ತೀವ್ರ ದರ ಕುಸಿತ: ಟ್ಯ್ರಾಕ್ಟರ್ ಗಳಲ್ಲಿ ತಂದು ರಸ್ತೆಗೆ ಹೂ ಸುರಿದ ಚಿಕ್ಕಬಳ್ಳಾಪುರ ರೈತರು!

ತೀವ್ರ ಬೆಲೆ ಕುಸಿತದ ಕಾರಣ ಗುಲಾಬಿ, ಸೇವಂತಿಗೆ, ಮಾರಿಗೋಲ್ಡ್ ಮತ್ತು ಸುಗಂಧರಾಜ ಸೇರಿದಂತೆ ಹೂವುಗಳನ್ನು ಬೆಳೆದ ರೈತರು ಭಾರೀ ನಷ್ಟ ಎದುರಿಸುತ್ತಿದ್ದಾರೆ. 
ಜಮೀನಿನಲ್ಲಿ ಹೂ ಸುರಿಯುತ್ತಿರುವ ರೈತ
ಜಮೀನಿನಲ್ಲಿ ಹೂ ಸುರಿಯುತ್ತಿರುವ ರೈತ

ಚಿಕ್ಕಬಳ್ಳಾಪುರ: ತೀವ್ರ ಬೆಲೆ ಕುಸಿತದ ಕಾರಣ ಗುಲಾಬಿ, ಸೇವಂತಿಗೆ, ಮಾರಿಗೋಲ್ಡ್ ಮತ್ತು ಸುಗಂಧರಾಜ ಸೇರಿದಂತೆ ಹೂವುಗಳನ್ನು ಬೆಳೆದ ರೈತರು ಭಾರೀ ನಷ್ಟ ಎದುರಿಸುತ್ತಿದ್ದಾರೆ. 

ಕಟಾವಿನ ಬೆಲೆಯನ್ನು ಸಹ ಪಡೆಯಲು ಸಾಧ್ಯವಾಗದ ಕಾರಣ, ಟ್ರ್ಯಾಕ್ಟರ್‌ ನಲ್ಲಿ  ಹೂವುಗಳನ್ನು ತಂದು ಮೈದಾನದಲ್ಲಿ ಸುರಿಯುತ್ತಿದ್ದಾರೆ. ತಿಂಗಳ ಹಿಂದೆ ಸತತ ಮಳೆಯಿಂದ ಹೂವಿನ ಬೆಳೆಗಳು ನಾನಾ ರೋಗಗಳಿಗೆ ತುತ್ತಾಗಿದ್ದವು. ಆದರೆ ಶ್ರಾವಣ ಮಾಸದಲ್ಲಿ ಸರಣಿ ಹಬ್ಬಗಳು ಬಂದ ಕಾರಣ ಹೂವಿಗೆ ಅಷ್ಟೋ ಇಷ್ಟೋ ಆದಾಯ ಸಿಕ್ಕಿತು. ಸದ್ಯ ಪಿತೃಪಕ್ಷ
ಆರಂಭದಿಂದ ಮಾರುಕಟ್ಟೆಯಲ್ಲಿ ಹೂವನ್ನು ಕೇಳುವವರೇ ಇಲ್ಲದಂತಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದ್ದರಿಂದ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಮಾರುಕಟ್ಟಯಲ್ಲಿ ಚಿಕ್ಕಬಳ್ಳಾಪುರ ರೈತರಿಗೆ ಹೆಚ್ಚು ಬೇಡಿಕೆಯಿಲ್ಲ. ಒಂದು ಎಕರೆಯಲ್ಲಿ ಸೇವಂತಿಗೆ ಹೂ ಬೆಳೆಯಲು ಸುಮಾರು 2 ರಿಂದ 3 ಲಕ್ಷ ರು ಹಣ ಖರ್ಚು ಮಾಡಬೇಕಾಗುತ್ತದೆ. ನಾಲ್ಕು ತಿಂಗಳಲ್ಲಿ ಬೆಳೆ ಬರುತ್ತದೆ. ಉತ್ತಮ ಮಳೆ ಮತ್ತು ನೀರಿನಿಂದ ಸುಮಾರು ಮೂರರಿಂದ ನಾಲ್ಕು ಟನ್ ಬೆಳೆ ಬರುತ್ತದೆ.ಇದನ್ನು 120 ರಿಂದ 130 ರು ಬೆಲೆ ಇರುತ್ತದೆ, ಇದರಿಂದ  ರೈತರಿಗೆ ಸುಮಾರು ಆರು ಲಕ್ಷ ರು ಆದಾಯ ಸಿಗುತ್ತದೆ, ಆದರೆ ಈ ಸೀಸನ್ ನಲ್ಲಿ ಕೆಜಿಗೆ 10 ರಿಂದ 15 ರು ಬೆಲೆ ಸಿಗುತ್ತಿದೆ. ಹೀಗಾಗಿ ರೈತರಿಗೆ ಕಟಾವು ಮಾಡುವ ಕೂಲಿ ಮತ್ತು  ಸಾಗಣಿಕೆ ವೆಚ್ಚವನ್ನು ಭರಿಸಲಾಗುತ್ತಿಲ್ಲ, ಹೀಗಾಗಿ ನೊಂದು ಹೂವನ್ನು ತಮ್ಮ ತೋಟಗಳಿಗೆ ಅಥವಾ ಮೈದಾನಕ್ಕೆ ಸುರಿಯಲಾಗುತ್ತಿದೆ ಎಂದು ಸೇವಂತಿಗೆ ಹೂವು ಬೆಳೆದ ರೈತ ಶ್ರೀನಿವಾಸ್ ಎಂಬುವರು ಹೇಳಿದ್ದಾರೆ.

927 ಹೆಕ್ಟೇರ್ ನಲ್ಲಿ ಗುಲಾಬಿ,  668 ಹೆಕ್ಟೇರ್ ನಲ್ಲಿ ಸೇವಂತಿಗೆ, ಮಾರಿಗೋಲ್ಡ್ 442 ಹೆಕ್ಟೇರ್ ನಲ್ಲಿ ಹಾಗೂ  ಗ್ಲಾಡಿಯೋಲಸ್ 37 ಹೆಕ್ಟೇರ್,  197 ಹೆಕ್ಟೇರ್ ನಲ್ಲಿ ಸುಗಂಧರಾಜ ಮತ್ತು ಕನಕಾಂಬರವನ್ನು 150 ಹೆಕ್ಟೇರ್ ನಲ್ಲಿ ಬೆಳೆಯಲಾಗುತ್ತಿದೆ. ಎಲ್ಲಾ ಹೂವುಗಳಿಗೆ ಹೋಲಿಸಿದರೆ, ರೈತರು ಕನಕಾಂಬರಕ್ಕೆ ಮಾತ್ರ ಉತ್ತಮ ಬೆಲೆ ಪಡೆಯುತ್ತಿದ್ದಾರೆ. ಸುಮಾರು 800 ರಿಂದ 1200 ರ ಬದಲು 400 ರೂ.ಗೆ ಮಾರಾಟವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಹೇಳಿದ್ದಾರೆ.

ಕಳೆದ ವರ್ಷಕ್ಕಿಂತ ಈ ವರ್ಷ ಬೆಳೆ ಹೆಚ್ಚಾಗಿದೆ, ಆದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲ. ಹೂವುಗಳನ್ನು ಕೂಡ ಒಂದು ದಿನ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com