ಬೆಂಗಳೂರು: ರೈಲ್ವೇ ಹಳಿ ಮೇಲೆ ಮಲಗಿ ಆತ್ಯಹತ್ಯೆಗೆ ಯತ್ನಿಸಿದರೂ ಬದುಕುಳಿದ ಬಿಎಂಟಿಸಿ ಮಹಿಳಾ ನೌಕರೆ!

ಯಲಹಂಕದಲ್ಲಿ ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಬಿಎಂಟಿಸಿ ನೌಕರೆಯೊಬ್ಬರು, ರೈಲು ಹರಿದರೂ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿರುವ ಘಟನೆ ಮಂಗಳವಾರ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಯಲಹಂಕದಲ್ಲಿ ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಬಿಎಂಟಿಸಿ ನೌಕರೆಯೊಬ್ಬರು, ರೈಲು ಹರಿದರೂ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿರುವ ಘಟನೆ ಮಂಗಳವಾರ ನಡೆದಿದೆ. 

ಟೂಟಿಕೊರಿನ್-ಓಖಾ ಎಕ್ಸ್‌ಪ್ರೆಸ್ ಯಲಹಂಕದಿಂದ ರಾಜನಕುಂಟೆ ನಿಲ್ದಾಣದ ಕಡೆಗೆ ಚಲಿಸುತ್ತಿರುವಾಗ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. 31 ವರ್ಷದ ಮಹಿಳಾ ನೌಕರೆ ನಾಲ್ಕು ವರ್ಷದ ಮಗುವಿನ ತಾಯಿಯಾಗಿದ್ದು,  ಟ್ರ್ಯಾಕ್ ಗಳ ಮಧ್ಯೆ ಮಲಗಿದ್ದ ಪರಿಣಾಮ ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿದ್ದಾರೆ. 

ವರ್ಷಗಳ ಹಿಂದೆ ಪತಿ ಬಿಟ್ಟುಹೋದ ಪರಿಣಾಮ ಮಹಿಳೆ ಮಾನಸಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದರು. ಇದಷ್ಟೇ ಅಲ್ಲದೆ, ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿಯೂ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ತನ್ನ ಪಾಳಿಯ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಹೋದ್ಯೋಗಿಯೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ಎಲ್ಲಾ ಬೆಳವಣಿಗೆಗಳಿಂದ ನೊಂದಿದ್ದ ಅವರು ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಬಳಿಕ ಯಲಹಂಕದಲ್ಲಿ ರೈಲ್ವೆ ಹಳಿಗಳ ಮಧ್ಯೆ ಮಲಗಿದ್ದಾರೆ. ಈ ವೇಳೆ ರೈಲು ಬಂದಿದೆ. ಆದರೆ, ಹಳಿಗಳ ಮಧ್ಯೆ ಮಲಗಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲು ಮುಂದೆ ಸಾಗಿದ ಬಳಿಕ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ. 

ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಕಾನ್ಸ್ಟೇಬಲ್ ಆಶಿಶ್ ಕುಮಾರ್ ಅವರು ಸ್ಥಳೀಯರು ಹಾಗೂ ಮತ್ತೊಬ್ಬ ಪೇದೆಯ ನೆರವಿನೊಂದಿಗೆ ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆಗೆ ಭುಜಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com