ಬೆಂಗಳೂರು ಮಹಿಳೆಯ ಎರಡನೇ ಡೊಸ್ ಲಸಿಕೆ ಕದ್ದ ಗುಜರಾತ್ ವ್ಯಕ್ತಿ! 

ಶೀರ್ಷಿಕೆಯನ್ನು ನೋಡಿ ಲಸಿಕೆಯನ್ನ ಯಾರಾದ್ರೂ ಕದಿಯೋದಕ್ಕೆ ಸಾಧ್ಯವೇ? ಎಂದು ಹುಬ್ಬೇರಿಸಬೇಡಿ, ಓರ್ವ ಮಹಿಳೆಗೆ ಸಿಗಬೇಕಿದ್ದ 2 ನೇ ಡೋಸ್ ಲಸಿಕೆಯನ್ನು ಗುಜರಾತ್ ನ ವ್ಯಕ್ತಿಯೋರ್ವ ಪಡೆದಿದ್ದಾನೆ. 
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)

ಬೆಂಗಳೂರು: ಶೀರ್ಷಿಕೆಯನ್ನು ನೋಡಿ ಲಸಿಕೆಯನ್ನ ಯಾರಾದ್ರೂ ಕದಿಯೋದಕ್ಕೆ ಸಾಧ್ಯವೇ? ಎಂದು ಹುಬ್ಬೇರಿಸಬೇಡಿ, ಓರ್ವ ಮಹಿಳೆಗೆ ಸಿಗಬೇಕಿದ್ದ 2 ನೇ ಡೋಸ್ ಲಸಿಕೆಯನ್ನು ಗುಜರಾತ್ ನ ವ್ಯಕ್ತಿಯೋರ್ವರು ಪಡೆದಿದ್ದಾರೆ. 

ವಿದ್ಯಾರಣ್ಯಪುರದ ನಿವಾಸಿ, ಹೆಚ್ಎಂಟಿಯ ನಿವೃತ್ತ ಉದ್ಯೋಗಿಯಾಗಿರುವ ಮಹಿಳೆ ಪ್ರೇಮಾ ಜಯರಾಮ್ (75) ಈಗಾಗಲೇ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಮಾ.16 ರಂದು ನೇಹಾ ಪ್ರಕಾಶ್ ಆಸ್ಪತ್ರೆಯಲ್ಲಿ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದರು. ಈಕೆಗೆ ಏಪ್ರಿಲ್ 30 ರಂದು ಎರಡನೇ ಡೋಸ್ ಲಸಿಕೆ ಪಡೆಯುವಂತೆ ಸೂಚನೆ ನೀಡಲಾಗಿತ್ತು. 

ಎರಡನೇ ಡೋಸ್ ಗಾಗಿ ನಾನು ಮನೆಯ ಬಳಿಯೇ ಇರುವ  ರಾಜಲಕ್ಷ್ಮಿ ಆಸ್ಪತ್ರೆಯಲ್ಲಿ ನನ್ನ ಹೆಸರನ್ನು ಕಾಯ್ದಿರಿಸಿದ್ದೆ. ಏ.30 ರಂದು ಎರಡನೇ ಡೋಸ್ ಲಸಿಕೆ ನೀಡುವಿಕೆಯನ್ನು ನಿಗದಿಪಡಿಸಿದ್ದರ ಮೆಸೇಜ್ ಕೂಡ ಬಂದಿತ್ತು. ಆದರೆ ಆ ದಿನ ಆಸ್ಪತ್ರೆಯಲ್ಲಿ ಲಸಿಕೆಯ ಕೊರತೆ ಇದ್ದಿದ್ದರಿಂದ ಆಸ್ಪತ್ರೆಯ ಸಿಬ್ಬಂದಿಗಳು ಕೆಲವು ದಿನಗಳ ನಂತರ ಬರಲು ಸೂಚಿಸಿದ್ದರು, ಇದಾದ ಬಳಿಕ ನಿರಂತರವಾಗಿ ಮಾಹಿತಿ ಪಡೆಯುತ್ತಿದೆ. ಒಂದು ದಿನ ಆಸ್ಪತ್ರೆಯಿಂದ ನನ್ನ ಆಧಾರ್ ನಂಬರ್ ಹಾಗೂ ಹೆಸರು ನೀಡುವಂತೆ ಕೇಳಿದರು. ಸಮಯವೂ ಮೀರಿದ್ದರಿಂದ ನಾನು ಎರಡನೇ ಡೋಸ್ ಗಾಗಿ ಮಾಹಿತಿ ಹಂಚಿಕೊಂಡೆ ಎಂದು ವೃದ್ಧೆ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. 

ಲಸಿಕೆಗಾಗಿ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಆಸ್ಪತ್ರೆಯಿಂದ ಮಾಹಿತಿ ಸಂಗ್ರಹಿಸಿದ ಮಹಿಳೆ ಹೇಳಿದ್ದರು. ನಾನು ಲಸಿಕೆಗಾಗಿ ಆಸ್ಪತ್ರೆಗೆ ತೆರಳಿದಾಗ ನನ್ನ ಆಧಾರ್ ಬ್ಲಾಕ್ ಆಗಿರುವುದು ಹಾಗೂ ಕೋವಿನ್ ಆಪ್ ನಲ್ಲಿ ನಾನು ಅದಾಗಲೇ ಲಸಿಕೆ ಪಡೆದಿರುವುದಾಗಿ ದಾಖಲಾಗಿರುವುದನ್ನು ಕಂಡು ದಂಗಾದೆ. 
 
ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳಿಗೆ ದೂರು ನೀಡಿದಾಗ ನಾವು ನಿಮಗೆ ಕರೆ ಮಾಡಿಯೇ ಇಲ್ಲ ಎಂದರು, ನಂತರ ಸ್ನೇಹಿತರ ಸಹಕಾರದಿಂದ ತಮಗೆ ನಿದಿಯಾಗಿದ್ದ ಲಸಿಕೆಯನ್ನು ಯಾರು ಪಡೆದರೆಂಬುದನ್ನು ಪತ್ತೆ ಮಾಡಿದಾಗ ಗುಜರಾತ್ ನ ವ್ಯಕ್ತಿಯೋರ್ವರು ಲಸಿಕೆ ಪಡಿದ್ದಾಗಿ ತಿಳಿದುಬಂದಿತು, ಇದು ಹೇಗೆ ಸಾಧ್ಯ? ನಾನು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಲು ನಿರಂತರ ಪ್ರಯತ್ನಿಸುತ್ತಿದ್ದೇನೆ, ಈ ಸಂಬಂಧ ಇ-ಮೇಲ್ ನ್ನೂ ಕಳಿಸಿದ್ದೇನೆ. ಆದರೆ ಈ ವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ" ಎಂದಿರುವ ಪ್ರೇಮಾ ಜಯರಾಮ್ ತಮ್ಮ ಟ್ವೀಟ್ ನಲ್ಲಿ ಸಿಎಂ ಯಡಿಯೂರಪ್ಪ ಅವರ ಟ್ವೀಟ್ ಖಾತೆ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯದ ಖಾತೆಗಳನ್ನೂ ಟ್ಯಾಗ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com