ಉತ್ತಮ ಗುಣಮಟ್ಟದ ಗಾಳಿ: ಕರ್ನಾಟಕದ ಗದಗ, ಮಡಿಕೇರಿಗೆ ಅಗ್ರಸ್ಥಾನ

ಗದಗ ಹೊರತುಪಡಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ‘ಉತ್ತಮ’ ಎಕ್ಯೂಐ ವಿಭಾಗದಲ್ಲಿ ಹುಬ್ಬಳ್ಳಿ (35), ಬಾಗಲಕೋಟೆ (23), ಯಾದಗಿರಿ (30) ಮತ್ತು ಬೀದರ್ (41) ಸೇರಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗದಗ: ವಾಯು ಗುಣಮಟ್ಟ ಸೂಚ್ಯಂಕ (AQI) ಮೌಲ್ಯದೊಂದಿಗೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ  ದೈನಂದಿನ ಬುಲೆಟಿನ್ ಪ್ರಕಾರ, ಉತ್ತಮ ಗಾಳಿಯ ಗುಣಮಟ್ಟ ಹೊಂದಿರುವ ದೇಶದ ಪ್ರಮುಖ ನಗರಗಳಲ್ಲಿ ಕರ್ನಾಟಕದ ಗದಗ ಎರಡನೇ ಸ್ಥಾನದಲ್ಲಿದೆ. ಮಡಿಕೇರಿ ಎಕ್ಯೂಐ  19 ರೊಂದಿಗೆ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.

ಗದಗ ಹೊರತುಪಡಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ‘ಉತ್ತಮ’ ಎಕ್ಯೂಐ ವಿಭಾಗದಲ್ಲಿ ಹುಬ್ಬಳ್ಳಿ (35), ಬಾಗಲಕೋಟೆ (23), ಯಾದಗಿರಿ (30) ಮತ್ತು ಬೀದರ್ (41) ಸೇರಿವೆ.

ಈ ವರ್ಷ ಜೂನ್ 5 ಮತ್ತು ಜುಲೈ 6 ರಂದು ಗದಗ ರಾಷ್ಟ್ರದಾದ್ಯಂತ ಮೊದಲ ಸ್ಥಾನದಲ್ಲಿತ್ತು. ಅಂದಿನಿಂದ, ಇದು 'ಉತ್ತಮ' ಮತ್ತು 'ಸರಾಸರಿ' ವಿಭಾಗವನ್ನು ಕಾಯ್ದುಕೊಂಡಿದೆ.

ಚಾಮರಾಜನಗರ (44), ಚಿಕ್ಕಮಗಳೂರು (33), ದಾವಣಗೆರೆ (23), ಹಾಸನ (25), ಕೊಪ್ಪಳ (46), ಕೋಲಾರ (50), ಮೈಸೂರು (29), ‘ಉತ್ತಮ’ ವಾಯು ಗುಣಮಟ್ಟ ವಿಭಾಗದಲ್ಲಿ ಕರ್ನಾಟಕದ ಇತರ ಜಿಲ್ಲೆಗಳು. ರಾಮನಗರ (40), ಶಿವಮೊಗ್ಗ (37) ಮತ್ತು ವಿಜಯಪುರ (45). ಗಾಶಿಯ ಗುಣಮಟ್ಟ ಪ್ರಮಾಣ ಸರಾಸರಿಯಾಗಿದೆ.

ಪ್ರಮುಖ ಮಾಲಿನ್ಯಕಾರಕಗಳ ಸಾಂದ್ರತೆಯನ್ನು ಅವಲಂಬಿಸಿ ಎಕ್ಯೂ ಐ ಮೌಲ್ಯವನ್ನು ಅಳೆಯುವ 500-ಪಾಯಿಂಟ್ ಸ್ಕೇಲ್ ಅನ್ನು ಭಾರತ ಅನುಸರಿಸುತ್ತದೆ.

 0-50 ಮೌಲ್ಯವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ, ನಂತರ ತೃಪ್ತಿದಾಯಕ (51-100), ಮಧ್ಯಮ (101-200), ಕಳಪೆ (201-300), ಅತ್ಯಂತ ಕಳಪೆ (301-400) ಮತ್ತು ತೀವ್ರ (401-500) ಎಂದು ವಿಂಗಡಿಸಲಾಗುತ್ತದೆ.

ಗದಗವು ‘ಉತ್ತಮ’ ವಾಯು ಗುಣಮಟ್ಟದ ಪಟ್ಟಿ ಗಳಿಸಿದೆ.  ಬೆಟ್ಟ ಶ್ರೇಣಿ, ಕಪ್ಪತಗುಡ್ಡ ಮತ್ತು ಕಡಿಮೆ ಸಂಖ್ಯೆಯ ಕೈಗಾರಿಕೆಗಳು ಇಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿರಲು ಕಾರಣವಾಗಿದೆ. ಹೆಚ್ಚಿನ ಹಳ್ಳಿಗರು ಕೃಷಿಯಲ್ಲಿ ತೊಡಗಿರುವ ಕಾರಣ, ಕಡಿಮೆ ವಾಯು ಮಾಲಿನ್ಯವನ್ನು ಉಂಟುಮಾಡುತ್ತದೆ.

ನಾವು ಎಕ್ಯೂಐ ಮೌಲ್ಯವನ್ನು ಗಮನಿಸುತ್ತಿದ್ದು, ಈ ಬಾರಿ ಕರ್ನಾಟಕದ ಹಲವು ಜಿಲ್ಲೆಗಳು ಉತ್ತಮ ವಿಭಾಗದಲ್ಲಿವೆ. ಈ ಹಿಂದೆ ಪಟ್ಟಿಯಲ್ಲಿ  ಇಲ್ಲದ ಹುಬ್ಬಳ್ಳಿ ಈ ಬಾರಿ ಸೇರಿದೆ ಎಂದು ಗದಗ ಮತ್ತು ಧಾರವಾಡ ಜಿಲ್ಲೆಯ ಪರಿಸರ ಅಧಿಕಾರಿ ಶೋಭಾ ಪೊಳ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com