ಮಡಿಕೇರಿ: ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದ 49 ಕೋಟಿ ರೂ. ವೆಚ್ಚದ ಭೂಗತ ಒಳಚರಂಡಿ ಯೋಜನೆ

ಭೂ ವಿವಾದದ ಕಾರಣಕ್ಕೆ ಮಡಿಕೇರಿಯಲ್ಲಿ 49 ಕೋಟಿ ರೂ. ವೆಚ್ಚದ ಭೂಗತ ಒಳಚರಂಡಿ ಯೋಜನೆ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. 27.2 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಕಾಮಗಾರಿಯು ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗುವಂತಿದ್ದು, ಭೂಗತ ಪೈಪ್‌ಲೈನ್‌ಗಳ ಅಳವಡಿಕೆಗೆ ನಿವಾಸಿಗಳ ತೀವ್ರ ವಿರೋಧ ಯೋಜನೆಗೆ ಮತ್ತಷ್ಟು ತೊಂದರೆಯನ್ನು ಹೆಚ್ಚಿಸಿದೆ.
ಭೂಮಿಯನಿವೇಶನ ನಕ್ಷೆಯ ಚಿತ್ರ
ಭೂಮಿಯನಿವೇಶನ ನಕ್ಷೆಯ ಚಿತ್ರ
Updated on

ಮಡಿಕೇರಿ: ಭೂ ವಿವಾದದ ಕಾರಣಕ್ಕೆ ಮಡಿಕೇರಿಯಲ್ಲಿ 49 ಕೋಟಿ ರೂ. ವೆಚ್ಚದ ಭೂಗತ ಒಳಚರಂಡಿ ಯೋಜನೆ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. 27.2 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಕಾಮಗಾರಿಯು ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗುವಂತಿದ್ದು, ಭೂಗತ ಪೈಪ್‌ಲೈನ್‌ಗಳ ಅಳವಡಿಕೆಗೆ ನಿವಾಸಿಗಳ ತೀವ್ರ ವಿರೋಧ ಯೋಜನೆಗೆ ಮತ್ತಷ್ಟು ತೊಂದರೆಯನ್ನು ಹೆಚ್ಚಿಸಿದೆ.

ಮಡಿಕೇರಿ ನಗರದಲ್ಲಿ ಒಳ ಚರಂಡಿ ಯೋಜನೆಗೆ 2012ರಲ್ಲಿ ಮಂಜೂರಾತಿ ದೊರೆತು, 2015ರಿಂದ ಕೆಲಸ ಆರಂಭಿಸಲಾಗಿತ್ತು. ನಗರ ವ್ಯಾಪ್ತಿಯಲ್ಲಿನ 7,500 ಮನೆಗಳಿಗೆ ಒಳಚರಂಡಿ ಕಲ್ಪಿಸುವ ಭರವಸೆಯೊಂದಿಗೆ ರೂ. 49 ಕೋಟಿ ಮಂಜೂರಾಗಿತ್ತು. 109 ಕಿಮಿ ವ್ಯಾಪ್ತಿಯಲ್ಲಿ ಪೈಪ್ ಲೈನ್ ಅಳವಡಿಕೆಯ ಗುರಿ ಹೊಂದಲಾಗಿತ್ತು. ಆದರೆ, 69 ಕಿ.ಮಿ ವ್ಯಾಪ್ತಿಯಲ್ಲಿ ಯುಜಿಡಿ ಪೈಪ್ ಲೈನ್ ಅಳವಡಿಕೆ ನಂತರ ಯೋಜನೆ ಸ್ಥಗಿತಗೊಂಡಿದ್ದು, ಸುಮಾರು ಮೂರು ವರ್ಷಗಳಿಂದ ಕೆಲಸ ನಡೆಯದೆ ನೆನೆಗುದಿಗೆ ಬಿದ್ದಿದೆ. 

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ  27.2 ಕೋಟಿ ರೂ. ವೆಚ್ಚದಲ್ಲಿ 69 ಕಿ.ಮೀ ವ್ಯಾಪ್ತಿಯಲ್ಲಿ ಭೂಗತ ಪೈಪ್‌ಲೈನ್‌ಗಳನ್ನು ಅಳವಡಿಸಿದೆ. ಆದರೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆ ಕಾಮಗಾರಿ ಇನ್ನೂ ಆರಂಭವಾಗದ ಕಾರಣ ಸಂಪರ್ಕ ಅಪೂರ್ಣವಾಗಿದೆ. ಎಸ್ ಟಿಪಿ ಸ್ಥಾಪನೆಯಾಗದೆ ಯೋಜನೆಯೂ ನಿಷ್ಕ್ರಿಯವಾಗಿ ಉಳಿಯುತ್ತದೆ. ಪೈಪ್‌ಲೈನ್‌ ಗಾಗಿ ಈಗಾಗಲೇ ರಸ್ತೆಯನ್ನು ಅಗೆದು ಹಾಳು ಮಾಡಲಾಗಿದೆ ಎಂದು ಆರೋಪಿಸಿ ನಿವಾಸಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದಲ್ಲದೆ, ಶಾಶ್ವತ ಭೂ ವಿವಾದದ ಸಮಸ್ಯೆಯಿಂದ ಬಡಗ ಗ್ರಾ.ಪಂ ವ್ಯಾಪ್ತಿಯ 1.66 ಎಕರೆ ಸರ್ಕಾರಿ ಜಾಗದಲ್ಲಿ ಎಸ್‌ಟಿಪಿ ಘಟಕ ಸ್ಥಾಪನೆ ಕಾರ್ಯ ಪ್ರಾರಂಭವಾಗಿಲ್ಲ. ಗುರುತಿಸಲಾದ ಸರ್ಕಾರಿ ಭೂಮಿಯನ್ನು ಆಸುಪಾಸಿನ ಇಬ್ಬರು ಖಾಸಗಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ವಹಿಸದ ಕಾರಣ ವಿವಾದ ಬಗೆಹರಿದಿಲ್ಲ. 

‘ಹಲವು ಸರ್ವೆ ನಡೆಸಲಾಗಿದ್ದು, ಇಬ್ಬರು ಮಾಲೀಕರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒಬ್ಬರು ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಕಟ್ಟಡ ನಿರ್ಮಾಣವಾಗಿರುವುದರಿಂದ  ಪರ್ಯಾಯ ಭೂಮಿಯನ್ನು ಹಸ್ತಾಂತರಿಸುವಂತೆ ಜಮೀನು ಮಾಲೀಕರೊಬ್ಬರಿಗೆ ಮನವಿ ಮಾಡಿದ್ದೇವೆ. ಆದರೆ, ಮಾಲೀಕರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕೆಯುಡಬ್ಲ್ಯೂಎಸ್ ಡಿ ಬಿ ಎಇಇ ಆರ್ ವಿ ಅಜಯ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com