ಡಿಸೆಂಬರ್ ನಿಂದ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ: ಶಿಕ್ಷಣ ಇಲಾಖೆ ಪ್ರಾಯೋಗಿಕ ಅಧ್ಯಯನ
ಬೆಂಗಳೂರು: ರಾಜ್ಯಾದ್ಯಂತ ಮಧ್ಯಾಹ್ನ ಬಿಸಿಯೂಟದಲ್ಲಿ ಡಿಸೆಂಬರ್ ನಿಂದ ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ವಿತರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ನಾಳೆ ತಮಿಳು ನಾಡಿಗೆ ಭೇಟಿ ನೀಡಲಿದ್ದು, ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆಯನ್ನು ಸೇರಿಸಲು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವ ಕುರಿತು ಪ್ರಾಯೋಗಿಕ ಅಧ್ಯಯನ ನಡೆಸಲಿದೆ.
ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ರಾಜ್ಯ ಸರ್ಕಾರ, ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆಯನ್ನು ನೀಡುವ 46 ದಿನಗಳ ಪ್ರಾಯೋಗಿಕ ಅಧ್ಯಯನ ಮಾಡಲಾಗುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಯಾದಗಿರಿ, ರಾಯಚೂರು, ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವ ಬಗ್ಗೆ ಪ್ರಾಯೋಗಿಕ ಅಧ್ಯಯನ ನಡೆಸಲು ಮುಂದಾಗಿದೆ. ಸರ್ಕಾರ 14 ಲಕ್ಷದ 44 ಸಾವಿರದ 322 ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ವಿತರಿಸುವ ಯೋಜನೆಯಿದೆ.
ಸಾರ್ವಜನಿಕ ಸೂಚನಾ ಇಲಾಖೆ ದಸರಾ ರಜೆಯ ಬಳಿಕೆ ಮಧ್ಯಾಹ್ನ ಬಿಸಿಯೂಟವನ್ನು ಅಕ್ಟೋಬರ್ 21ರಿಂದ ಆರಂಭಿಸಲು ಯೋಜಿಸಿದ್ದು, ಮೊಟ್ಟೆಯನ್ನು ಡಿಸೆಂಬರ್ ನಿಂದ ನೀಡಲಾಗುತ್ತದೆ. ಡಿಸೆಂಬರ್ ನಿಂದ 46 ದಿನಗಳ ಕಾಲ ಏಳು ಜಿಲ್ಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟಕ್ಕೆ ಫೆಬ್ರವರಿಯವರೆಗೆ ಮೊಟ್ಟೆಯನ್ನು ನೀಡಲು ಮುಂದಾಗಿದ್ದೇವೆ ಎಂದು ಮಧ್ಯಾಹ್ನ ಬಿಸಿಯೂಟ ಯೋಜನೆಯ ಜಂಟಿ ನಿರ್ದೇಶಕ ಜಿ ನಾರಾಯಣ ಗೌಡ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಯೋಜನೆಗೆ 39.53 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವು ತನ್ನ ಫ್ಲೆಕ್ಸಿಫಂಡ್ ಘಟಕದ ಅಡಿಯಲ್ಲಿ ಭರಿಸುತ್ತದೆ. ಈ ತಂಡವು ಧಾರವಾಡ ಮತ್ತು ಗುಲ್ಬರ್ಗಾ ವಿಭಾಗಗಳನ್ನು ಪ್ರತಿನಿಧಿಸುವ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಅಧ್ಯಯನಕ್ಕೆ ಸೇರಿಸುತ್ತದೆ ಎಂದು ಹಿರಿಯ ಡಿಪಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊಟ್ಟೆ ತಿನ್ನದವರಿಗೆ ಬದಲಿ ಧಾನ್ಯ: ಈ ಮಧ್ಯೆ, ಇಲಾಖೆಯು ಮೊಟ್ಟೆ ಬದಲಿಗೆ ಸಸ್ಯಾಹಾರಿಗಳಿಗೆ ಪರ್ಯಾಯ ಪೌಷ್ಠಿಕ ಆಹಾರ ನೀಡಲು ಮುಂದಾಗುತ್ತಿದೆ. ಯಾವುದನ್ನು ನೀಡಬೇಕು ಎಂದು ನಾಳೆಯೊಳಗೆ ಉತ್ಪನ್ನವನ್ನು ಅಂತಿಮಗೊಳಿಸಲಾಗುವುದು. ಹೆಚ್ಚಾಗಿ ಹಾಲು, ಕ್ಯಾಲ್ಸಿಯಂ ಆಧಾರಿತ, ಧಾನ್ಯ, ರಾಗಿಯ ಆಹಾರ ನೀಡಲಾಗುವುದು ಎಂದು ಜಿ ನಾರಾಯಣ ಗೌಡ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ