ಖಾಸಗಿ ಬಸ್‌ಗಳಿಂದ ಹೆಚ್ಚು ದರ ವಸೂಲಿ: ಸಾರಿಗೆ ಇಲಾಖೆ ನೆಪ ಮಾತ್ರದ ಕಾರ್ಯಾಚರಣೆ

ರಾಜ್ಯದ ವಿವಿಧ ಭಾಗಗಳ ಆರ್.ಟಿ.ಒ ಅಧಿಕಾರಿಗಳಿಂದ, ಹೆಚ್ಚು ದರ ವಿಧಿಸುತ್ತಿರುವ ಖಾಸಗಿ ಬಸ್ ತಪಾಸಣೆ ಹಾಗೂ ಕಾರ್ಯಾಚರಣೆ ಮಾಡುತ್ತಿರುವುದಾಗಿ ಸಾರಿಗೆ ಇಲಾಖೆ ಇಂದು ವಿವಿಧ ಬಸ್ಸುಗಳ ಮುಂದೆ ಸಿಬ್ಬಂದಿ ನಿಂತ ಚಿತ್ರಗಳನ್ನು ಟ್ವೀಟ್ ಮಾಡಿದೆ.
ಖಾಸಗಿ ಬಸ್ ಗಳು
ಖಾಸಗಿ ಬಸ್ ಗಳು

ಬೆಂಗಳೂರು: ರಾಜ್ಯದ ವಿವಿಧ ಭಾಗಗಳ ಆರ್.ಟಿ.ಒ ಅಧಿಕಾರಿಗಳಿಂದ, ಹೆಚ್ಚು ದರ ವಿಧಿಸುತ್ತಿರುವ ಖಾಸಗಿ ಬಸ್ ತಪಾಸಣೆ ಹಾಗೂ ಕಾರ್ಯಾಚರಣೆ ಮಾಡುತ್ತಿರುವುದಾಗಿ ಸಾರಿಗೆ ಇಲಾಖೆ ಇಂದು ವಿವಿಧ ಬಸ್ಸುಗಳ ಮುಂದೆ ಸಿಬ್ಬಂದಿ ನಿಂತ ಚಿತ್ರಗಳನ್ನು ಟ್ವೀಟ್ ಮಾಡಿದೆ.

ರಾಜ್ಯ ಸಾರಿಗೆ ಇಲಾಖೆಯ ಈ ಕ್ರಮ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದೆ. ಪಯಣಕ್ಕೆ ಸಿದ್ದವಾಗಿ ನಿಂತ ಬಸ್ಸಿನೊಳಗೆ ಬಂದು ತಪಾಸಣೆ ಮಾಡಿದರೆ ನಿಮಗೆ ಯಾವ ಸಾಕ್ಷಿ ಸಿಗುತ್ತದೆ. ಹೆಚ್ಚು ದರ ವಿಧಿಸುವುದನ್ನು ತಡೆಯುವ ಇಚ್ಛೆ ನಿಮಗಿದ್ದರೆ ನೆಪ ಮಾತ್ರದ ಕಾರ್ಯಾಚರಣೆ ಮಾಡುತ್ತಿರಲಿಲ್ಲ ಎಂದು ಹಲವಾರು ಸಾರ್ವಜನಿಕರು ಹೇಳಿದ್ದಾರೆ.

ಬಸ್ ತಪಾಸಣೆ ಮಾಡುವುದು ಹೈವೇ ಟೋಲ್ ಬಳಿ ಅಲ್ಲ, ಟಿಕೆಟ್ ಬುಕಿಂಗ್ ಸೆಂಟರ್ ಹತ್ತಿರ. ಸರಿ ಎಷ್ಟು ಟ್ರಾವೆಲ್ಸ್ ಅವರಿಗೆ ದಂಡ ವಿದಿಸಿದ್ದಿರಾ? ಎಂದು ಬ್ಲಾಕ್ ಕ್ರಿನೋ ಎಬುವವರು ಅದೇ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ

ಆಯಾ ಟ್ರಾವೆಲ್ ಕಂಪನಿಗಳ ಆನ್ಲೈನ್ ಬುಕಿಂಗ್ ವೆಬ್ಸೈಟ್ ನೋಡಿದರೆ ತಿಳಿಯುತ್ತದೆ. ಮಿಕ್ಕಿದ ದಿನಗಳಲ್ಲಿ ಖಾಲಿ ಇದ್ದರೂ ಬಸ್ ಓಡಿಸುತ್ತಾರೆ. ಅಷ್ಟೆಲ್ಲ ಕಾಳಜಿ ಇದ್ದರೆ ಶೇಕಡ 5ರಷ್ಟು ಜಿಎಸ್ ಟಿ ತೆಗೆಯಿರಿ, ಅಷ್ಟಕ್ಕೂ ನಮ್ಮಿಂದ ತೆಗೆದುಕೊಂಡ ಶೇ. 5ರಷ್ಟು ಜಿ.ಎಸ್.ಟಿ ಸರ್ಕಾರ ಸೇರುತ್ತೆ ಅಂತ ಯಾವ ಗ್ಯಾರಂಟಿ? ಎಂದು ಗೋಪಿಕೃಷ್ಣ ಹೆಗಡೆ ಎಂಬುವರು ಕೇಳಿದ್ದಾರೆ.

ಹಬ್ಬದ ಹಿಂದು ಮುಂದಿನ ದಿನಗಳಲ್ಲಿ ಖಾಸಗಿ ಬಸ್ಸುಗಳು ದರ ಹೆಚ್ಚಿಸುವುದು ಇದೇ ಮೊದಲೇನಲ್ಲ. ಮುಂಚಿನಿಂದಲೂ ನಡೆದುಕೊಂಡು ಬಂದಿದೆ. ಆಗೆಲ್ಲ ಕ್ರಮಕ್ಕೆ ಮುಂದಾಗದ ಸಾರಿಗೆ ಇಲಾಖೆಗೆ ಇದ್ದಕ್ಕಿದಂತೆ ಕಾಳಜಿ ಬಂದಿದ್ದು ಹೇಗೆ? ಅಧಿಕಾರಿಗಳಿಗೆ ಇದನ್ನೆಲ್ಲ ತಡೆಯುವ ಮನಸಿದ್ದರೆ ಖಾಸಗಿ ಸಂಸ್ಥೆಗಳ ವೆಬ್ ಸೈಟ್ ಗಳ ಪ್ರಿಂಟ್ ಔಟ್ ತೆಗೆದುಕೊಂಡು ಪ್ರಕರಣ ದಾಖಲಿಸಬಹುದು ಅಥವಾ ಪ್ರಯಾಣಿಕರಂತೆ ಖಾಸಗಿ ಬಸ್ಸುಗಳ ಆಫೀಸು, ಏಜೆಂಟರ ಆಫೀಸುಗಳ ಬಳಿ ಹೋಗಿ ಹೆಚ್ಚು ದರ ತೆತ್ತು ಟಿಕೇಟ್ ತೆಗೆದುಕೊಂಡು ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಬಹುದಿತ್ತು. ಅದ್ಯಾವುದನ್ನು ಮಾಡಿದಿರುವುದು ನೋಡಿದರೆ ಇದು ನೆಪ ಮಾತ್ರದ ಕಾರ್ಯಾಚರಣೆ ಎಂಬುದು ತಿಳಿಯುತ್ತದೆ ಎಂಬ ಆರೋಪಗಳು ವ್ಯಕ್ತವಾಗಿವೆ.

ಎಷ್ಟು ಖಾಸಗಿ ಸಾರಿಗೆ ಸಂಸ್ಥೆಗಳಿಗೆ ದಂಡ ವಿಧಿಸಿದ್ದೀರಿ ಅಥವಾ ಎಷ್ಟು ಬಸ್ ಸೀಜ್ ಮಾಡಿದ್ದಾರೆ ಅದರ ವಿವರಗಳನ್ನೂ ಹಂಚಿಕೊಳ್ಳಿ ಎಂಬ ಒತ್ತಾಯಗಳು ಕೇಳಿ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com