
ಸಂಗನಬಸವ ಮಹಾಸ್ವಾಮೀಜಿ
ಬೆಳಗಾವಿ: ತಮ್ಮ ಹುಟ್ಟು ಹಬ್ಬದಂದೇ ಪ್ರವಚನ ನೀಡುತ್ತಿರುವಾಗಲೇ, ತೀವ್ರ ಹೃದಯಾಘಾತವಾಗಿ ಸ್ವಾಮೀಜಿಯೊಬ್ಬರು ಕೊನೆಯುಸಿರೆಳೆದಿದ್ದಾರೆ.
ಸ್ವಾಮೀಜಿ ನವೆಂಬರ್ 6 ರಂದು ತಮ್ಮದೇ ಹುಟ್ಟುಹಬ್ಬ ಆಚರಿಸಿ, ಆಶೀರ್ವಚನ ನೀಡುತ್ತಿದ್ದರು. ಸಂಗನಬಸವ ಮಹಾಸ್ವಾಮೀಜಿ (53) ಹೃದಯಾಘಾತಕ್ಕೆ ಬಲಿಯಾದವರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹುಟ್ಟು ಹಬ್ಬದ ದಿನವೇ ಪ್ರವಚನ ಹೇಳುತ್ತಲೇ ಭಕ್ತರ ಮುಂದೆ ಸ್ವಾಮೀಜಿ ಸಾವನ್ನಪ್ಪಿದ್ದಾರೆ. ಸ್ವಾಮೀಜಿ ಅಸುನೀಗುವ ದೃಶ್ಯ ಭಕ್ತರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸ್ವಾಮೀಜಿಯಾಗಿದ್ದರು.