ನೀಟ್ ಫಲಿತಾಂಶ ಪ್ರಕಟ: 5ನೇ ರ್ಯಾಂಕ್ ಹಂಚಿಕೊಂಡ ಸಿಇಟಿ ಟಾಪರ್, ಮಂಗಳೂರಿನ ಹುಡುಗ

ದೇಶಾದ್ಯಂತ ವೈದ್ಯಕೀಯ ಕಾಲೇಜ್ ಗಳ ಪ್ರವೇಶಕ್ಕಾಗಿ ನಡೆದ 2021ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET)ಯ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ಮೇಘನ್ ಎಚ್‌ಕೆ ಹಾಗೂ ಮಂಗಳೂರಿನ....
ಮೇಘನ್ ಎಚ್‌ಕೆ
ಮೇಘನ್ ಎಚ್‌ಕೆ

ಬೆಂಗಳೂರು: ದೇಶಾದ್ಯಂತ ವೈದ್ಯಕೀಯ ಕಾಲೇಜ್ ಗಳ ಪ್ರವೇಶಕ್ಕಾಗಿ ನಡೆದ 2021ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET)ಯ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ಮೇಘನ್ ಎಚ್‌ಕೆ ಹಾಗೂ ಮಂಗಳೂರಿನ ಜಶನ್ ಛಾಬ್ರಾ ಅವರು ಐದನೇ ರ್ಯಾಂಕ್ ಪಡೆದಿದ್ದಾರೆ.

ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿನಿ ಮೇಘನ್ ಎಚ್‌ಕೆ ಅವರ ಫಲಿತಾಂಶ ವಿಳಂಬವಾಗಿ ಪ್ರಕಟವಾಗಿದ್ದು, ಅವರು ಸಿಇಟಿಯಲ್ಲಿ ಎಂಜಿನಿಯರಿಂಗ್, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ, ಕೃಷಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಫಾರ್ಮಸಿಯ ಎಲ್ಲಾ ವಿಭಾಗಗಳಲ್ಲಿ ಮೊದಲ ರ್ಯಾಂಕ್ ಪಡೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. 

ಇನ್ನೂ ನೀಟ್ ಪರೀಕ್ಷೆಯಲ್ಲಿ ಮೇಘನ್ ಅವರು 720 ಅಂಕಗಳಿಗೆ 715 ಅಂಕಗಳನ್ನು ಗಳಿಸಿದ್ದು, ತನ್ನ ಯಶಸ್ಸಿಗೆ ಕಾರಣರಾದ ಶಿಕ್ಷಣತಜ್ಞರಾದ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನೂ ಮಂಗಳೂರಿನ ಜಶನ್ ಛಾಬ್ರಾ ಅವರು ಸಹ ನೀಟ್ ಪರೀಕ್ಷೆಯಲ್ಲಿ 720 ಕ್ಕೆ 715 ಅಂಕಗಳನ್ನು ಪಡೆಯುವ ಮೂಲಕ ಐದನೇ ರ್ಯಾಂಕ್ ಅನ್ನು ಹಂಚಿಕೊಂಡಿದ್ದಾರೆ.

ಬೆಳಗಾವಿಯ ಡಾ. ರಾಜಿ ತೇಜಸ್ವಿ ಮತ್ತು ಡಾ ಟಿಎಸ್ ತೇಜಸ್ವಿ ಅವರ ಪುತ್ರಿ ರೋಶನಿ ತೀರ್ಥಳ್ಳಿ ಅವರು ನೀಟ್ ಪರೀಕ್ಷೆಯಲ್ಲಿ 705 ಅಂಕಗಳನ್ನು ಪಡೆಯುವ ಮೂಲಕ 103ನೇ ರ್ಯಾಂಕ್ ಗಳಿಸಿದ್ದಾರೆ. ಬೆಳಗಾವಿಯ ಜಿಎಸ್‌ಎಸ್ ಕಾಲೇಜಿನಲ್ಲಿ ತೇರ್ಗಡೆಯಾದ ರೋಶನಿ, ತನ್ನ ಯಶಸ್ಸಿಗೆ ಕಾರಣರಾದ ಪೋಷಕರು, ಅಜ್ಜಿ ಮತ್ತು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com