ವಾರ್ಡ್ ಗೊಂದೇ ಗಣಪತಿ; 4 ಅಡಿಗಿಂತ ಎತ್ತರವಿರಬಾರದು ಮೂರ್ತಿ; ಗಣೇಶ ವಿಸರ್ಜನೆ ಜವಾಬ್ದಾರಿ ಬಿಬಿಎಂಪಿಯದ್ದು!

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳೊಂದಿಗೆ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕಲ್ಪಿಸಿದೆ, ಇದರ ಜೊತೆಗೆ ಕೇವಲ ಐದು ದಿನಗಳು ಮಾತ್ರ ಆಚರಣೆಗೆ ಅನುಮತಿ ನೀಡಿದೆ.     
ಆರ್.ಅಶೋಕ್
ಆರ್.ಅಶೋಕ್
Updated on

ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳೊಂದಿಗೆ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕಲ್ಪಿಸಿದೆ, ಇದರ ಜೊತೆಗೆ ಕೇವಲ ಐದು ದಿನಗಳು ಮಾತ್ರ ಆಚರಣೆಗೆ ಅನುಮತಿ ನೀಡಿದೆ.     

ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜೆಗೊಂಡ ಮೂರ್ತಿಗಳ ವಿಸರ್ಜನೆಗೆ ಕೆರೆಗಳಲ್ಲಿ ಕಲ್ಯಾಣಿಗಳನ್ನು ನಿರ್ಮಿಸಲಿದ್ದೇವೆ. ಬೆಳಿಗ್ಗೆಯಿಂದ ರಾತ್ರಿ 9ರವರೆಗೆ ವಿಗ್ರಹ ವಿಸರ್ಜನೆಗೆ ಅವಕಾಶ ಕಲ್ಪಿಸಲಿದ್ದೇವೆ ಎಂದು ಕಂದಾಯ ಸಚಿವ ಆರ್, ಅಶೋಕ ಹೇಳಿದ್ದಾರೆ.

ಸಮಿತಿಯವರು ಮೂರ್ತಿಗಳನ್ನು ಕಲ್ಯಾಣಿ ಬಳಿಯ ಟೇಬಲ್‌ನಲ್ಲಿ ಇಟ್ಟು ಪೂಜೆ ಮುಗಿಸಿ ಹೊರಡಬೇಕು. ವಿಗ್ರಹ ವಿಸರ್ಜನೆಗಾಗಿ ಈಜುಗಾರರನ್ನು ನೇಮಿಸಲಾಗುತ್ತದೆ’ ಎಂದರು. ಗಣೇಶ ಚತುರ್ಥಿ ಕಳೆದ ಐದು ದಿನಗಳ ಬಳಿಕ ಕಲ್ಯಾಣಿಗಳಲ್ಲಿ ವಿಗ್ರಹ ವಿಸರ್ಜನೆಗೆ ಅವಕಾಶವಿಲ್ಲ. ಎಸಿಪಿ ದರ್ಜೆಯ ಪೊಲೀಸ್‌ ಅಧಿಕಾರಿ ಹಾಗೂ ಪಾಲಿಕೆಯ ಎಇಇ ವಿಗ್ರಹ ವಿಸರ್ಜನೆ ಕಾರ್ಯದ ವೇಳೆ ಕೋವಿಡ್‌ ನಿಯಂತ್ರಣ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲಿದ್ದಾರೆ’ ಎಂದರು.

ಗಣೇಶ ವಿಗ್ರಹ ಪ್ರತಿಷ್ಠಾಪಿಸಿದ ಕಡೆ ಕೋವಿಡ್‌ ಲಸಿಕೆ ಅಭಿಯಾನವನ್ನೂ ನಡೆಸಲಿದ್ದೇವೆ. ಸಮಿತಿಯವರಿಗೆ ಲಸಿಕೆ ಹಾಕಿಸುತ್ತೇವೆ. ಸೋಂಕು ನಿವಾರಕ ಸಿಂಪಡಣೆಗೆ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು. ‘ಮನೆಯಲ್ಲಿ ಪೂಜಿಸುವ ಗಣೇಶ ವಿಗ್ರಹಗಳ ವಿಸರ್ಜನೆಗೆ ಸಂಚಾರ ತೊಟ್ಟಿಯ ವ್ಯವಸ್ಥೆ ಕಲ್ಪಿಸಲಿದ್ದೇವೆ. ವಾಹನದವರು ಧ್ವನಿವರ್ಧಕದಲ್ಲಿ ಘೋಷಣೆ ಮಾಡಲಿದ್ದಾರೆ. ಜನರು ಅಲ್ಲಿಗೆ ತೆರಳಿ ವಿಗ್ರಹ ವಿಸರ್ಜನೆ ಮಾಡಬೇಕು. ಮನೆಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡುವ ಶೇ 80 ಜನ ಗಣೇಶೋತ್ಸವದ ದಿನವೇ ವಿಗ್ರಹ ವಿಸರ್ಜನೆ ಮಾಡಿದರೆ ಬಹಳ ಒಳ್ಳೆಯದು’ ಎಂದರು.

ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಗಣೇಶೋತ್ಸವವನ್ನು ಆನ್‌ಲೈನ್‌ ಮೂಲಕ ವೀಕ್ಷಿಸಲು ವ್ಯವಸ್ಥೆ ಕಲ್ಪಿಸುವುದಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹೇಳಿವೆ. ಇದಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲಿ ಪೂಜೆ ವೇಳೆ 20ಕ್ಕಿಂತ ಹೆಚ್ಚು ಜನ ಗುಂಪುಗೂಡುವುದಿಲ್ಲ’ ಎಂದು ಸಚಿವರು ತಿಳಿಸಿದರು.

‘ಮನೆಯಲ್ಲಿ ಗಣೇಶ ಮೂರ್ತಿಯನ್ನು ವರ್ಷಪೂರ್ತಿ ಪೂಜಿಸಬಹುದು. ಆದರೆ, ಅದನ್ನು ಮನೆಯಲ್ಲೇ ವಿಸರ್ಜನೆ ಮಾಡಬೇಕು’ ಎಂದರು. ‘ವಾರ್ಡ್‌ಗೊಂದೇ ಗಣೇಶ– ಅಧಿಕಾರಿಗಳ ವಿವೇಚನೆಗೆ’ ‘ಕೋವಿಡ್‌ ಇರುವುದರಿಂದ ಆದಷ್ಟು ಕಡಿಮೆ ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಿಸಬೇಕು ಎಂಬುದು ನಮ್ಮ ಆಶಯ. ವಾರ್ಡ್‌ನಲ್ಲಿ ಒಂದೇ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವಂತೆ ನಿರ್ಬಂಧ ವಿಧಿಸುವ ಚಿಂತನೆ ಇದೆ. ಬಹುತೇಕ ಕಡೆ ಒಂದಕ್ಕಿಂತ ಹೆಚ್ಚು ಗಣಪತಿ ಇಡಲು ಬೇಡಿಕೆ ಬಂದಿಲ್ಲ. ಇಂತಹ ಬೇಡಿಕೆ ಬಂದರೆ ಸ್ಥಳೀಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ಪಾಲಿಕೆ ಎಇಇ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಅಶೋಕ ತಿಳಿಸಿದರು.

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಐದು ದಿನಗಳಿಗೆ ಸೀಮಿತಗೊಳಿಸಿದ್ದಕ್ಕೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ಯಾವ ಸಂಘಟನೆಯೂ ನಮ್ಮ ಬಳಿ ಈ ರೀತಿ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ನಿರ್ಬಂಧ ಉಲ್ಲಂಘಿಸಿದರೆ ಪೊಲೀಸ್‌ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ನಿಶ್ಚಿತ. ಜೀವ ಹಾಗೂ ಜೀವನಗಳೆರಡೂ ಪ್ರಾಮುಖ್ಯ. ಹಾಗಾಗಿ ನಿರ್ಬಂಧಗಳನ್ನು ಎಲ್ಲ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಪಾಲಿಸಬೇಕು. ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪೂಜಿಸಬೇಕು’ ಎಂದು ಕೋರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com