ಬಿಎಂಟಿಸಿಯಿಂದ 921 ಎಲೆಕ್ಟ್ರಿಕ್ ಬಸ್‌ ತಯಾರಿಕೆಗೆ ಆರ್ಡರ್ ಪಡೆದ ಟಾಟಾ ಮೋಟಾರ್ಸ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (ಬಿಎಂಟಿಸಿ) 921 ಎಲೆಕ್ಟ್ರಿಕ್ ಬಸ್‌ಗಳ ತಯಾರಿಕೆಗೆ ಆರ್ಡರ್ ಪಡೆದಿರುವುದಾಗಿ ಟಾಟಾ ಮೋಟಾರ್ಸ್ ಗುರುವಾರ ಪ್ರಕಟಿಸಿದೆ. ಒಪ್ಪಂದದ ಪ್ರಕಾರ, ಕಂಪನಿಯು 12 ವರ್ಷಗಳವರೆಗೆ 12 ಮೀಟರ್ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸುತ್ತದೆ, ಕಾರ್ಯಾಚರಿಸುತ್ತದೆ ಮತ್ತು ನಿರ್ವಹಿಸಲಿದೆ ಎಂದು ತಿಳಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (ಬಿಎಂಟಿಸಿ) 921 ಎಲೆಕ್ಟ್ರಿಕ್ ಬಸ್‌ಗಳ ತಯಾರಿಕೆಗೆ ಆರ್ಡರ್ ಪಡೆದಿರುವುದಾಗಿ ಟಾಟಾ ಮೋಟಾರ್ಸ್ ಗುರುವಾರ ಪ್ರಕಟಿಸಿದೆ. ಒಪ್ಪಂದದ ಪ್ರಕಾರ, ಕಂಪನಿಯು 12 ವರ್ಷಗಳವರೆಗೆ 12 ಮೀಟರ್ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸುತ್ತದೆ, ಕಾರ್ಯಾಚರಿಸುತ್ತದೆ ಮತ್ತು ನಿರ್ವಹಿಸಲಿದೆ ಎಂದು ತಿಳಿಸಿದೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಮಾತನಾಡಿ, ಟಾಟಾ ಮೋಟಾರ್ಸ್‌ಗೆ 921 ಎಲೆಕ್ಟ್ರಿಕ್ ಬಸ್‌ಗಳ ಆರ್ಡ್‌ರ್ ನೀಡಿರುವುದಕ್ಕೆ ನಮಗೆ ಸಂತೋಷವಾಗಿದೆ. ಬೆಂಗಳೂರಿನ ಹೆಚ್ಚುತ್ತಿರುವ ಅಗತ್ಯಕ್ಕೆ ತಕ್ಕಂತೆ ಸ್ವಚ್ಛ, ಸುಸ್ಥಿರ ನಗರ ಸಮೂಹ ಸಾರಿಗೆಗೆ ಈ ಆರ್ಡರ್ ಅತ್ಯುನ್ನತವಾಗಿದೆ. ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆಗಾಗಿ ಗರಿಷ್ಠ ಪ್ರಯಾಣಿಕರನ್ನು ಆಕರ್ಷಿಸಲು ಆಧುನಿಕ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಬಿಎಂಟಿಸಿಗೆ ಸಂತೋಷವಾಗಿದೆ' ಎಂದಿದ್ದಾರೆ.

ಟಾಟಾ ಮೋಟಾರ್ಸ್ ಕಳೆದ ಒಂದು ತಿಂಗಳಲ್ಲಿ ಕ್ರಮವಾಗಿ ದೆಹಲಿ ಸಾರಿಗೆ ನಿಗಮದಿಂದ (ಡಿಟಿಸಿ) 1,500 ಎಲೆಕ್ಟ್ರಿಕ್ ಬಸ್‌ಗಳಿಗೆ ಮತ್ತು ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಯಿಂದ (ಡಬ್ಲ್ಯುಬಿಟಿಸಿ) 1,180 ಎಲೆಕ್ಟ್ರಿಕ್ ಬಸ್‌ಗಳಿಗೆ ಆರ್ಡರ್ ಪಡೆದಿದೆ.

ಟಾಟಾ ಮೋಟಾರ್ಸ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು, ಬ್ಯಾಟರಿ-ಎಲೆಕ್ಟ್ರಿಕ್, ಹೈಬ್ರಿಡ್, ಸಿಎನ್‌ಜಿ, ಎಲ್‌ಎನ್‌ಜಿ ಮತ್ತು ಹೈಡ್ರೋಜನ್ ಫ್ಯುಯೆಲ್ ಸೆಲ್ ತಂತ್ರಜ್ಞಾನವನ್ನು ಒಳಗೊಂಡಂತೆ ಪರ್ಯಾಯ ಇಂಧನ ತಂತ್ರಜ್ಞಾನದಿಂದ ಚಾಲಿತವಾದ ಹೊಸ ಪ್ರಯಾಣ ಪರಿಹಾರಗಳನ್ನು ರೂಪಿಸಲು ಸ್ಥಿರವಾಗಿ ಕೆಲಸ ಮಾಡುತ್ತಿದೆ.

ಇಲ್ಲಿಯವರೆಗೆ, ಟಾಟಾ ಮೋಟಾರ್ಸ್ ದೇಶದಾದ್ಯಂತ 715ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಿದೆ. ಇವುಗಳು ಒಟ್ಟು 40 ಮಿಲಿಯನ್ ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಿವೆ.

ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿನ ನಿವಾಸಿಗಳಿಗೆ ಪ್ರಯೋಜನಕಾರಿಯಾಗಲಿವೆ ಎಂಬ ವಿಶ್ವಾಸವಿದೆ ಎಂದು ಟಾಟಾ ಮೋಟಾರ್ಸ್‌ನ ಪ್ರಾಡಕ್ಟ್ ಲೈನ್ ಬಸ್‌ಗಳ ಉಪಾಧ್ಯಕ್ಷ ರೋಹಿತ್ ಶ್ರೀವಾಸ್ತವ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com