ರಾಮನಗರ: ಉಪ ಲೋಕಾಯುಕ್ತರ ಭೇಟಿ ಎಪೆಕ್ಟ್; ಬಾಲಕಿಯರ ವಸತಿ ನಿಲಯಕ್ಕೆ ಉತ್ತಮ ಸೌಕರ್ಯಗಳ ಪೂರೈಕೆ

ರಾಜ್ಯ ರಾಜಧಾನಿಯಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ರೇಷ್ಮೆ ನಗರಿ ಖ್ಯಾತಿಯ ರಾಮನಗರದಲ್ಲಿನ ಸುಮಾರು 80 ವಿದ್ಯಾರ್ಥಿನಿಯರಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಇದೀಗ ಪರಿಸ್ಥಿತಿಸುಧಾರಿಸಿದ್ದು, ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು
Updated on

ರಾಮನಗರ: ರಾಜ್ಯ ರಾಜಧಾನಿಯಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ರೇಷ್ಮೆ ನಗರಿ ಖ್ಯಾತಿಯ ರಾಮನಗರದಲ್ಲಿನ ಸುಮಾರು 80 ವಿದ್ಯಾರ್ಥಿನಿಯರಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಇದೀಗ ಪರಿಸ್ಥಿತಿ ಸುಧಾರಿಸಿದ್ದು, ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮೆನು ಚಾರ್ಟ್ ಪ್ರಕಾರದಂತೆ ಗುಣಮಟ್ಟದ ರುಚಿಕರವಾದ ಆಹಾರ ನೀಡಲಾಗುತ್ತಿದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಆಹಾರ ಪೂರೈಸಲಾಗುತ್ತಿದೆ. ಫ್ಯಾನ್, ಕಾಟ್ ಗಳನ್ನು ರಿಪೇರಿ ಮಾಡಲಾಗಿದ್ದು, ಎಲ್ಲದಕ್ಕೂ ತಲೆದಿಂಬುಗಳು ಮತ್ತು ಬೆಡ್ ಶೀಟ್ ನೀಡಲಾಗಿದೆ. ನೆಟ್ ವರ್ಕ್ ನೊಂದಿಗೆ ಕಂಪ್ಯೂಟರ್, ವಿದ್ಯುತ್ ಪೂರೈಕೆ, ಸ್ಯಾನಿಟರಿ ನ್ಯಾಪ್ ಕಿನ್ಸ್ ಸೇರಿದಂತೆ ಬಾಲಕಿಯರಿಗೆ ಏನೆಲ್ಲಾ ಅವಶ್ಯಕತೆ ಇದೆಯೋ ಅವೆಲ್ಲವುಗಳನ್ನು ಒದಗಿಸಲಾಗಿದೆ. 

ಜುಲೈ ತಿಂಗಳಲ್ಲಿ ಈ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ವಿದ್ಯಾರ್ಥಿನಿಯರ ಕುಂದುಕೊರತೆ ಬಗೆಹರಿಸುವಂತೆ ಆದೇಶ ಹೊರಡಿಸಿದ್ದರು. ಇದೀಗ ಜಿಲ್ಲಾಡಳಿತ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡು ಹಾಸ್ಟೆಲ್‌ನ ಅಗತ್ಯತೆಗಳನ್ನು ಪೂರೈಸುವ ಮೂಲಕ ನ್ಯಾಯಮೂರ್ತಿ ಫಣೀಂದ್ರ ಅವರಿಗೆ ಅನುಪಾಲನಾ ವರದಿಯನ್ನು ಸಲ್ಲಿಸಿದೆ.

ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದರು. ಹುಳ್ಳು ಇರುವ ಅನ್ನ ನೀಡಲಾಗುತಿತ್ತು. ಇದನ್ನು ಅಲ್ಲಿನ ಸಿಬ್ಬಂದಿ ಗಮನಕ್ಕೆ ತಂದರೆ ಆಹಾರವನ್ನು ಎಸೆದು ಇಂದಿರಾ ಕ್ಯಾಂಟೀನ್ ಗಳಲ್ಲಿ ತಿನ್ನುವಂತೆ ಹೇಳಲಾಗುತಿತ್ತು. ಗ್ರೈಂಡರ್ ಇಲ್ಲ ಅಂತಾ ಇಡ್ಲಿ, ದೋಸೆ ಮಾಡುತ್ತಿರಲಿಲ್ಲ. ಈ ಬಗ್ಗೆ ಅನ್ನದಲ್ಲಿ ಹುಳ, ಪಿಲೋ, ಫ್ಯಾನ್ ಇಲ್ಲ ಎಂಬ ಶೀರ್ಷಿಕೆಯಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತು. 

ಉಪ ಲೋಕಾಯುಕ್ತರು ಸೂಚಿಸಿದ 23 ವಿಷಯಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸಲ್ಲಿಸಿರುವ ಅನುಪಾಲನಾ ವರದಿ ಪ್ರಕಾರ ಅಡುಗೆ ಮಾಡುವವರಿಗೆ ಪ್ರತಿ ತಿಂಗಳು 5ನೇ ತಾರೀಖಿನಂದು ವೇತನ ವಿತರಿಸಲು ಹಾಗೂ ಮೆನು ಚಾರ್ಟ್ ಪ್ರಕಾರ ಉಪಹಾರ, ಮಧ್ಯಾಹ್ನದ ಊಟ, ತಿಂಡಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.  ಗ್ಯಾಸ್ ಸ್ಟವ್ ಗಳು, ಗ್ರೈಂಡರ್‌ಗಳನ್ನು ಒದಗಿಸಲಾಗಿದೆ, ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಸಾಕಷ್ಟು ನೀರಿನ ಪೂರೈಕೆಯನ್ನು ಖಾತ್ರಿಪಡಿಸಲಾಗಿದೆ, ಫ್ಯಾನ್‌ಗಳು ಮತ್ತು ಬಲ್ಬ್‌ಗಳನ್ನು ಸರಿಪಡಿಸಲಾಗಿದೆ, ಸೊಳ್ಳೆ ಪರದೆಗಳನ್ನು ಒದಗಿಸಲಾಗಿದೆ, ಕಾಟ್‌ಗಳನ್ನು ಸರಿಪಡಿಸಲಾಗಿದೆ.

ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನೊಂದಿಗೆ ಎರಡು ಹೊಸ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ ಮತ್ತು ಅಸ್ತಿತ್ವದಲ್ಲಿರುವ ಎರಡು ಕಂಪ್ಯೂಟರ್‌ಗಳನ್ನು ಸರಿಪಡಿಸಲಾಗಿದೆ, ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ತಡೆರಹಿತ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಬಿಲ್‌ಗಳನ್ನು ಪಾವತಿಸಲಾಗಿದೆ ಮತ್ತು 5ಕೆವಿ ಯುಪಿಎಸ್  ವಿದ್ಯುತ್ ಬ್ಯಾಕಪ್ ಅನ್ನು ಸಹ ಒದಗಿಸಲಾಗಿದೆ. ಈ ಕ್ರಮಗಳಿಂದ ತೃಪ್ತರಾಗಿರುವ ನ್ಯಾಯಮೂರ್ತಿ ಫಣೀಂದ್ರ ಅವರು, ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲ್ಪಡುವ ಇತರ ಎಲ್ಲಾ ಹಾಸ್ಟೆಲ್‌ಗಳಿಗೆ ಈ ಸೌಲಭ್ಯಗಳನ್ನು ವಿಸ್ತರಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com