ಡೀಸೆಲ್ ಆರ್‌ಟಿಸಿ ಬಸ್‌ಗಳನ್ನು ಸಿಎನ್‌ಜಿಗೆ ಪರಿವರ್ತಿಸಲು ಯೋಜನೆ: ಸಚಿವ ಬಿ.ಶ್ರೀರಾಮುಲು

ಹೆಚ್ಚಿದ ತೈಲೆ ಬೆಲೆ ಹಾಗೂ ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರಾಜ್ಯ ಸಾರಿಗೆ ಬಸ್‌ಗಳನ್ನು ಹಂತ ಹಂತವಾಗಿ ಸಿಎನ್‌ಜಿಗೆ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ ಎಂದು  ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ಶ್ರೀರಾಮುಲು ಅವರು ಬುಧವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೆಚ್ಚಿದ ತೈಲೆ ಬೆಲೆ ಹಾಗೂ ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರಾಜ್ಯ ಸಾರಿಗೆ ಬಸ್‌ಗಳನ್ನು ಹಂತ ಹಂತವಾಗಿ ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ)ಗೆ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ ಎಂದು  ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ಶ್ರೀರಾಮುಲು ಅವರು ಬುಧವಾರ ಹೇಳಿದ್ದಾರೆ. 

ಸಿಎನ್‌ಜಿ ಉತ್ತೇಜನ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮ್ಮ ಸ್ವಂತ ವಾಹನಗಳನ್ನು ಬಳಕೆ ಮಾಡಲು ಆರಂಭಿಸಿದ್ದಾರೆ. ಇದರಿಂದ ವಾಯು ಮಾಲಿನ್ಯ ಹೆಚ್ಚಾಗಿದೆ. ಪರಿಸರ ಮಾಲಿನ್ಯವಷ್ಟೇ ಅಲ್ಲದೆ, ತೈಲ ಬೆಲೆಗಳು ಕೂಡ ಏರಿಕೆಯಾಗುತ್ತಿದೆ. ಸಾರಿಗೆ ಇಲಾಖೆ ಗಳಿಸಿದ ಲಾಭದ ಹೆಚ್ಚಿನ ಪಾಲನ್ನು ಇಂಧನಕ್ಕೆ ಖರ್ಚು ಮಾಡಲಾಗುತ್ತಿದೆ. ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರವು ಸಹಕಾರ ನೀಡಲು ಸಿದ್ಧವಿದೆ. ಬೆಂಗಳೂರಿನಲ್ಲಿ ಸಿಎನ್‌ಜಿ ಜಾಲವನ್ನು ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಶುದ್ಧ ಇಂಧನ ಬಳಕೆ ಮಾಡುವಂತೆ ಜನರನ್ನು ಉತ್ತೇಜಿಸುವಲ್ಲಿ ಈ ಯೋಜನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. 

ಯೋಜನೆ ಅಡಿಯಲ್ಲಿ, ಗೇಲ್ ಗ್ಯಾಸ್ ಲಿಮಿಟೆಡ್ ಕಂಪನಿಯು ರೂ. 14 ಸಾವಿರದಿಂದ ರೂ. 25 ಸಾವಿರದವರೆಗಿನ ಮೌಲ್ಯದ ಸಿಎನ್‌ಜಿ ಪ್ರೀಪೇಯ್ಡ್ ಕಾರ್ಡ್ಅನ್ನು ಸಿಎನ್‌ಜಿ ವಾಹನ ಮಾಲೀಕರಿಗೆ ನೀಡಲಿದೆ. ಈ ಕಾರ್ಡ್ ಬಳಸಿ ಬೆಂಗಳೂರಿನ ಯಾವುದೇ ಸಿಎನ್‌ಜಿ ಕೇಂದ್ರದಲ್ಲಿ ಗ್ಯಾಸ್ ಭರ್ತಿ ಮಾಡಿಸಬಹುದು. ದಿನದ ಗರಿಷ್ಠ ಬಳಕೆ ಮೊತ್ತದ ಮಿತಿಯು ರೂ. 150ರಿಂದ ರೂ.300ರವರೆಗೆ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com