ವಿಜಯಪುರ, ಬಾಗಲಕೋಟೆಗಳಲ್ಲಿ ಕಡಿಮೆ ತೀವ್ರತೆಯ ಭೂಕಂಪನ

ವಿಜಯಪುರ, ಬಾಗಲಕೋಟೆಗಳಲ್ಲಿ ಸೆ.04 ರಂದು ಮಧ್ಯರಾತ್ರಿ ಕಡಿಮೆ ತೀವ್ರತೆಯ ಭೂಕಂಪನ ವರದಿಯಾಗಿದೆ. 
ವಿಜಯಪುರ, ಬಾಗಲಕೋಟೆಗಳಲ್ಲಿ ಕಡಿಮೆ ತೀವ್ರತೆಯ ಭೂಕಂಪನ
ವಿಜಯಪುರ, ಬಾಗಲಕೋಟೆಗಳಲ್ಲಿ ಕಡಿಮೆ ತೀವ್ರತೆಯ ಭೂಕಂಪನ

ಬೆಂಗಳೂರು: ವಿಜಯಪುರ, ಬಾಗಲಕೋಟೆಗಳಲ್ಲಿ ಸೆ.04 ರಂದು ಮಧ್ಯರಾತ್ರಿ ಕಡಿಮೆ ತೀವ್ರತೆಯ ಭೂಕಂಪನ ವರದಿಯಾಗಿದೆ. ಕರ್ನಾಟಕ ರಾಜ್ಯ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು ಕೊಲ್ಹಾಪುರ ಜಿಲ್ಲೆಯಲ್ಲಿ 3.9 ತೀವ್ರತೆ ದಾಖಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕಡಿಮೆ ತೀವ್ರತೆಯ ಕಂಪನ ಅನುಭವಕ್ಕೆ ಬಂದಿದೆ. 

ವಿಜಯಪುರ ನಗರ, ಬಸವನ ಬಾಗೇವಾಡಿ, ಟಿಕೊಟಾ, ಇಂಡಿ, ಸಿಂಧಗಿಯಲ್ಲಿನ ಜನರು ರಾತ್ರಿ 11:30 ಕ್ಕೆ ಕಂಪನವಾಗುತ್ತಿದ್ದಂತೆಯೇ ಮನೆಯಿಂದ ಹೊರಬರಲಾರಂಭಿಸಿದರು. ಆದರೆ ಯಾವುದೇ ಆಸ್ತಿ ಹಾನಿಯಾದ ಬಗ್ಗೆ ಮಾಹಿತಿ ಬಂದಿಲ್ಲ.

ಕೀರ್ತಿ ನಗರದ ನಿವಾಸಿ ಶೇಖರಾಜ್ ಪಾಟೀಲ್ ಈ ಬಗ್ಗೆ ಮಾತನಾಡಿದ್ದು, "ಆಗ ನಿದ್ದೆ ಮಾಡುವ ಸಮಯವಾಗಿತ್ತು, ಕಂಪನದ ಅನುಭವವಾಗುತ್ತಿದ್ದಂತೆಯೇ ಕುಟುಂಬ ಸದಸ್ಯರು ಮನೆಯಿಂದ ಹೊರಬರಲಾರಂಭಿಸಿದೆವು. ಅರ್ಧಗಂಟೆಯ ಅವಧಿಯಲ್ಲಿ 2 ಕಂಪನಗಳ ಅನುಭವವಾಗಿತ್ತು ಎಂದು ಹೇಳಿದ್ದಾರೆ. 

ಡಿ.ಸಿ ಸುನಿಲ್ ಕುಮಾರ್ ಮಾತನಾಡಿದ್ದು, "ವಿಪತ್ತು ನಿಗಾ ಕೇಂದ್ರ ಕಡಿಮೆ ತೀವ್ರತೆಯ ಕಂಪನ ವರದಿಯಾಗಿದೆ. ಜನತೆ ಆತಂಕ ಪಡುವ ಅಗತ್ಯವಿಲ್ಲ ಕೆಎಸ್ ಎನ್ ಡಿಎಂಸಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ" ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com