
ರೈತ ಮೃತಪಟ್ಟ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
ಬಳ್ಳಾರಿ: ಮೊಸಳೆ ದಾಳಿ ನಡೆಸಿ 38 ವರ್ಷದ ರೈತ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಕಳೆದ ಸಂಜೆ ಸಂಭವಿಸಿದೆ.
ಮೃತ ರೈತನನ್ನು ವೀರೇಶ್ ಕೆ ಎಂದು ಗುರುತಿಸಲಾಗಿದ್ದು ತುಂಗಭದ್ರ ನದಿ ದಾಟುವ ವೇಳೆ ಮೊಸಳೆ ದಾಳಿ ನಡೆಸಿ ಈ ದುರ್ಘಟನೆ ನಡೆದಿದೆ. ಮೊಸಳೆ ಬಾಯಿಯಿಂದ ಮೃತ ರೈತನನ್ನು ಪೊಲೀಸರು ಹೊರಗೆ ಎಳೆದಿದ್ದಾರೆ. ಆದರೆ ಅಷ್ಟರಲ್ಲೆ ಪ್ರಾಣಪಕ್ಷಿ ಹಾರಿಹೋಗಿತ್ತು.
ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯ ತುಂಗಭದ್ರ ನದಿಯಲ್ಲಿ ಈ ರೀತಿ ಮೊಸಳೆಯ ಬಾಯಿಗೆ ಸಿಲುಕಿ ಮೃತಪಟ್ಟ ಎರಡನೇ ಘಟನೆ ಇದಾಗಿದೆ.
A 38-years old farmer died in a crocodile attack while he was crossing Tungabhadra river in #Sirguppa of #Ballari on Saturday. Deceased identified Veeresh K @santwana99 @ramupatil_TNIE @KiranTNIE1 @XpressBengaluru @KannadaPrabha @NammaKalyana @BellaryNamma @Streets_ballari pic.twitter.com/ziMS6NiQfV
— Amit Upadhye (@Amitsen_TNIE) September 5, 2021