ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವರ್ಕ್ ಫ್ರಂ ಹೋಮ್ ಕೆಲಸದ ನೆಪದಲ್ಲಿ ವಂಚನೆ; 3.5 ಕೋಟಿ ರೂ. ವಶ

ಆನ್ ಲೈನ್ ನಲ್ಲಿ ಮನೆಯಲ್ಲಿಯೇ ನಿರ್ವಹಿಸುವ  (ವರ್ಕ್ ಫ್ರಂ ಹೋಮ್) ಕೆಲಸ ಕೊಡಿಸುವುದಾಗಿ ನಂಬಿಸಿ ದಾಖಲೆ ಪಡೆದು ಅವರದ್ದೇ ಹೆಸರಿನಲ್ಲಿ ಕಂಪನಿ ತೆರೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಇಬ್ಬರು ವಂಚಕರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಆನ್ ಲೈನ್ ನಲ್ಲಿ ಮನೆಯಲ್ಲಿಯೇ ನಿರ್ವಹಿಸುವ (ವರ್ಕ್ ಫ್ರಂ ಹೋಮ್) ಕೆಲಸ ಕೊಡಿಸುವುದಾಗಿ ನಂಬಿಸಿ ದಾಖಲೆ ಪಡೆದು ಅವರದ್ದೇ ಹೆಸರಿನಲ್ಲಿ ಕಂಪನಿ ತೆರೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಇಬ್ಬರು  ವಂಚಕರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಂದ 3.5 ಕೋಟಿ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡು ಮೂಲದ ಸಂಜೀವ್, ಸೆನ್ನಪ್ಪನ್ ಬಂಧಿತ ಆರೋಪಿಗಳಾಗಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಚೀನಾದ ವಂಚಕ ಹರ್ಮನ್ ಹಾಗೂ ತಮಿಳುನಾಡಿನ ಚಿತ್ರವೇಲು ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಉದ್ಯೋಗ ಖಾಲಿಯಿದೆ. ಮನೆಯಲ್ಲೇ ಕೂತು ಲಕ್ಷ ಲಕ್ಷ ಎಣಿಸುವ ಅದೃಷ್ಟ ನಿಮ್ಮದಾಗಲಿದೆ ಎಂದು ಆರೋಪಿಗಳು ಜಾಹೀರಾತು ನೀಡುತ್ತಿದ್ದರು. ನಿರುದ್ಯೋಗಿಗಳಿಂದ ಆಧಾರ್, ಪಾನ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆದು ನಿರುದ್ಯೋಗಿಗಳ ಹೆಸರಿನಲ್ಲೇ ಕಂಪನಿ ತೆರೆದು ನೂರಾರು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಗ್ರಾಹಕರು ಹಣ ನೀಡುವಂತೆ ಹೇಳಿದಾಗ ಕಂಪನಿಯನ್ನು ಬಂದ್ ಮಾಡುತ್ತಿದ್ದ ಬಂಧಿತ ಆರೋಪಿಗಳು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ, ಆರೋಪಿಗಳ ಹೆಸರಿನಲ್ಲಿದ್ದ 11 ಕಂಪನಿಯ ಖಾತೆಗಳಲ್ಲಿನ ಹಣವನ್ನು ವಶಕ್ಕೆ ಪಡೆಯಲಾಗಿದೆ.  ನಾಲ್ಕು ಸಾವಿರ ಮುಗ್ದ ಜನರ ಹೆಸರಿನಲ್ಲಿ ಚೀನಾ ವಂಚಕರು ಕಂಪನಿ ತೆರೆದಿದ್ದಾರೆ ಎನ್ನುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. 

Related Stories

No stories found.

Advertisement

X
Kannada Prabha
www.kannadaprabha.com