'ಪವರ್' ಹೌಸ್ ಪಕ್ಕದಲ್ಲೇ ಪವರ್ ಫುಲ್ ಜನಗಳ ಜೊತೆ ಕೆಲಸ: ಪವರ್ ಲೆಸ್ ಪೀಪಲ್ಸ್ ಗಿಲ್ಲ ಮೂಲ ಸೌಕರ್ಯ!

'ಪವರ್' ಇರುವವರ ಮನೆಯಲ್ಲಿ ಕೆಲಸ ಮಾಡುವ ನೌಕರರ ಕಥೆ ಹೇಳತೀರದಂತಾಗಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ ಮತ್ತು ಅನುಗ್ರಹ ನಿವಾಸದಲ್ಲಿ ಕೆಲಸ ಮಾಡುವ ಸಿಬ್ಬಂದಿ ವಾಸಿಸುವ ಮನೆ ಹಾಳಾಗಿದೆ.
ಡಿ ಗ್ರೂಪ್ ನೌಕರರ ಕ್ವಾರ್ಟರ್ಸ್
ಡಿ ಗ್ರೂಪ್ ನೌಕರರ ಕ್ವಾರ್ಟರ್ಸ್

ಬೆಂಗಳೂರು: 'ಪವರ್' ಇರುವವರ ಮನೆಯಲ್ಲಿ ಕೆಲಸ ಮಾಡುವ ನೌಕರರ ಕಥೆ ಹೇಳತೀರದಂತಾಗಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ ಮತ್ತು ಅನುಗ್ರಹ ನಿವಾಸದಲ್ಲಿ ಕೆಲಸ ಮಾಡುವ ಸಿಬ್ಬಂದಿ ವಾಸಿಸುವ ಮನೆ ಹಾಳಾಗಿದೆ.

ಸೋರುವ ಮೇಲ್ಚಾವಣೆ, ಬಿರುಕು ಬಿಟ್ಟ ಬಾಗಿಲು ಮತ್ತು ಕಿಟಕಿ, ದುರಸ್ತಿಯಾಗದ ರಸ್ತೆ. ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ತಮ್ಮ ಮನೆಗಳ ರಿನೋವೇಷನ್ ಮತ್ತು ಪೀಠೋಪಕರಣಗಳಿಗಾಗಿ  ಲಕ್ಷಾಂತರ ರು ಹಣ ವ್ಯಯ ಮಾಡುತ್ತಾರೆ, ಆದರೆ ಅವರ ಮನೆಯಲ್ಲಿ ದುಡಿಯುವ ಡಿ ಗ್ರೂಪ್ ನೌಕರರು, ಚಾಲಕರು, ಅಡುಗೆ ಮಾಡುವವರು ಹಾಗೂ ವಾಚ್ ಮನ್ ಗಳು ವಾಸಿಸುವ ಮನೆಗಳಿಗೆ ಕನಿಷ್ಠ ಸೌಲಭ್ಯಗಳು ಇಲ್ಲ.

ಕುಮಾರ ಕೃಪ ರಸ್ತೆಯಲ್ಲಿ ಸುಮಾರು 2.5 ಎಕರೆ ಭೂಮಿಯಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿ ಮತ್ತಿತರ ಕೆಲಸ ಮಾಡುವ ನೌಕರರ ಸುಮಾರು 40 ಮನೆಗಳಿವೆ. ಈ ಕ್ವಾರ್ಟರ್ಸ್ 60 ವರ್ಷದ ಹಿಂದೆ ನಿರ್ಮಾಣವಾದಂತವು,  ಹಲವು ದಶಕಗಳಿಂದ ಸರಿಯಾದ ನಿರ್ವಹಣೆಯಿಲ್ಲದೇ ಹಾಳಾಗಿವೆ. ಒಳಚರಂಡಿ ಮತ್ತು ಮನೆ ಮುಂದೆ ಜಾರುವ ರಸ್ತೆಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ.

ಪವರ್ ಹೌಸ್ ಪಕ್ಕದಲ್ಲಿದ್ದರೂ ಯಾವವುದೇ ಪವರ್ ಇಲ್ಲದೇ ಸಿಬ್ಬಂದಿ ವಾಸಿಸುತ್ತಿದ್ದಾರೆ. ಈ ಪ್ರದೇಶಕ್ಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡ ಭೇಟಿ ನೀಡಿತ್ತು. ಮಳೆ ಬಂದಾಗ ಬಹುತೇಕ ಮನೆಗಳು ಸೋರುತ್ತವೆ ಮತ್ತು ಗೋಡೆಗಳ ಮೇಲೆ ಶಿಲೀಂಧ್ರ ಮತ್ತು ಗಿಡಗಳು ಬೆಳೆದು ನಿಂತಿವೆ. ಮಳೆ ಬಂದಾಗ, ನಾವು ಬಕೆಟ್ ಮತ್ತು ಪಾತ್ರೆಗಳನ್ನು ಮನೆಯೊಳಗೆ ಇಡುತ್ತೇವೆ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.  ವರ್ಷಗಳ ಹಿಂದೆ ಹಾಕಿದ ಕೊಳಚೆನೀರಿನ ಮಾರ್ಗಗಳು ಮುಚ್ಚಿಹೋಗಿದ್ದು ಚರಂಡಿ ತುಂಬಿ ಹರಿಯುತ್ತಿದೆ.

ನಾವು ಪವರ್‌ಹೌಸ್‌ಗಳಿಗೆ ಹತ್ತಿರದಲ್ಲಿದ್ದೇವೆ ಮತ್ತು ಶಕ್ತಿಯುತ ಜನರೊಂದಿಗೆ ಕೆಲಸ ಮಾಡುತ್ತೇವೆ, ಆದರೆ ನಾವು ತುಂಬಾ ಶಕ್ತಿಹೀನರಾಗಿದ್ದೇವೆ" ಎಂದು ಇನ್ನೊಬ್ಬ ನಿವಾಸಿ ಹೇಳಿದರು. ನೀರು ಮತ್ತು ಪವರ್ ಸರಬರಾಜು ಮಾತ್ರ ಚೆನ್ನಾಗಿದೆ, ಇದನ್ನು ಹೊರತು ಪಡಿಸಿದರೆ ಮೂಲಭೂತ ಸೌಕರ್ಯ ತೀರಾ ಕಳಪೆಯಾಗಿದೆ ಎಂದು ದೂರಿದ್ದಾರೆ.

ಬಾಲಬ್ರೂಯಿ ಅತಿಥಿಗೃಹದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನ ಕ್ಲಬ್ ಅನ್ನು ನಿರ್ಮಿಸಲು ಪ್ರಸ್ತಾಪಿಸಿದಾಗ, ಪ್ರತಿಭಟನೆಗಳು ನಡೆದವು. ಸರ್ಕಾರವು ಇಲ್ಲಿನ 2.5-ಎಕರೆ ಜಾಗದಲ್ಲಿ ಅಂದರೆ  ಗ್ರೂಪ್ ಡಿ ನೌಕರರು ತಂಗಿರುವ ಮುಂದಾಗಿತ್ತು. ಇತ್ತೀಚೆಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಕ್ಲಬ್ ಬಾಲಬ್ರೂಯಿ ಅತಿಥಿಗೃಹದಲ್ಲಿ ಬರಲಿದೆ ಎಂದು ಹೇಳಿರುವುದು ಪರಿಸರವಾದಿಗಳ ಪ್ರತಿಭಟನೆಗೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com