ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಹುಲಿ ಅಭಯಾರಣ್ಯಗಳು!
ಚಾಮರಾಜನಗರವು ಮೂರು ಹುಲಿ ಅಭಯಾರಣ್ಯಗಳನ್ನು ಹೊಂದಿರುವ ದೇಶದ ಮೊದಲ ಜಿಲ್ಲೆಯಾಗಲಿದೆ. ಸುಮಾರು ಶೇಕಡಾ 51 ರಷ್ಟು ಅರಣ್ಯವನ್ನು ಹೊಂದಿರುವ ಇದು ಈಗಾಗಲೇ ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ವನ್ಯಜೀವಿ ಧಾಮಗಳನ್ನು ಹೊಂದಿದೆ. ಇದಕ್ಕೆ ಎಂಎಂ ಹಿಲ್ಸ್ ಟೈಗರ್ ಪ್ರಾಜೆಕ್ಟ್ ಸೇರ್ಪಡೆಯಾಗಿದೆ.
Published: 26th September 2021 08:39 AM | Last Updated: 26th September 2021 08:39 AM | A+A A-

ಸಾಂದರ್ಭಿಕ ಚಿತ್ರ
ಮೈಸೂರು: ಚಾಮರಾಜನಗರವು ಮೂರು ಹುಲಿ ಅಭಯಾರಣ್ಯಗಳನ್ನು ಹೊಂದಿರುವ ದೇಶದ ಮೊದಲ ಜಿಲ್ಲೆಯಾಗಲಿದೆ. ಸುಮಾರು ಶೇಕಡಾ 51 ರಷ್ಟು ಅರಣ್ಯವನ್ನು ಹೊಂದಿರುವ ಇದು ಈಗಾಗಲೇ ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ವನ್ಯಜೀವಿ ಧಾಮಗಳನ್ನು ಹೊಂದಿದೆ. ಇದಕ್ಕೆ ಎಂಎಂ ಹಿಲ್ಸ್ ಟೈಗರ್ ಪ್ರಾಜೆಕ್ಟ್ ಸೇರ್ಪಡೆಯಾಗಿದೆ. ಇದು 200 ಹುಲಿಗಳನ್ನು ಹೊಂದಿದೆ.
ಹೊಸ ಮೀಸಲು ಅರಣ್ಯ ಪ್ರದೇಶ ಗುಡ್ಡಗಾಡು ಪ್ರದೇಶ, ಶ್ರೀಮಂತ ಜೀವ ವೈವಿಧ್ಯತೆ ಮತ್ತು ಪಾಲಾರ್ ಮತ್ತು ಎಂಎಂ ಬೆಟ್ಟಗಳಲ್ಲಿ ಅಡೆತಡೆಯಿಲ್ಲದ ಪ್ರದೇಶಗಳನ್ನು ಹೊಂದಿದೆ. ಇದು 1,000 ಚದರ ಕಿಮೀ ಉದ್ದಕ್ಕೂ
ಹರಡಿಕೊಂಡಿದೆ.
ಇನ್ನು ಕೆಲ ದಿನಗಳಲ್ಲಿ ಸರ್ಕಾರ ಮಲೆ ಮಹದೇಶ್ವರ ಬೆಟ್ಟಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಿದ್ದು, ಹೆಚ್ಚುವರಿಯಾಗಿ 10 ಕೋಟಿ ರೂ. ಅನುದಾನವನ್ನು ನೀಡಲಿದೆ.ಇದನ್ನು ಸೋಲಾರ್ ಪಂಪ್ ಅಳವಡಿಕೆಗೆ ಬಳಸಿಕೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಡುಕುಂಡಲ ಹೇಳಿದ್ದಾರೆ.