ಶಿಕಾರಿಪುರ: ನಿಷೇಧಿತ ಸಂಘಟನೆ 'ಸಿಎಫ್ಐ' ಸೇರುವಂತೆ ಗೋಡೆ ಬರಹ, ಪ್ರಕರಣ ದಾಖಲು

ನಿಷೇಧಿತ ಪಿಎಫ್ಐ ಸಂಘಟನೆಯ ಅಂಗ ಸಂಸ್ಥೆ ಸಿಎಫ್ಐ ಸೇರುವಂತೆ ಶಿಕಾರಿಪುರ ತಾಲೂಕಿನ ಶಿರಾಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಡೆ ಬರಹಗಳು ಕಾಣಿಸಿಕೊಂಡಿದ್ದು, ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಪೊಲೀಸ್ ಪೇದೆಯೊಬ್ಬರು ಗೋಡೆಬರಹವನ್ನು ಅಳಿಸುತ್ತಿರುವುದು.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಪೊಲೀಸ್ ಪೇದೆಯೊಬ್ಬರು ಗೋಡೆಬರಹವನ್ನು ಅಳಿಸುತ್ತಿರುವುದು.

ಶಿಕಾರಿಪುರ: ನಿಷೇಧಿತ ಪಿಎಫ್ಐ ಸಂಘಟನೆಯ ಅಂಗ ಸಂಸ್ಥೆ ಸಿಎಫ್ಐ ಸೇರುವಂತೆ ಶಿಕಾರಿಪುರ ತಾಲೂಕಿನ ಶಿರಾಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಡೆ ಬರಹಗಳು ಕಾಣಿಸಿಕೊಂಡಿದ್ದು, ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿರಾಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು, ಗೋಡೆಗಳು ಮತ್ತು ಬೋರ್ಡ್‌ಗಳ ಮೇಲೆ ಸಿಎಫ್ಐ'ಗೆ ಸೇರ್ಪಡೆಗೊಳ್ಳಿ ಎಂಬ ಬರಹಗಳು ಕಂಡುಬಂದಿದೆ.

ಪೊಲೀಸ್ ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ಈ ಗೋಡೆ ಬರಹವನ್ನು ಗಮನಿಸಿದ್ದು, ಅವರ ದೂರಿನ ಆಧಾರದ ಮೇಲೆ ಕರ್ನಾಟಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆಯಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಲಾಗಿದೆ. ಶಿರಾಳಕೊಪ್ಪದಲ್ಲಿ ಸಾಮರಸ್ಯ ಕದಡುವುದು ಗೋಡೆಬರಹದ ಉದ್ದೇಶ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಭಾನುವಾರ ಈ ಘಟನೆ ಬೆಳಕಿಗೆ ಬಂದಿದ್ದು, ಕಾರ್ಯಾಚರಣೆಗಿಳಿದ ಪೊಲೀಸ್ ಅಧಿಕಾರಿಗಳು, ಹಳೆ ಪೆಟ್ರೋಲ್ ಬಂಕ್ ಬಳಿಯ ಕಾಂಪೌಂಡ್ ಗೋಡೆ, ಭೋವಿ ಕಾಲೋನಿ ರಸ್ತೆಯಲ್ಲಿನ ವಿದ್ಯುತ್ ಕಂಬಗಳು ಹಾಗೂ ಶಿರಾಳಕೊಪ್ಪದ ಇತರ ಪ್ರದೇಶಗಳಲ್ಲಿ ಗೋಡೆ ಬರಹಗಳನ್ನು ಪತ್ತೆ ಮಾಡಿದರು.

ಬಿಲಾಲ್ ಮಸೀದಿ ಮತ್ತು ಫಾರೂಕ್ ಮಸೀದಿ ಬಳಿಯ ಮನೆಗಳ ಗೋಡೆಗಳ ಮೇಲೂ ಈ ಬರಹಗಳು ಕಂಡುಬಂದಿತ್ತು. ಬಳಿಕ ಪೊಲೀಸರು ಗೋಡೆ ಬರಹಗಳನ್ನು ಅಳಿಸುವ ಕೆಲಸ ಮಾಡಿದರು.

ಶಿರಾಳಕೊಪ್ಪದಲ್ಲಿ ಸಿಎಫ್‌ಐಗೆ ಬೆಂಬಲ ಸೂಚಿಸಿ ಬರಹ ಬರೆದಿರುವ ಹಾಗೂ ಬರಹ ಬರೆದವರನ್ನು ಬಂಧಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸ್ಥಳೀಯ ಶಾಸಕ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ.

ರಾತ್ರಿಯ ವೇಳೆ ಸಮಾಜ ಘಾತುಕ ಶಕ್ತಿಗಳು ಸಕ್ರಿಯವಾಗುತ್ತವೆ. ಅವರು ಜನರನ್ನು ಹತ್ಯೆ ಮಾಡುತ್ತಾರೆ, ಬಾಂಬ್‌ಗಳನ್ನು ಎಸೆಯುತ್ತಾರೆ ಮತ್ತು ಇಂತಹ ಗೋಡೆಬರಹಗಳನ್ನು ಬರೆಯುತ್ತಾರೆ. ಇಂತಹ ಸಮಾಜಘಾತುಕರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com