ಈಡೇರದ ಸರ್ಕಾರದ ಭರವಸೆ: ಚಳುವಳಿಗೆ ಮರಳುವುದಾಗಿ ಮಾಜಿ ನಕ್ಸಲರ ಎಚ್ಚರಿಕೆ!

ಈ ಹಿಂದೆ ನಕ್ಸಲ್ ಚಟುವಟಿಕೆಗಳಿಗೆ ಸುದ್ದಿಯಾಗುತ್ತಿದ್ದ ಪಾವಗಡ ತಾಲೂಕು ಈಗ ಜಗತ್ತಿನ ಅತಿ ದೊಡ್ಡ-53 ಚದರ ಕಿ.ಮೀ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣವಾದ ಬಳಿಕ 5 ವರ್ಷಗಳಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದೆ. 
ಪಾವಗಡ ತಾಲೂಕಿನ ವಲ್ಲೂರು ಗ್ರಾಮದ ಮಂದಿ (ಚಿತ್ರ ಕೃಪೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)
ಪಾವಗಡ ತಾಲೂಕಿನ ವಲ್ಲೂರು ಗ್ರಾಮದ ಮಂದಿ (ಚಿತ್ರ ಕೃಪೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)

ಪಾವಗಡ: ಈ ಹಿಂದೆ ನಕ್ಸಲ್ ಚಟುವಟಿಕೆಗಳಿಗೆ ಸುದ್ದಿಯಾಗುತ್ತಿದ್ದ ಪಾವಗಡ ತಾಲೂಕು ಈಗ ಜಗತ್ತಿನ ಅತಿ ದೊಡ್ಡ-53 ಚದರ ಕಿ.ಮೀ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣವಾದ ಬಳಿಕ 5 ವರ್ಷಗಳಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದೆ. 

ತಾಲೂಕಿನಲ್ಲಿ 5 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದರೂ ರಾಜಕಾರಣಿಗಳು, ಪೊಲೀಸರು, ಸರ್ಕಾರಗಳಿಂದ ಭರವಸೆಗಳನ್ನು ಪಡೆದಿದ್ದ ಮಾಜಿ ನಕ್ಸಲರಿಗೆ ಮಾತ್ರ ಏನೂ ಬದಲಾವಣೆ ಆಗಿಲ್ಲ. ನಕ್ಸಲ್ ಚಟುವಟಿಕೆಗಳಿಂದ ದೂರಾಗಿದ್ದ ಮಾಜಿ ನಕ್ಸಲರಿಗೆ ಉತ್ತಮ ಜೀವನ, ಉದ್ಯೋಗ ಅವಕಾಶಗಳ ಭರವಸೆ, ಆರ್ಥಿಕ ನೆರವುಗಳನ್ನು ನೀಡಲಾಗಿತ್ತು. ಈ ಮಾಜಿ ನಕ್ಸಲರು ಮುಖ್ಯವಾಹಿನಿಗೆ ಬರಲು ನಿರ್ಧರಿಸುತ್ತಿದ್ದಂತೆಯೇ ಕೆಪಿಟಿಸಿಎಲ್ ಸೋಲಾರ್ ಪಾರ್ಕ್ ಯೋಜನೆಗೆ ನಿರ್ಧರಿಸಿತು.

ಸೋಲಾರ್ ಪ್ಯಾನಲ್ ಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಹಲವು ಉದ್ಯೋಗಗಳನ್ನು ನೀಡುವ ಭರವಸೆಯನ್ನು ನೀಡಲಾಗಿತ್ತು. ಆದರೆ ಈವರೆಗೂ ಏನೂ ಸಿಕ್ಕಿಲ್ಲ. ನಾವು ಎಸ್ ಸಿ ಸಮುದಾಯಕ್ಕೆ ಸೇರಿದವರಾಗಿದ್ದೇವೆ ಅದರ ಜೊತೆಗೆ ನಕ್ಸಲರೆಂಬ ಹಣೆಪಟ್ಟಿ ಕಟ್ಟಲಾಗಿದೆ ಎನ್ನುತಾರೆ ವಲ್ಲೂರ್ ಗ್ರಾಮದ ಮುತ್ಯಾಲಪ್ಪ ಅಲಿಯಾಸ್ ವೆಂಕಟೇಶ್. ಈತ 1998 ರಿಂದಲೂ ನಕ್ಸಲ್ ಚಳುವಳಿಯಲ್ಲಿ ತೊಡಗಿದ್ದ ವ್ಯಕ್ತಿ. 2005 ರಲ್ಲಿ ಈತ ಬಂಧನಕ್ಕೊಳಗಾಗಿ ರಾಜ್ಯದ ವಿವಿಧ ಭಾಗದ ಜೈಲುಗಳಲ್ಲಿ 6 ವರೆ ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದ. 

2005 ರಲ್ಲಿ 300 ನಕ್ಸಲರು ಹಾಗೂ 50 ಮಹಿಳೆಯರು ಕೆಎಸ್ ಆರ್ ಪಿ ಕ್ಯಾಂಪ್ ಮೇಲೆ ಹ್ಯಾಂಡ್ ಗ್ರೆನೇಡ್ ಗಳಿಂದ ದಾಳಿ ನಡೆಸಿದ್ದ ಘಟನೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ನಾಗರಾಜ ಅಲಿಯಾಸ್ ಮನೋಹರ ತಮ್ಮ ತಂದೆಯ 2 ಎಕರೆ ಭೂಮಿಯ ಭಾಗವಾಗದೇ ಇರಲು ನಿರ್ಧರಿಸಿದ್ದರು, ಈ ನಡುವೆ ಹಲವರು ತಮ್ಮ ಭೂಮಿಯನ್ನು ನೀಡಿ ಸೋಲಾರ್ ಪಾರ್ಕ್ ಗಳಲ್ಲಿ ಉದ್ಯೋಗಿಗಳಾಗುವ ಕನಸು ಕಾಣುತ್ತಿದ್ದರು. 

ವೆಂಕಟಮ್ಮನಹಳ್ಳಿಯ ಸಣ್ಣ ಕುಗ್ರಾಮದಲ್ಲಿ ಅಂಗಡಿ ನಡೆಸುವ ಈತ "ನಾನು ಬಾಂಬ್ ಬ್ಲಾಸ್ಟ್ ಪ್ರಕರಣದ ನಂ.1 ಆರೋಪಿಯಾಗಿದ್ದೆ ಎನ್ನುತ್ತಾರೆ".

ನಾನು ಬಂಧನಕ್ಕೊಳಗಾದಾಗ ನನಗೆ 20 ವರ್ಷಗಳು. ಆಗ ನನ್ನ ಹೆಸರಿನ ಮೇಲೆ ಬಹುಮಾನವನ್ನು ಘೋಷಿಸಲಾಗಿತ್ತು. 8 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಜರ್ನಲಿಸಂ ನಲ್ಲಿ ಎರಡನೇ ವರ್ಷವನ್ನು ಪೂರ್ಣಗೊಳಿಸಿದೆ. 2012 ರಲ್ಲಿ ನಾನು ಬಿಡುಗಡೆಯಾದ ಬಳಿಕ ನನ್ನ ಸಿದ್ಧಾಂತಗಳಿಗೆ ನ್ಯಾಯ ಒದಗಿಸಬಲ್ಲೆ ಎಂದುಕೊಂಡಿದ್ದೆ. ಉತ್ತಮ ಗುಣಮಟ್ಟದ ಜೀವನವೂ ಸೇರಿ ಹಲವಾರು ಭರವಸೆಗಳನ್ನು ನೀಡಲಾಗಿತ್ತು ಅದರೆ ಅದ್ಯಾವುದೂ ಈಡೇರಿಲ್ಲ" ಎಂದು ಮಾಜಿ ನಕ್ಸಲರ ಈಗಿನ ಕಥೆಯನ್ನು ಬಿಚ್ಚಿಡುತ್ತಾರೆ ನಾಗರಾಜ. 

ಸರ್ಕಾರ ನಮಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ನಕ್ಸಲ್ ಚಳುವಳಿಯಲ್ಲಿ ನಮ್ಮ ಉಪಸ್ಥಿತಿ ಅಗತ್ಯವಿದ್ದರೆ ನಾನು ಖಂಡಿತ ಮತ್ತೆ ಹೋಗುತ್ತೇನೆ, ಸರ್ಕಾರದಿಂದ ನೀಡಿದ್ದ ಭರವಸೆ ಈಡೇರದೇ ಇರುವುದರಿಂದ ಹಲವು ಮಾಜಿ ನಕ್ಸಲರು ಇದೇ ರೀತಿ ಯೋಚಿಸುತ್ತಿದ್ದಾರೆ ಎನ್ನುತ್ತಾರೆ ನಾಗರಾಜ. 

ಚಳುವಳಿಯಲ್ಲಿದ್ದದ್ದಕ್ಕೆ ಸಾಕಷ್ಟು ಸಂಕಷ್ಟ ಎದುರಿಸಿದ್ದೇವೆ ಆದರೂ ಸಿದ್ಧಾಂತವನ್ನು ಬಿಟ್ಟುಕೊಡುವುದಕ್ಕೆ ಸಿದ್ಧರಿಲ್ಲ ಹಲವರು ವ್ಯವಸ್ಥೆಯಲ್ಲಿದ್ದುಕೊಂಡೇ ವ್ಯವಸ್ಥೆ ಉತ್ತಮಗೊಳ್ಳಲು ಹೋರಾಡುತ್ತಿದ್ದಾರೆ. ಹಲವರು ಪಂಚಾಯಿತಿ ಸದಸ್ಯರಾಗಿದ್ದಾರೆ ಯೂನಿಯನ್ ಗಳನ್ನು ಕಟ್ಟಿದ್ದಾರೆ. ಆದರೆ ಯಾವುದೂ ಸರಿಯಾಗುತ್ತಿಲ್ಲ. ನಮ್ಮ ರಾಜಕಾರಣಿಗಳು ಬದಲಾಗಿಲ್ಲ. ಸರ್ಕಾರಗಳು ಬದಲಾಗಿಲ್ಲ. ನಮಗೆ ಗೌರವ ನೀಡಿ ಗೌರವ ಪಡೆಯುವುದಕ್ಕೆ ಹೇಳಿಕೊಡಲಾಗಿದೆ. ಅಂತೆಯೇ ಯಾವಾಗ ಬಂಡೇಳಬೇಕು ಎಂಬುದೂ ತಿಳಿದಿದೆ. ಪರಿಸ್ಥಿತಿ ಅನಿವಾರ್ಯವಾದಲ್ಲಿ ಅದನ್ನೂ ಮಾಡುತ್ತೇವೆ ನಮ್ಮ ಮಕ್ಕಳಿಗೂ ಅದನ್ನೇ ಕಲಿಸುತ್ತೇವೆ ಎನ್ನುತ್ತಾರೆ ನಾಗರಾಜ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com