ಪದವೀಧರ ಮತ ಕ್ಷೇತ್ರ: ಮತ ಪಟ್ಟಿಯಲ್ಲಿ ಹೆಸರು ನೋಂದಣಿಗೆ ನ.6 ರವರೆಗೆ ಅವಕಾಶ

ರಾಜ್ಯ ವಿಧಾನ ಪರಿಷತ್ತಿನ ಕರ್ನಾಟಕ ವಾಯವ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ನವೆಂಬರ್ 6 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ರಾಜ್ಯ ವಿಧಾನ ಪರಿಷತ್ತಿನ ಕರ್ನಾಟಕ ವಾಯವ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ನವೆಂಬರ್ 6 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಅರ್ಹ ಮತದಾರರು ನಿಗದಿತ ನಮೂನೆ 18 ರಲ್ಲಿ ನವೆಂಬರ್ 6 ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಕರ್ನಾಟಕ ವಾಯವ್ಯ ಪದವೀಧರರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.

ಮತದಾರರ ನೋಂದಣಿ ನಿಯಮಗಳು 1960 ರ 31(4) ನೇ ನಿಯಮದ ಅನುಸಾರ ಕರ್ನಾಟಕ ವಾಯವ್ಯ ಪದವೀಧರರ ಮತಕ್ಷೇತ್ರದ ಮತದಾರರ ನೋಂದಣಿಗಾಗಿ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬ ವ್ಯಕ್ತಿಯು, ಮತದಾರರ ನೋಂದಣಿ ನಿಯಮಗಳು 1960 ಕ್ಕೆ ಲಗತ್ತಿಸಿರುವ ಮತ್ತು ಎರಡನೇ ಅನುಸೂಚಿಯಲ್ಲಿ ಪುನರುದ್ಧರಿಸಿರುವ ನಮೂನೆ 18ರಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿಗಳು ಅಥವಾ ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಅಥವಾ ನಿಯೋಜಿತ ಅಧಿಕಾರಿಗಳ ಕಚೇರಿಗೆ ಕಳುಹಿಸಬಹುದು. ಮೇಲ್ಕಂಡ ವಿವರಗಳು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಇವರ ವೆಬ್ ಸೈಟ್ ವಿಳಾಸ www.ceokarnataka.kar.nic.in ರಲ್ಲಿ ಸಹ ಲಭ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com