ಕಾರವಾರ: ರಾಸಾಯನಿಕ ತುಂಬಿದ್ದ ಲಾರಿ ಪಲ್ಟಿ, ಹೆದ್ದಾರಿಯಲ್ಲಿ ಹೊತ್ತಿಕೊಂಡ ಬೆಂಕಿ

ರಾಸಾಯನಿಕ ತುಂಬಿದ ಟ್ಯಾಂಕರ್ ಒಂದು ತಾಲ್ಲೂಕಿನ ಆರತಿಬೈಲ್ ಘಟ್ಟದ ತಿರುವಿನಲ್ಲಿ ಬುಧವಾರ ಮುಂಜಾನೆ ಮಗುಚಿ ಬಿದ್ದಿದೆ. ಇದರಿಂದ ಸೋರಿದ ಕೆಮಿಕಲ್ ಹಳ್ಳದಲ್ಲಿ ಹರಿದು ಬೆಂಕಿ ತಗುಲಿ ರೈತರ ತೋಟ ಗದ್ದೆಗಳಿಗೆ ಹಾನಿಯಾಗಿದೆ.
ಹೆದ್ದಾರಿಯಲ್ಲಿ ಹೊತ್ತಿಕೊಂಡ ಬೆಂಕಿ
ಹೆದ್ದಾರಿಯಲ್ಲಿ ಹೊತ್ತಿಕೊಂಡ ಬೆಂಕಿ

ಕಾರವಾರ:  ರಾಸಾಯನಿಕ ತುಂಬಿದ ಟ್ಯಾಂಕರ್ ಒಂದು ತಾಲ್ಲೂಕಿನ ಆರತಿಬೈಲ್ ಘಟ್ಟದ ತಿರುವಿನಲ್ಲಿ ಬುಧವಾರ ಮುಂಜಾನೆ ಮಗುಚಿ ಬಿದ್ದಿದೆ. ಇದರಿಂದ ಸೋರಿದ ಕೆಮಿಕಲ್ ಹಳ್ಳದಲ್ಲಿ ಹರಿದು ಬೆಂಕಿ ತಗುಲಿ ರೈತರ ತೋಟ ಗದ್ದೆಗಳಿಗೆ ಹಾನಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ- 63ರ ಆರ್ತಿಬೈಲ್ ಕ್ರಾಸ್‌ನ ಇಡಗುಂದಿ ಸಮೀಪ ಬೆಳ್ಳಂಬೆಳಿಗ್ಗೆ ಕೆಮಿಕಲ್ ತುಂಬಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಬೆಳಗ್ಗೆ 7.30 ರ ವೇಳೆಗೆ ಪಲ್ಟಿಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತು. ಮಂಗಳೂರಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಓಎನ್‌ಜಿಸಿ) ಪೆಟ್ರೋಕೆಮಿಕಲ್ಸ್ ವಿಭಾಗದಿಂದ ಬೆಂಜಿನ್ ಪೆಟ್ರೋಕೆಮಿಕಲ್ ಅನ್ನು ತುಂಬಿಕೊಂಡು ಗುಜರಾತ್ ರಾಜ್ಯದ ಅಹಮದಾಬಾದ್‌ಗೆ ಟ್ಯಾಂಕರ್ ತೆರಳುತ್ತಿತ್ತು.

ಆದರೆ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ- 63ರ ಆರ್ತಿಬೈಲ್ ಕ್ರಾಸ್‌ನ ಇಡಗುಂದಿ ಸಮೀಪ ಬೆಳ್ಳಂಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ. ಬೆಂಜಿನ್‌ನಲ್ಲಿ ಗ್ಯಾಸೋಲಿನ್ ಒಳಗೊಂಡಿತ್ತು ಬೆಂಜಿನ್‌ನಲ್ಲಿ ಗ್ಯಾಸೋಲಿನ್ (ಪೆಟ್ರೋಲ್) ಅನ್ನು ಒಳಗೊಂಡಿರುವ ಕಾರಣ ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿಯ ಪ್ರಮಾಣವು ತುಂಬಾ ದೊಡ್ಡದಾಗಿದ್ದು ಅದು ಘಾಟ್‌ಗಳಿಗೆ ಹೊಂದಿಕೊಂಡಿರುವ ಕಾಡಿಗೆ ಹರಡಿತು. ಮೂಲಗಳ ಪ್ರಕಾರ, ಬೆಂಕಿಯಿಂದಾಗಿ ಕನಿಷ್ಠ 2 ಕಿಮೀ ಹಸಿರು ಬನಕ್ಕೆ ಹಾನಿಯಾಗಿದೆ. ಬೆಂಕಿಯ ಕಾರಣ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

ಪೊಲೀಸರು ಹಾಗೂ ಅಗ್ನಿಶಾಮಕ  ಸಿಬ್ಬಂದಿ ಸ್ಥಳಕ್ಕೆ  ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆದರೆ ಅಷ್ಟರಲೇ ಟ್ಯಾಂಕರ್ ಬಹುತೇಕ ಬೆಂಕಿಗಾಹುತಿಯಾಗಿದೆ. ಈ ಅಗ್ನಿ ಅವಘಡದಿಂದ ಕಿಲೋಮೀಟರ್‌ಗಟ್ಟಲೇ ವಾಹನಗಳು  ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com