ರಿಕ್ ಟನ್ ಆಕ್ಸಿಜನ್ ಟ್ಯಾಂಕರ್ ಹುಬ್ಬಳ್ಳಿಗೆ ಬಂದಿದ್ದು, ಅದನ್ನು ಖಾಲಿ ಮಾಡಲು ಮೂರು ದಿನಗಳವರೆಗೆ ಕಾಯಬೇಕಾಗಿತ್ತು.

ಧಾರವಾಡದಲ್ಲಿ ಸಂಗ್ರಹ ಸಾಮರ್ಥ್ಯದ ಕೊರತೆಯಿಂದಾಗಿ ಗುರುವಾರ ಆಕ್ಸಿಜನ್ ಕೊರತೆಯಿರುವ ನೆರೆಯ ಧಾರವಾಡ ಜಿಲ್ಲೆಗೆ ಆಕ್ಸಿಜನ್ ಟ್ಯಾಂಕರ್  ಕಳುಹಿಸಲಾಯಿತು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ಹುಬ್ಬಳ್ಳಿಯ ಕಿಮ್ಸ್  ಆಸ್ಪತ್ರೆಯಲ್ಲಿ 40 ಕೆಎಲ್ ಸಂಗ್ರಹ ಸಾಮರ್ಥ್ಯವಿದೆ. ಕುವೈತ್ ನಿಂದ 20 ಮೆಟ್ರಿಕ್ ಟನ್ ಆಕ್ಸಿಜನ್ ಆಗಮಿಸಿದ ನಂತರ ಅದು ಪೂರ್ಣಗೊಂಡಿದೆ. ಅದರ ಹೊರತಾಗಿಯೂ ಪ್ರತಿದಿನ ಜಿಲ್ಲೆಗೆ 41 ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆಯಾಗಿದೆ ಎಂದು ತಿಳಿಸಿದರು.

ಕಳೆದ ವಾರ ಮಧ್ಯಪ್ರದೇಶದಿಂದ ಬರಬೇಕಾಗಿದ್ದ ಆಕ್ಸಿಜನ್ ಟ್ಯಾಂಕರ್ ವಿಳಂಬವಾಗಿ ಬಂದಿದೆ. ಈ ಮಧ್ಯೆ ಕುವೈತ್ ನಿಂದ ಆಕ್ಸಿಜನ್ ಪೂರೈಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಆಕ್ಸಿಜನ್ ಸಮಿತಿಯೊಂದಿಗೆ ಸಮಾಲೋಚಿಸಿ ಮಧ್ಯಪ್ರದೇಶದಿಂದ ಬಂದಿರುವ ಆಕ್ಸಿಜನ್ ನ್ನು  ಬೆಳಗಾವಿಗೆ ಕಳುಹಿಸಲಾಯಿತು ಎಂದು ಮಾಹಿತಿ ನೀಡಿದರು.

ಸದ್ಯ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ, ನಮಗೆ ಸಾಕಾಗುವಷ್ಟು ಆಕ್ಸಿಜನ್ ಸಂಗ್ರಹವಿದೆ. ಜಿಂದಾಲ್  ಘಟಕದಿಂದ ಪ್ರತಿದಿನ ಆಕ್ಸಿಜನ್ ಪಡೆಯುತ್ತಿದ್ದೇವೆ. ಒಂದು ವೇಳೆ ಅಗತ್ಯಬಿದ್ದರೆ, ಹೆಚ್ಚಿನ ಆಕ್ಸಿಜನ್ ಪೂರೈಕೆಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com