ನಾಡಹಬ್ಬ ದಸರಾ, ದುರ್ಗಾ ಪೂಜೆ: ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

ನಾಳೆಯಿಂದ ಹತ್ತು ದಿನಗಳ ಕಾಲ ನಾಡಹಬ್ಬ ದಸರಾ ಕಾರ್ಯಕ್ರಮ. ಎಲ್ಲೆಡೆ ದುರ್ಗಾ ದೇವಿಯ ಆರಾಧನೆ. ಈ ಸಂದರ್ಭದಲ್ಲಿ ಕೋವಿಡ್-19 ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಿ ಹಬ್ಬ ಆಚರಣೆ ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರವಾಸಿಗಳಿಗೆ ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಳೆಯಿಂದ ಹತ್ತು ದಿನಗಳ ಕಾಲ ನಾಡಹಬ್ಬ ದಸರಾ ಕಾರ್ಯಕ್ರಮ. ಎಲ್ಲೆಡೆ ದುರ್ಗಾ ದೇವಿಯ ಆರಾಧನೆ. ಈ ಸಂದರ್ಭದಲ್ಲಿ ಕೋವಿಡ್-19 ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಿ ಹಬ್ಬ ಆಚರಣೆ ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರವಾಸಿಗಳಿಗೆ ಎಚ್ಚರಿಕೆ ನೀಡಿದೆ.

ಮೂರ್ತಿಯ ಅಳತೆ: ಈ ಸಂಬಂಧ ಮಾರ್ಗಸೂಚಿಗಳನ್ನು ಬಿಬಿಎಂಪಿ ಪ್ರಕಟಿಸಿದ್ದು, ಅಕ್ಟೋಬರ್ 11ರಿಂದ 15ರವರೆಗೆ ಕೋವಿಡ್ ಮಾರ್ಗಸೂಚಿಯ ಪ್ರಕಾರ ದುರ್ಗಾ ಪೂಜೆಗಳನ್ನು ಆಚರಿಸಿ ಎಂದು ಹೇಳಲಾಗಿದೆ. ಮಾರ್ಗಸೂಚಿಯಂತೆ ನಗರದ ಯಾವುದೇ ಭಾಗದಲ್ಲಿ ನಗರವಾಸಿಗಳು 4 ಅಡಿಗಳಿಗಿಂತ ಹೆಚ್ಚು ಎತ್ತರದ ದುರ್ಗಾಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ. ಮೂರ್ತಿ ಸ್ಥಾಪನೆ ಮಾಡುವ ಮೊದಲು ಸುತ್ತಮುತ್ತ ಸ್ವಚ್ಛಗೊಳಿಸಬೇಕು, ಪ್ರತಿ ವಾರ್ಡ್ ಗೆ ಒಂದು ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಲು ಅನುಮತಿ, ಸರಳವಾಗಿ ಪ್ರಾರ್ಥನೆ, ಪೂಜೆಗಳಿಗೆ ಅವಕಾಶ.

ಪ್ರಾರ್ಥನೆ, ಪೂಜೆ, ಪ್ರಸಾದ: ಪ್ರಾರ್ಥನೆ ಸಲ್ಲಿಕೆ ವೇಳೆ 50ಕ್ಕಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ. ಪೂಜೆ-ಪುನಸ್ಕಾರದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪೂಜೆ ನಂತರ ಸಿಹಿ ತಿನಿಸು, ಹಣ್ಣುಗಳು, ಹೂವುಗಳ ವಿತರಣೆಗೆ ಅವಕಾಶವಿಲ್ಲ. 
ಭಕ್ತರ ದರ್ಶನ: ಒಂದು ಬಾರಿಗೆ 100ಕ್ಕಿಂತ ಹೆಚ್ಚು ಮಂದಿಗೆ ಪ್ರವೇಶಕ್ಕೆ ಅವಕಾಶವಿಲ್ಲ, ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಸ್ಥಳದಲ್ಲಿ ಜಮಾಯಿಸುವಂತಿಲ್ಲ.

ದೇವಿ ಮೂರ್ತಿ ವಿಸರ್ಜನೆ: ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಅಧಿಕ ಮಂದಿ ಸೇರುವುದಿಲ್ಲ, ಸಿಂಧೂರ ಖೇಲಾ ಎಂಬ ಆಟವನ್ನು ಹೆಚ್ಚು ಜನರು ಜಮಾಯಿಸಿ ಆಡುವಂತಿಲ್ಲ, 10 ಜನಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ, ಡಿಜೆ/ ಧಾಕ್/ಡ್ರಮ್ಸ್ ನ್ನು ವಿಸರ್ಜನೆ ವೇಳೆ ಬಳಸುವಂತಿಲ್ಲ. ಸಾರ್ವಜನಿಕ ಟ್ಯಾಂಕ್/ ವಿಸರ್ಜನೆ ಕೊಳದಲ್ಲಿ ಗುರುತಿಸಿ ವಲಯ ಜಂಟಿ ಆಯುಕ್ತರು ಮತ್ತು ಪೊಲೀಸರು ಅನುಮತಿ ನೀಡಬೇಕು.

ಸುರಕ್ಷತಾ ಕ್ರಮಗಳು: ಜನರು ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com