ಬೆಂಗಳೂರು: ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದು ಒತ್ತಾಯಿಸಿದ ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷಾಚರಣೆ ಹಾಗೂ ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವ ಭಾಗವಾಗಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ನಿನ್ನೆ ಬೆಂಗಳೂರಿನಲ್ಲಿರುವ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಭೇಟಿ ನೀಡಿ ಅವರನ್ನು ಗೌರವಿಸಿದರು.
ರಾಜ್ಯಪಾಲರು ಮೊದಲಿಗೆ ಜೆ.ಪಿ.ನಗರದಲ್ಲಿರುವ ಆರ್.ನಾರಾಯಣಪ್ಪ ಅವರ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನಂತರ ಶಂಕರನಾರಾಯಣ ರಾವ್ ಅವರನ್ನು ಬನಶಂಕರಿಯಲ್ಲಿರುವ ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ರಾಜ್ಯಪಾಲರು 101 ವರ್ಷದ ನಾಗಭೂಷಣ ರಾವ್ ಅವರನ್ನು ಮಲ್ಲೇಶ್ವರಂನಲ್ಲಿರುವ ಅವರ ಮನೆಯಲ್ಲಿ ಸನ್ಮಾನಿಸಿದರು. ನಾಗಭೂಷಣ್ ನಾಸ್ಟಾಲ್ಜಿಕ್ ಆಗಿ ತಿರುಗಿ ತಮ್ಮ ಸ್ವಾತಂತ್ರ್ಯ ಹೋರಾಟದ ದಿನಗಳ ಉಪಾಖ್ಯಾನಗಳನ್ನು ನೆನಪಿಸಿಕೊಂಡರು. ಅವರು ಬ್ರಿಟಿಷ್ ರಾಜ್ ವಿರುದ್ಧದ ಅಸಹಕಾರ ಚಳವಳಿಯ ಭಾಗವಾಗಿದ್ದರು. ರಸ್ತೆಗಳನ್ನು ಅಗೆದು, ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು, ಸ್ವಾತಂತ್ರ್ಯ ಚಳವಳಿಗೆ ಜನರನ್ನು ಪ್ರೋತ್ಸಾಹಿಸಿದ್ದರು.
ನಾಗಭೂಷಣ್ ರಾವ್ ಎರಡು ಬಾರಿ ಜೈಲುವಾಸ ಅನುಭವಿಸಿದರು -- 1942 ರಲ್ಲಿ ಒಮ್ಮೆ ಶಿವಮೊಗ್ಗ ಜೈಲಿನಲ್ಲಿ ಮತ್ತು ಮುಂದಿನ ಬಾರಿ 1945 ರಲ್ಲಿ ಮತ್ತು ಬೆಂಗಳೂರು ಜೈಲಿನಲ್ಲಿ ಬಂಧಿಯಾದರು. ರಾಜ್ಯಪಾಲರು ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಹೋಗಿ ಸನ್ಮಾನಿಸಿದ್ದು, ಇದುವರೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜಭವನಕ್ಕೆ ಆಹ್ವಾನಿಸಿ ಚಹಾಕೂಟ ಏರ್ಪಡಿಸುತ್ತಿದ್ದರು.
ನಮ್ಮ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬಗಳನ್ನು ಅವರ ನಿಸ್ವಾರ್ಥ ಸಮರ್ಪಣೆ ಮತ್ತು ತ್ಯಾಗಕ್ಕಾಗಿ ಗೌರವಿಸುವುದು ಮತ್ತು ಸೇವೆ ಮಾಡುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯ ಹೋರಾಟಗಾರರಿಲ್ಲದೆ ನಮ್ಮ ದೇಶದ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಆಚರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ರಾಜ್ಯಪಾಲರ ಭೇಟಿಯ ವೇಳೆ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮತ್ತು ಆರ್.ಅಶೋಕ, ಜಿಲ್ಲಾಧಿಕಾರಿ ಶ್ರೀನಿವಾಸ್ ಮತ್ತು ಇತರ ಅಧಿಕಾರಿಗಳು ಜೊತೆಗಿದ್ದರು.
Advertisement