ರಾಜ್ಯದ ನಗರಗಳನ್ನು ಸದ್ಯದಲ್ಲಿಯೇ ಸಂಪರ್ಕಿಸಲಿವೆ ಇ-ಬಸ್ ಗಳು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಮಹತ್ವಾಕಾಂಕ್ಷೆಯ ಅಂತರ ನಗರ ಎಲೆಕ್ಟ್ರಿಕ್ ಬಸ್ ಸೇವೆಯನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲು ಸಿದ್ಧವಾಗಿದೆ. ಮೊದಲ ಬಸ್ ನ್ನು ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ಬಸ್ ತಯಾರಕ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಮುಂದಿನ ವಾರದ ಆರಂಭದಲ್ಲಿ ತಲುಪಿಸುವ ನಿರೀಕ್ಷೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಮಹತ್ವಾಕಾಂಕ್ಷೆಯ ಅಂತರ ನಗರ ಎಲೆಕ್ಟ್ರಿಕ್ ಬಸ್ ಸೇವೆಯನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲು ಸಿದ್ಧವಾಗಿದೆ. ಮೊದಲ ಬಸ್ ನ್ನು ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ಬಸ್ ತಯಾರಕ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಮುಂದಿನ ವಾರದ ಆರಂಭದಲ್ಲಿ ತಲುಪಿಸುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರದ ವೇಗದ ಅಳವಡಿಕೆ ಮತ್ತು ವಿದ್ಯುತ್ ವಾಹನಗಳ ಉತ್ಪಾದನೆ (FAME) ಯೋಜನೆಯಡಿ ಕನಿಷ್ಠ ಆರು ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲು ಯೋಜಿಸಲಾಗಿದ್ದರೂ, ಮೊದಲ ಬಸ್ ಈ ತಿಂಗಳ ಅಂತ್ಯದ ವೇಳೆಗೆ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಸಾಧ್ಯತೆಯಿದೆ.

ಮುಂದಿನ ವಾರದಲ್ಲಿ ಮೊದಲ ಇ-ಬಸ್ ನ್ನು ಸಾರಿಗೆ ನಿಗಮಕ್ಕೆ ತಲುಪಿಸುವ ನಿರೀಕ್ಷೆಯಿದೆ. ಅದನ್ನು ಪರೀಕ್ಷಿಸಲು ಮತ್ತು 150 ಕಿಮೀ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಇಂಟರ್‌ಸಿಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಹಿರಿಯ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.

ಸಾರಿಗೆ ನಿಗಮವು 50 ಎಲೆಕ್ಟ್ರಿಕ್ ಬಸ್‌ಗಳಿಗೆ ಆರ್ಡರ್ ಮಾಡಿದ್ದು, ಡಿಸೆಂಬರ್ ಅಂತ್ಯದೊಳಗೆ ಅವುಗಳನ್ನು ವಿತರಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿ ಹೇಳಿದರು. ಪ್ರತಿ ಇ-ಬಸ್‌ನ ಬೆಲೆ ಸುಮಾರು 1.8 ಕೋಟಿ ರೂಪಾಯಿ ಮತ್ತು ವೋಲ್ವೋ ಬಸ್‌ಗಳಂತೆಯೇ 43 ಪುಶ್-ಬ್ಯಾಕ್ ಸೀಟುಗಳು, ವೈಯಕ್ತಿಕ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಎಸಿ ವೆಂಟ್‌ಗಳನ್ನು ಹೊಂದಿರುತ್ತದೆ. ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC) ಅಡಿಯಲ್ಲಿ ಖಾಸಗಿ ಆಪರೇಟರ್ ಒಲೆಕ್ಟ್ರಾ ಬಸ್‌ಗಳನ್ನು ನಿರ್ವಹಿಸಿದರೆ, ಕೆಎಸ್‌ಆರ್‌ಟಿಸಿ ಪ್ರತಿ ಕಿ.ಮೀಗೆ ಕಾರ್ಯಾಚರಣೆ ವೆಚ್ಚ 55 ರೂಪಾಯಿಯಾಗಿದೆ. 

ಆರಂಭಿಕ ಹಂತದಲ್ಲಿ 250 ಕಿಮೀ ದಾಟದ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸುತ್ತೇವೆ. ಎಲೆಕ್ಟ್ರಿಕ್ ಬಸ್‌ಗಳು ಒಂದೇ ಚಾರ್ಜ್‌ನಲ್ಲಿ 250 ಕಿಮೀ ಕ್ರಮಿಸುವ ಸಾಮರ್ಥ್ಯದೊಂದಿಗೆ ಬರಲಿವೆ. ಬೆಂಗಳೂರಿನಿಂದ ಮೈಸೂರು, ತುಮಕೂರು, ಹಾಸನ ಮತ್ತು ಚಿತ್ರದುರ್ಗದಂತಹ ಸ್ಥಳಗಳಿಗೆ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಉದ್ದದ ಮಾರ್ಗಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳಂತಹ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com