ಬೆಳಗಾವಿಯಲ್ಲಿ ದಾರುಣ ಘಟನೆ: ಕರೆಂಟ್ ಶಾಕ್ ನಿಂದ ಅಜ್ಜಿಯನ್ನು ರಕ್ಷಿಸಲು ಹೋದ ಮೊಮ್ಮಗನೂ ಸಾವು!

ವಿದ್ಯುತ್​ ಶಾಕ್​​​ಗೆ ಒಳಗಾಗಿದ್ದ ಅಜ್ಜಿಯನ್ನು ರಕ್ಷಿಸಲು ಹೋಗಿದ್ದ ಮೊಮ್ಮಗನೂ ವಿದ್ಯೂತ್ ತಗುಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಳಗಾವಿ: ವಿದ್ಯುತ್​ ಶಾಕ್​​​ಗೆ ಒಳಗಾಗಿದ್ದ ಅಜ್ಜಿಯನ್ನು ರಕ್ಷಿಸಲು ಹೋಗಿದ್ದ ಮೊಮ್ಮಗನೂ ವಿದ್ಯೂತ್ ತಗುಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ನಡೆದಿದೆ.

ಅಜ್ಜಿ ಶಾಂತವ್ವಾ ಬಸ್ತವಾಡೆ, ಮೊಮ್ಮಗ ಸಿದ್ದಾರ್ಥ ಬಸ್ತವಾಡೆ (24) ಸ್ಥಳದಲ್ಲೇ ಸಾವನ್ನಪ್ಪಿದ ಮೃತ ದುರ್ದೈವಿಗಳು. ಘಟನೆಯಲ್ಲಿ ಸೊಸೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ರಾತ್ರಿ ಮಳೆ ಸುರಿದ ಹಿನ್ನಲೆಯಲ್ಲಿ ಹಿತ್ತಲಿನಲ್ಲಿ ಬಟ್ಟೆ ಹಾಕುವ ತಂತಿಗೆ ವಿದ್ಯುತ್ ತಗುಲಿದೆ. ಇದನ್ನು ಗಮನಿಸದೇ ಅಜ್ಜಿ ಬಟ್ಟೆ ಒಣಗಿಸಲು ತಂತಿ ಮೇಲೆ ಬಟ್ಟೆ ಹಾಕಲು ಹೋದಾಗ ಅಜ್ಜಿಗೆ ಮೊದಲು ವಿದ್ಯೂತ್ ಶಾಕ್​ ತಗುಲಿದ್ದು, ಅವರನ್ನು ರಕ್ಷಣೆ ಮಾಡಲು ಹೋದ ಮೊಮ್ಮಗ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com