ಸೌದಿ ಅರೇಬಿಯಾದಿಂದ ಕರ್ನಾಟಕ ತಲುಪಿದ ಮೃತದೇಹ: ಸಂಬಂಧಿಕರಿಂದ ಕೊಲೆ ಆರೋಪ

ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದ ಕರ್ನಾಟಕದ 34 ವರ್ಷದ ವ್ಯಕ್ತಿಯ ಮೃತದೇಹ ಮೂರು ವಾರಗಳ ನಂತರ ತವರು ಗ್ರಾಮಕ್ಕೆ ಆಗಮಿಸಿದೆ.
ಸಾದರ್ಭಿಕ ಚಿತ್ರ
ಸಾದರ್ಭಿಕ ಚಿತ್ರ

ವಿಜಯಪುರ: ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದ ಕರ್ನಾಟಕದ 34 ವರ್ಷದ ವ್ಯಕ್ತಿಯ ಮೃತದೇಹ ಮೂರು ವಾರಗಳ ನಂತರ ತವರು ಗ್ರಾಮಕ್ಕೆ ಆಗಮಿಸಿದೆ.

ಸಿಂಧಗಿಯ ಮಾಲಗಾನ್ ಗ್ರಾಮದ ಬಸವರಾಜ ನವಿ ಸೌದಿ ಅರೇಬಿಯಾದ ಕೃಷಿ ಭೂಮಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು, ಆಗಸ್ಟ್ 12 ರಂದು ತಾನು ವಾಸಿಸುತ್ತಿದ್ದ ಕೊಠಡಿಯಲ್ಲಿ ಬಸವರಾಜ್ ನೇಣಿಗೆ ಶರಣಾಗಿದ್ದರ ಎಂದು ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ವರದಿ ಮಾಡಿತ್ತು.

ಸೌದಿ ಅರೇಬಿಯಾದಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಾಥಮಿಕ ತನಿಖೆ ಪೂರ್ಣಗೊಂಡ ನಂತರ ಮೃತದೇಹವನ್ನು ತವರಿಗೆ ಕಳುಹಿಸಲಾಗಿದೆ. ಬಸವರಾಜ್ ಮೂವರು ಮಕ್ಕಳು ಪತ್ನಿಯನ್ನು ಅಗಲಿದ್ದಾರೆ.

ನಮ್ಮ ಇಡೀ ಕುಟುಂಬ ಆಘಾತದಲ್ಲಿದೆ.ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದನ್ನು ನಮಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಸವರಾಜ ಸಂಬಂಧಿ ಹನಮಂತ ನವಿ ಹೇಳಿದ್ದಾರೆ. 

ಆತನ ಅಂತ್ಯಕ್ರಿಯೆಗಾಗಿ ಶವಪೆಟ್ಟಿಗೆಯಿಂದ ಶವವನ್ನು ತೆರೆದಾಗ ಆತನ ದೇಹದಲ್ಲಿ ಹಲವಾರು ಗುರುತುಗಳು ಮತ್ತು ಗಾಯಗಳು ಕಂಡು ಬಂದಿದೆ. ಹೀಗಾಗಿ  ಇದು ಸಹಜ ಸಾವಿನ ಪ್ರಕರಣವಲ್ಲ, ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಬಸವರಾಜ್ ತನ್ನ ಪೋಷಕರು ಮತ್ತು ಪತ್ನಿ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸದಾ ಸಂಪರ್ಕದಲ್ಲಿದ್ದ. ಅವರು ಕುಟುಂಬದಲ್ಲಿ ಅಥವಾ ಸೌದಿ ಅರೇಬಿಯಾದಲ್ಲಿ  ಯಾವುದೇ ಹಣಕಾಸಿನ ಮತ್ತು ಯಾವುದೇ ಇತರ ಸಮಸ್ಯೆಗಳನ್ನು ಹೊಂದಿರಲಿಲ್ಲ.

ಸಾಯುವ ಮೂರು ದಿನ ಮುಂಚೆ ಕುಟುಂಬಸ್ಥರೊಂದಿಗೆ ಮಾತನಾಡಿದ್ದ. ಆಗಸ್ಟ್ 26 ರಂದು 1 ತಿಂಗಳು ರಜೆ ಮೇಲೆ ಊರಿಗೆ ಬರುವುದಾಗಿ ತಿಳಿಸಿದ್ದ. ಸರ್ಕಾರವು ನಮ್ಮ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರವನ್ನು ಪಡೆಯಲು ಸಹಾಯ ಮಾಡಬೇಕು ಏಕೆಂದರೆ ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡ ಮಹಿಳೆಗೆ ಮೂರು ಮಕ್ಕಳನ್ನು ಬೆಳೆಸುವುದು ಕಷ್ಟವಾಗುತ್ತದೆ "ಎಂದು ಹನಮಂತ ನವಿ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com