ವಿಜಯಪುರದಲ್ಲಿ ಭೂಕಂಪನ: ನಿದ್ರೆಯಿಲ್ಲದೆ ಆತಂಕದಲ್ಲೇ ದಿನ ಕಳೆಯುತ್ತಿರುವ ಜನತೆ

ವಿಜಯಪುರದಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಲೇ ಇದ್ದು, ಈ ಬೆಳವಣಿಗೆಯು ಅಲ್ಲಿನ ಜನತೆಯು ನಿದ್ರೆಯಿಲ್ಲದ ರಾತ್ರಿ ಕಳೆಯುವಂತಹ ಹಾಗೂ ಆತಂಕದ ಪರಿಸ್ಥಿತಿಯನ್ನು ತಂದೊಡ್ಡಿದೆ.
ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಮಸೂತಿ ಗ್ರಾಮದಲ್ಲಿ ಭೂವಿಜ್ಞಾನಿಗಳು ಭೂಕಂಪ ಮಾಪಕವನ್ನು ಸ್ಥಾಪಿಸುತ್ತಿರುವುದು.
ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಮಸೂತಿ ಗ್ರಾಮದಲ್ಲಿ ಭೂವಿಜ್ಞಾನಿಗಳು ಭೂಕಂಪ ಮಾಪಕವನ್ನು ಸ್ಥಾಪಿಸುತ್ತಿರುವುದು.

ವಿಜಯಪುರ: ವಿಜಯಪುರದಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಲೇ ಇದ್ದು, ಈ ಬೆಳವಣಿಗೆಯು ಅಲ್ಲಿನ ಜನತೆಯು ನಿದ್ರೆಯಿಲ್ಲದ ರಾತ್ರಿ ಕಳೆಯುವಂತಹ ಹಾಗೂ ಆತಂಕದ ಪರಿಸ್ಥಿತಿಯನ್ನು ತಂದೊಡ್ಡಿದೆ.

ಶನಿವಾರ ಬೆಳಿಗ್ಗೆ ಕೂಡ ಜಿಲ್ಲೆಯಲ್ಲಿ ಬೆಳಿಗ್ಗೆ 11.15ರ ಸುಮಾರಿಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 1.9 ತೀವ್ರತೆ ದಾಖಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಪ್ರಕಾರ ಭೂಕಂಪದ ಕೇಂದ್ರಬಿಂದು ಬಸವನ ಬಾಗೇವಾಡಿ ತಾಲೂಕಿನ ಕರಿಭಂಥನಾಳ್ ಗ್ರಾಮದ ಬಳಿ 10 ಕಿಲೋಮೀಟರ್ ಆಳದಲ್ಲಿದೆ. ಎಂದು ತಿಳಿಸಿದೆ. ಈ ನಡುವೆ ಬಸವನ ಬಾಗೇವಾಡಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಡಿಮೆ ತೀವ್ರತೆಯ ಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.

ಕಳೆದ 24 ಗಂಟೆಗಳಲ್ಲಿ ಬಸವನ ಬಾಗೇವಾಡಿ, ಬಬಲೇಶ್ವರ ಮತ್ತು ತಿಕೋಟ ತಾಲೂಕಿನಲ್ಲಿ ಕನಿಷ್ಠ ಏಳು ಬಾರಿ ಕಂಪನದ ಅನುಭವವಾಗಿದೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com