ತೇಜಸ್ವಿ ಸೂರ್ಯ ಅವರಿಗೆ ಬೆದರಿದ ಫ್ಯಾಬ್ ಇಂಡಿಯಾ: ವಿವಾದಾತ್ಮಕ 'ಜಶ್ನ್ ಇ ರಿವಾಜ್' ಜಾಹಿರಾತು ಹಿಂತೆಗೆತ
ಫ್ಯಾಬ್ ಇಂಡಿಯಾ ಸಂಸ್ಥೆ ಅಕ್ಟೋಬರ್ 9ರಂದು ದೀಪಾವಳಿ ಪ್ರಯುಕ್ತದ ಉಡುಗೆ ಸಂಗ್ರಹವನ್ನು ಜಶ್ನ್ ಇ ರಿವಾಜ್ ಹೆಸರಿನಡಿ ಪ್ರಕಟಿಸಿತ್ತು.
Published: 19th October 2021 08:09 AM | Last Updated: 19th October 2021 08:15 AM | A+A A-

ತೇಜಸ್ವಿ ಸೂರ್ಯ
ಬೆಂಗಳೂರು: ದೇಶದ ಹೆಸರಾಂತ ಸಾಂಪ್ರದಾಯಿಕ ವಸ್ತ್ರ ಬ್ರ್ಯಾಂಡ್ ಫ್ಯಾಬ್ ಇಂಡಿಯಾ ತನ್ನ ವಿವಾದಾತ್ಮಕ 'ಜಶ್ನ್ ಇ ರಿವಾಜ್' ಹಬ್ಬದ ಜಾಹಿರಾತನ್ನು ಹಿಂಪಡೆದುಕೊಂಡಿದೆ.
ಇದನ್ನೂ ಓದಿ: ಸಿಡಬ್ಲ್ಯೂಸಿ ಎಂದರೆ 'ಪರಿವಾರ ಬಚಾವೋ ಕಾರ್ಯ ಸಮಿತಿ': ಬಿಜೆಪಿ ಲೇವಡಿ
ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ದೀಪಾವಳಿ ಹಬ್ಬವನ್ನು 'ಜಶ್ನ್ ಇ ರಿವಾಜ್' ಎಂದು ಕರೆಯುವ ಮೂಲಕ ಸಂಸ್ಥೆ ಹಿಂದೂಯೇತರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುವುದಾಗಿ ಫ್ಯಾಬ್ ಇಂಡಿಯಾ ಸಂಸ್ಥೆಯನ್ನು ಟ್ವಿಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: ಅಂದಿನ ಬಜರಂಗದಳ ಕಾರ್ಯಕರ್ತ ಕೋಟಿ ರವಿ ಆಗಿದ್ದು ಹೇಗೆ? ಹಿಂದುತ್ವ ಜಪದಿಂದ ಇಷ್ಟೊಂದು ಆಸ್ತಿ ಸಂಪಾದಿಸಬಹುದೇ?
ಜಶ್ನ್ ಇ ರಿವಾಜ್ ಜಾಹೀರಾತಿನಲ್ಲಿ ರೂಪದರ್ಶಿಗಳು ದೀಪಾವಳಿ ಆಚರಣೆಯನ್ನು ಪ್ರತಿಬಿಂಬಿಸದೇ ಇರುವುದನ್ನು ತೇಜಸ್ವಿ ಪ್ರಶ್ನಿಸಿದ್ದರು. ಫ್ಯಾಬ್ ಇಂಡಿಯಾ ಸಂಸ್ಥೆ ಅಕ್ಟೋಬರ್ 9ರಂದು ದೀಪಾವಳಿ ಪ್ರಯುಕ್ತದ ಉಡುಗೆ ಸಂಗ್ರಹವನ್ನು ಜಶ್ನ್ ಇ ರಿವಾಜ್ ಹೆಸರಿನಡಿ ಪ್ರಕಟಿಸಿತ್ತು.
ಇದನ್ನೂ ಓದಿ: 'ಮನೆಮುರುಕ' ಸಿದ್ದರಾಮಯ್ಯನವರು ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಎಂದುಕೊಂಡಿದ್ದಾರೆ: ಬಿಜೆಪಿ ಸರಣಿ ಟ್ವೀಟ್ ವಾರ್
ತೇಜಸ್ವಿ ಸೂರ್ಯ ಅವರನ್ನು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಮೋಹನದಾಸ್ ಪೈ ಅವರು ಬೆಂಬಲಿಸಿದ್ದಾರೆ. ಫ್ಯಾಬ್ ಇಂಡಿಯಾ ವರ್ತನೆ ವಿರುದ್ಧ ಗ್ರಾಹಕರು ಖಂಡನೆ ವ್ಯಕ್ತಪಡಿಸಬೇಕು ಎಂದವರು ಹೇಳಿದ್ದಾರೆ. ಧಾರ್ಮಿಕ ಹಬ್ಬಗಳನ್ನು ಸಂಸ್ಥೆಗಳು ಗೌರವಿಸಬೇಕು. ತಮ್ಮ ಅನುಚಿತ ಉತ್ಪನ್ನಗಳ ಮಾರಾಟಕ್ಕಾಗಿ ಧಾರ್ಮಿಕ ಹಬ್ಬಗಳನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರವೃತ್ತಿ ನಿಲ್ಲಬೇಕು ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.