ಅನಿಯಮಿತ ಮಳೆ: ಹುಲಿಗಣತಿ ಮತ್ತಷ್ಟು ವಿಳಂಬ

ಅಕಾಲಿಕ ಮಳೆಯು ನಾಗರಿಕರ ದೈನಂದಿನ ಜೀವನಕ್ಕೆ ಅಡ್ಡಿಯಾಗಿಲ್ಲ, ಆದರೆ ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಗಣತಿಯನ್ನು ಮುಂದುವರಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅಕಾಲಿಕ ಮಳೆಯು ನಾಗರಿಕರ ದೈನಂದಿನ ಜೀವನಕ್ಕೆ ಅಡ್ಡಿಯಾಗಿಲ್ಲ, ಆದರೆ ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಗಣತಿಯನ್ನು ಮುಂದುವರಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆಯಾಗಿದೆ.

ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಸ್ಥಾಪಿಸುವುದು ಅಥವಾ ಟ್ರಾನ್ಸೆಕ್ಟ್ ಲೈನ್‌ಗಳನ್ನು ರಚಿಸುವುದು ಮತ್ತು ಪ್ರಾಥಮಿಕ ಮೌಲ್ಯಮಾಪನವನ್ನು ಕೈಗೊಳ್ಳುವುದು ಮುಂತಾದ ಸಿದ್ಧತೆ ಕಾರ್ಯಗಳನ್ನು ಸ್ಥಗಿತಗೊಳಿಸಿದೆ.

ಕೆಲವು ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ, ಕ್ಯಾಮೆರಾ ಟ್ರ್ಯಾಪ್‌ಗಳನ್ನು ಸ್ಥಾಪಿಸುವುದು ಒಂದು ಸವಾಲಾಗಿ ಪರಿಣಮಿಸಿದೆ, ಉಪಕರಣಗಳ ಕೊರತೆ ಮಾತ್ರವಲ್ಲ, ಮಳೆಯ ಕಾರಣವೂ ಆಗಿದೆ.

ಸೂರ್ಯನ ಬೆಳಕಿಗೆ ನಾವು ಕಾಯುತ್ತಿದ್ದೇವೆ, ಸೂರ್ಯನ ಬೆಳಕು ಬಂದ ನಂತರವೇ ನಾವು ಕೆಲವು ಕ್ಯಾಮೆರಾಗಳನ್ನು ಒಂದು ಸ್ಥಳದಿಂದ ಸ್ಥಳಾಂತರಿಸಬಹುದು . ಗಣತಿಗೆ ನೀಡಿರುವ ಗಡುವು ಪೂರೈಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಜನವರಿಯೊಳಗೆ ಹುಲಿ ಗಣತಿ ವರದಿಯನ್ನು ಸಲ್ಲಿಸಲು ರಾಜ್ಯಗಳಿಗೆ ಸೂಚಿಸಿದೆ.  ಜುಲೈ 29, ವಿಶ್ವ ಹುಲಿ ದಿನದಂದು ವರದಿಗಳನ್ನು ಬಿಡುಗಡೆ ಮಾಡುವ ಮೊದಲು ಅಗತ್ಯ ತಿದ್ದುಪಡಿಗಳು ಮತ್ತು ಮರು ಮೌಲ್ಯಮಾಪನ ಮಾಡಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com