ಎಸಿಬಿ ದಾಳಿ ವೇಳೆ ಪೈಪ್ ನಲ್ಲಿ ನೋಟಿನ ಕಂತೆ ಸಿಕ್ಕಿ ಜೈಲುಪಾಲದ ಶಾಂತಗೌಡ ಬಿರಾದಾರ್ ಗೆ ಅನಾರೋಗ್ಯ!

ರಾಜ್ಯದ 15 ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕಿರಿಯ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ 400ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ ದಾಳಿ ನಡೆಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿದೆ.
ಶಾಂತಗೌಡ ಬಿರಾದಾರ್ ಮನೆಯಲ್ಲಿ ಪೈಪ್ ಲೈನ್ ನಲ್ಲಿ ನೋಟಿನ ಕಂತೆಯನ್ನು ಹೊರತೆಗೆಯುತ್ತಿರುವುದು
ಶಾಂತಗೌಡ ಬಿರಾದಾರ್ ಮನೆಯಲ್ಲಿ ಪೈಪ್ ಲೈನ್ ನಲ್ಲಿ ನೋಟಿನ ಕಂತೆಯನ್ನು ಹೊರತೆಗೆಯುತ್ತಿರುವುದು

ಬೆಂಗಳೂರು/ಕಲಬುರಗಿ: ರಾಜ್ಯದ 15 ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕಿರಿಯ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ 400ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ ದಾಳಿ ನಡೆಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿದೆ.

ಅದರಲ್ಲೂ ವಿಶೇಷವಾಗಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸುತ್ತಾರೆ ಎಂದು ಮಾಹಿತಿ ಸಿಕ್ಕಿ ಮನೆಯ ಪೈಪ್ ಲೈನ್ ಒಳಗೆ 500ರ ನೋಟಿನ ರಾಶಿರಾಶಿ ಕಂತೆಯನ್ನು ಹುದುಗಿಸಿಟ್ಟಿದ್ದು ವಿಶೇಷವಾಗಿ ಇಡೀ ರಾಜ್ಯದ ಜನತೆಯನ್ನು ಹುಬ್ಬೇರಿಸುವಂತೆ ಮಾಡಿತ್ತು. 

 ನಿನ್ನೆ ಸಿಕ್ಕಿರುವ ಅಕ್ರಮ ಸಂಪತ್ತಿನ ಮೂಲ ಶೋಧಿಸಿದ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ಇಂದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅವರಲ್ಲಿ ಒಬ್ಬರು ಕಲಬುರಗಿಯ ಲೋಕೋಪಯೋಗಿ ಇಲಾಖೆಯ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್ ಶಾಂತಗೌಡ ಎಂ ಬಿರಾದಾರ್ ಮತ್ತು ಇನ್ನೊಬ್ಬರು ಶಿವಮೊಗ್ಗ ಮೂಲದ ಗದಗದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ಟಿ ಎಸ್. ರುದ್ರೇಶಪ್ಪ. 

ಕಳೆದ ರಾತ್ರಿ ಎಸಿಬಿ ತಂಡ ಶಾಂತಗೌಡ ಬಿರಾದರ್ ರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ. ಸದ್ಯ ಶಾಂತಗೌಡ ಬಿರಾದರ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇದ್ದು ಇಂದು ಬೆಳಗ್ಗೆ ಅಸೌಖ್ಯವಾದ ಹಿನ್ನೆಲೆಯಲ್ಲಿ ತಪಾಸಣೆ ಮತ್ತು ಚಿಕಿತ್ಸೆಗೆಂದು ಅವರನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. 

ನಿನ್ನೆ ಎಸಿಬಿ ಅಧಿಕಾರಿಗಳು ಮನೆಗೆ ಬಂದಾಗ ಹತ್ತು ನಿಮಿಷ ಬಾಗಿಲು ತಗೆಯದೇ ಶಾಂತಗೌಡ ಸತಾಯಿಸಿದ್ದಲ್ಲದೆ ತನಿಖೆಗೂ ಸರಿಯಾಗಿ ಸ್ಪಂದಿಸಿರಲಿಲ್ಲ. ಸಿಬ್ಬಂದಿಗೆ ಸಹಕರಿಸಿರಲಿಲ್ಲ. ಹಣವನ್ನು ಬಚ್ಚಿಡುವ ವಿಶೇಷ ತಂತ್ರ ಮಾಡಿದ್ದ ಕಾರಣ ಹಿರಿಯ ಅಧಿಕಾರಿಗಳು ಶಾಂತಗೌಡ ಬಿರಾದರ್ ಬಂಧನಕ್ಕೆ ಸೂಚನೆ ನೀಡಿದರು. ಅದರಂತೆಯೇ ಕಳೆದ ರಾತ್ರಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com