ಕೋಲಾರ: 10 ವರ್ಷಗಳ ಹಿಂದೆ ಬಗಿಷ್ಕಾರಕ್ಕೆ ಒಳಗಾಗಿದ್ದ ಕುಟುಂಬಕ್ಕೆ ಈಗಲೂ ಗ್ರಾಮಕ್ಕೆ ಪ್ರವೇಶವಿಲ್ಲ ಎನ್ನುವ ಕುರಿತಂತೆ ಭಾನುವಾರ (ಆ. 21) ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು kannadaprabha.com ಮಾಡಿದ್ದ ವರದಿ ಇದೀಗ ಫಲಪ್ರದವಾಗಿದ್ದು, ಸದ್ಯ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ.
ಹಾಲಕ್ಕಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಂಟ್ ವೆಂಕುಗೌಡ ಅವರ ಕುಟುಂಬವನ್ನು ಅದೇ ಸಮುದಾಯಕ್ಕೆ ಸೇರಿದ ಹಾರವಾಡ ಗ್ರಾಮದ ಮುಖಂಡ ಆನಂದ ಸಿದ್ದೇಗೌಡ ಎಂಬುವವರನ್ನು ಮದುವೆಗೆ ಕರೆಯಲಿಲ್ಲ ಎಂಬ ಕಾರಣಕ್ಕೆ 2012ರ ಫೆಬ್ರವರಿಯಲ್ಲಿ ಬಹಿಷ್ಕಾರ ಹಾಕಲಾಗಿತ್ತು. ಅಂಕೋಲಾದ ತಹಶೀಲ್ದಾರ್, ಆನಂದ ಸಿದ್ದೇಗೌಡ ಮತ್ತು ವೆಂಕುಗೌಡ ಕುಟುಂಬದ ನಡುವೆ ಮಧ್ಯಸ್ಥಿಕೆ ವಹಿಸಿ ಗ್ರಾಮಸ್ಥರು ಆ ಕುಟುಂಬವನ್ನು ಮರಳಿ ತಮ್ಮ ಸಮುದಾಯಕ್ಕೆ ಸ್ವಾಗತಿಸುವಂತೆ ಮಾಡಿದ್ದಾರೆ. ಈ ಬಂಟ್ ವೆಂಕುಗೌಡರ ಕುಟುಂಬದ ಸಾಮಾಜಿಕ ಬಹಿಷ್ಕಾರ ಇದೀಗ ಕೊನೆಗೊಂಡಿದೆ.
ಉತ್ತರ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರ ನಿರ್ದೇಶನದ ಮೇರೆಗೆ ತಹಶೀಲ್ದಾರ್ ಅವರು ಸಿದ್ದೇಗೌಡ ಮತ್ತು ಇತರ ಗ್ರಾಮಸ್ಥರು ಹಾಗೂ ಬಹಿಷ್ಕಾರಕ್ಕೊಳಗಾಗಿದ್ದವರ ಕುಟುಂಬ ಸದಸ್ಯರನ್ನು ಕರೆದು ಸಂಧಾನ ಮಾಡಿದ್ದಾರೆ. ತಕ್ಷಣವೇ ಬಹಿಷ್ಕಾರವನ್ನು ಕೊನೆಗೊಳಿಸುವಂತೆ ಗ್ರಾಮಸ್ಥರಿಗೆ ಕಟ್ಟುನಿಟ್ಟಾಗಿ ಹೇಳಿದ್ದರು. ಈಗ ಅದನ್ನು ಪರಿಹರಿಸಲಾಗಿದೆ' ಹೇಳಿದ್ದಾರೆ.
ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ ಅವರು, ಗ್ರಾಮಕ್ಕೆ ಆಗಾಗ್ಗೆ ಭೇಟಿ ನೀಡುವಂತೆ ಸ್ಥಳೀಯ ಅಧಿಕಾರಿಗಳು ಮತ್ತು ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ವೆಂಕುಗೌಡ ಕುಟುಂಬದ ಪ್ರಕಾರ, ಗ್ರಾಮದಲ್ಲಿ ದಿನಸಿ ಖರೀದಿಸಲು ಅವಕಾಶವಿರಲಿಲ್ಲ ಮತ್ತು ಕುಡಿಯುವ ನೀರನ್ನು ಸಹ ನಿರಾಕರಿಸಲಾಗಿತ್ತು. ವೆಂಕುಗೌಡ ಅವರು 2014ರಲ್ಲಿ ಮೃತಪಟ್ಟರೂ ಬಹಿಷ್ಕಾರ ಮುಂದುವರಿದಿತ್ತು ಎನ್ನುತ್ತಾರೆ.
Advertisement