ಆನೆ, ಶ್ವಾನ ಕಾರ್ಯಾಚರಣೆಯಿಂದಲೂ ಪತ್ತೆಯಾಗದ ಚಿರತೆ: ಬೆಳಗಾವಿಯ 22 ಶಾಲೆ-ಕಾಲೇಜುಗಳಿಗೆ ರಜೆ, ಆನ್ ಲೈನ್ ತರಗತಿ ನಡೆಸಲು ಜಿಲ್ಲಾಧಿಕಾರಿ ಸೂಚನೆ

ಬೆಳಗಾವಿಯ ಗಾಲ್ಫ್ ಮೈದಾನ ಬಳಿ ಚಿರತೆ ಕಾಣಿಸಿಕೊಂಡಿರುವುದು ಇದೀಗ ಸಾರ್ವಜನಿಕರು, ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಹರಸಾಹಸದ ಕೆಲಸವಾಗಿದೆ. ಚಿರತೆಯನ್ನು ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. 
ಗಜಗಳ ಜೊತೆಗೆ ಕಾರ್ಯಾಚರಣೆಗಿಳಿದ ಪೊಲೀಸ್ ಸಿಬ್ಬಂದಿ
ಗಜಗಳ ಜೊತೆಗೆ ಕಾರ್ಯಾಚರಣೆಗಿಳಿದ ಪೊಲೀಸ್ ಸಿಬ್ಬಂದಿ
Updated on: 

ಬೆಳಗಾವಿ:ಇಲ್ಲಿನ ಗಾಲ್ಫ್ ಮೈದಾನ ಬಳಿ ಚಿರತೆ ಕಾಣಿಸಿಕೊಂಡಿರುವುದು ಇದೀಗ ಸಾರ್ವಜನಿಕರು, ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಹರಸಾಹಸದ ಕೆಲಸವಾಗಿದೆ. ಚಿರತೆಯನ್ನು ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. 

ಈ ಮಧ್ಯೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೆಳಗಾವಿ ನಗರ ಮತ್ತು ಗ್ರಾಮಾಂತರ ಜಿಲ್ಲೆಯ 22 ಶಾಲಾ-ಕಾಲೇಜುಗಳಿಗೆ ಇಂದು ಕೂಡ ರಜೆ ಮುಂದುವರಿದಿದೆ. ಮಕ್ಕಳಿಗೆ ಆನ್ ಲೈನ್ ಪಾಠ ಮಾಡುವಂತೆ ಶಾಲೆ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಚಿರತೆ ಸೆರೆಗಾಗಿ ಆನೆಗಳಿಂದ ನಿನ್ನೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಆರಂಭಿಸಿದ್ದಾರೆ. ಚಿರತೆ ಪತ್ತೆಗೆ ಅರ್ಜುನ ಹಾಗೂ ಆಲಿ ಆನೆಗಳನ್ನು ಬಳಸಲಾಗುತ್ತಿದೆ. ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com