2020ರ ಮಾರ್ಚ್ ನಿಂದ ಆಗಸ್ಟ್ 2021ರವರೆಗೆ ಕರ್ನಾಟಕದಲ್ಲಿ 9 ಲಕ್ಷ ಮಂದಿ ಸಾವು

ರಾಜ್ಯ ಸರ್ಕಾರ ನೀಡಿರುವ ಅಧಿಕೃತ ಕೋವಿಡ್ -19 ಸಾವಿನ ಸಂಖ್ಯೆಯನ್ನು ವಿರೋಧ ಪಕ್ಷಗಳು ವಿವಾದ ಮಾಡುತ್ತಲೇ ಇದೆ, ಇದರ ನಡುವೆ ಸೋಮವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ನೀಡಿರುವ ಅಧಿಕೃತ ಕೋವಿಡ್ -19 ಸಾವಿನ ಸಂಖ್ಯೆಯನ್ನು ವಿರೋಧ ಪಕ್ಷಗಳು ವಿವಾದ ಮಾಡುತ್ತಲೇ ಇದೆ,  ಇದರ ನಡುವೆ ಸೋಮವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. 

ಮಾರ್ಚ್ 1, 2020 ರಿಂದ ಕೋವಿಡ್ -19 ನಿಂದ 37,423 ಮಂದಿ ಸಾವನನ್ನಪ್ಪಿದ್ದಾರೆ. ಆ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 9,40,416 ಆಗಿದೆ. ಅದರಲ್ಲಿ ಕಳೆದ ಎಂಟು ತಿಂಗಳಲ್ಲಿ ರಾಜ್ಯದಲ್ಲಿ 4,78,082 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಕಳೆದ 2 ವರ್ಷಗಳಲ್ಲಿ  ರಾಜ್ಯದಲ್ಲಿ ಕೋವಿಡ್ ನಿಂದ ಉಂಟಾಗಿರುವ ಸಾವಿನ ಬಗಗ್ಗೆ ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಮಾರ್ಚ್ 1 2020 ರಿಂದ 31 ಡಿಸೆಂಬರ್ 2020 ರವರೆಗೆ 4,62,334 ಮಂದಿ ಸಾವನ್ನಪ್ಪಿದ್ದು, 1 ಜನವರಿ 2021 ರಿಂದ 31 ಆಗಸ್ಟ್31 ರವರೆಗೆ 4,78,082 ಜನ ಮರಣ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಕಚೇರಿಯ ದಾಖಲೆಗಳ ಪ್ರಕಾರ ಒಟ್ಟು ಸಾವಿನ ಸಂಖ್ಯೆ ಮತ್ತು ಪ್ರಸ್ತುತ ವರ್ಷದ ಸಂಖ್ಯೆಯನ್ನು ಸಮನ್ವಯಗೊಳಿಸಲಾಗುತ್ತಿದೆ. ಎಲ್ಲಾ ಕೋವಿಡ್ -19 ಸಾವುಗಳನ್ನು ದಾಖಲಿಸಲಾಗಿದೆ, ಮತ್ತು ಡೇಟಾವನ್ನು ಐಸಿಎಂಆರ್ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ ಎಂದು ಹೇಳಿದ ಅವರು, ಸಾವಿನ ಲೆಕ್ಕಪರಿಶೋಧನೆಯನ್ನು ನಿಯಮಿತವಾಗಿ ಮಾಡಲಾಗುತ್ತದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಮನೆಯಲ್ಲಿ  ಕೋವಿಡ್ ಸಾವಿನ ಅಂಕಿ ಅಂಶ ಪರಿಶೀಲನೆ ಸಂಬಂಧ
ಎಂಎಲ್‌ಸಿ ರಾಥೋಡ್ ಅವರ ಸಲಹೆಯನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

ಆರ್ ಟಿ ಪಿಸಿಆರ್  ಪಾಸಿಟಿವ್ ಫಲಿತಾಂಶ ಹೊಂದಿದ್ದ ರೋಗಿಗಳ ಸಾವನ್ನು ಮಾತ್ರ ಕೋವಿಡ್ ಸಾವು ಎಂದು ಸರ್ಕಾರ ಪರಿಗಣಿಸಿದೆ ಎಂದು ಪ್ರಕಾಶ್ ರಾಥೋಡ್ ಹೇಳಿದರು, ಆದರೆ ಕೋವಿಡ್ ತರಹದ ರೋಗಲಕ್ಷಣಗಳೊಂದಿಗೆ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಸಾವನ್ನಪ್ಪಿದ್ದಾರೆ, ಹಾಗೂ ಅನೇಕರು ಕೋವಿಡ್‌ಗೆ ತುತ್ತಾಗಿರುವುದು ಸಿಟಿ ಸ್ಕ್ಯಾನ ನಿಂದ ಕಂಡುಬಂದಿದೆ.

ಸರ್ಕಾರವು ವಿವರವಾದ ಮರಣ ಪರೀಕ್ಷೆಯನ್ನು ನಡೆಸಬೇಕು ಮತ್ತು ಕೋವಿಡ್‌ನಿಂದ ಉಂಟಾಗುವ ಎಲ್ಲಾ ಸಾವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸಚಿವರು ನೀಡಿದ ಸಂಖ್ಯೆಗಳ ಪ್ರಕಾರ, ಸೆಪ್ಟೆಂಬರ್ 2020 ರಲ್ಲಿ 67,444 ಜನರು ಸಾವನ್ನಪ್ಪಿದ್ದಾರೆ, ಮೇ 2021 ರಲ್ಲಿ 77,221 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಜೂನ್ 2021 ರಲ್ಲಿ 99,665 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com