ಬಿಟ್ ಕಾಯಿನ್ ದಂಧೆ ಪ್ರಕರಣ: ಹ್ಯಾಕರ್ ಶ್ರೀಕಿಗೆ ಗನ್ ಮ್ಯಾನ್ ಭದ್ರತೆ

ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿಗೆ ಜೀವ ಬೆದರಿಕೆ ಇರುವ ಆರೋಪದ ಹಿನ್ನೆಲೆಯಲ್ಲಿ ಭದ್ರತೆ ನೀಡಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಕಮೀಷನರ್ ಕಮಲ್ ಪಂತ್ ಸೂಚನೆ ನೀಡಿದ್ದು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿಗೆ ಜೀವ ಬೆದರಿಕೆ ಇರುವ ಆರೋಪದ ಹಿನ್ನೆಲೆಯಲ್ಲಿ ಭದ್ರತೆ ನೀಡಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಕಮೀಷನರ್ ಕಮಲ್ ಪಂತ್ ಸೂಚನೆ ನೀಡಿದ್ದು, ಶ್ರೀಕಿ ಭದ್ರತೆಗಾಗಿ ಓರ್ವ ಸಬ್ ಇನ್ಸ್ ಪೆಕ್ಟರ್ ನಿಯೋಜನೆ ಮಾಡಲಾಗಿದೆ.

ಕಮಿಷನರ್ ಸೂಚನೆ ಮೇರೆಗೆ ಸಬ್ ಇನ್ಸ್ ಪೆಕ್ಟರ್, ಶ್ರೀಕಿ ಮನೆಯವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಎಷ್ಟೇ ಪ್ರಯತ್ನಿಸಿದ್ರೂ ಶ್ರೀಕಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕುತ್ತಿಲ್ಲ. ಸಂಬಂಧಿಕರನ್ನು ವಿಚಾರಿಸಿದಾಗ ಮನೆಯಿಂದ ಹೊರಗೆ ಹೋಗಿರುವ ಶ್ರೀಕಿ, ವಾಪಸ್ ಬಂದಿಲ್ಲ ಅನ್ನೋ ಉತ್ತರ ನೀಡುತ್ತಿದ್ದಾರಂತೆ. ಫೋನ್ ಕೂಡ ಶ್ರೀಕಿ ಬಳಸುತ್ತಿಲ್ಲ. ಹೀಗಾಗಿ, ಆತನ ಜೊತೆ ಸಂಪರ್ಕ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಸಬ್ ಇನ್ಸ್ ಪೆಕ್ಟರ್, ಆತನ ಮನೆಗೆ ಪ್ರತಿನಿತ್ಯ ಹೋಗಿ ಬರ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಬಿಟ್ ಕಾಯಿನ್ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಜಟಪಾಟಿ ನಡೆಯುತ್ತಿದೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹ್ಯಾಕರ್ ಶ್ರೀಕಿಗೆ ಜೀವ ಬೆದರಿಕೆ ಇದೆ ಅನ್ನೋ ಆರೋಪ ಮಾಡಿದ್ದರು. ಅಲ್ಲದೆ, ವಕೀಲ ಸಂಕೇತ್ ಏಣಗಿ ಸಹ ಶ್ರೀಕಿ ಪ್ರಾಣಕ್ಕೆ ತೊಂದರೆ ಇದೆ ಅನ್ನೋ ಆರೋಪ ಮಾಡಿದ್ದರು. ಈ ಆರೋಪಗಳ ಬೆನ್ನಲ್ಲೇ, ಎಚ್ಚೆತ್ತ ಪೊಲೀಸರು, ಶ್ರೀಕಿಗೆ ಗನ್ ಮ್ಯಾನ್ ನೀಡಲು ಮುಂದಾಗಿದ್ದಾರೆ. ಆದರೆ ಮನೆಯವರನ್ನು ಸಂಪರ್ಕಿಸಿದರೆ ಎಲ್ಲಿದ್ದಾನೋ ಗೊತ್ತಿಲ್ಲ ಅಂತಾ ಉತ್ತರ ಸಿಗುತ್ತಿದೆ. ಹೀಗಾಗಿ, ಶ್ರೀಕಿ ಇರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com