

ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ರಡ್ಡೇರಹಳ್ಳಿ ಬಳಿ ಕಾರೊಂದು ನೀರಾವರಿ ಕಾಲುವೆಗೆ ಪಲ್ಟಿಯಾಗಿದ್ದು ಘಟನೆಯಲ್ಲಿ ಇಬ್ಬರು ನೀರುಪಾಲಾಗಿದ್ದು ಓರ್ವ ಪಾರಾಗಿದ್ದಾರೆ.
ರಡ್ಡೇರಹಳ್ಳಿ ಬಳಿಯ ಹಲ್ಯಾಳ ಏತ ನೀರಾವರಿ ಕಾಲುವೆಗೆ ಕಾರು ಪಲ್ಟಿಯಾಗಿತ್ತು. ಘಟನೆಯಲ್ಲಿ ಮಹಾದೇವ ಚಿಗರಿ, 27 ವರ್ಷದ ಸುರೇಶ್ ಬಡಚನ ನೀರುಪಾಲಾಗಿದ್ದು ಶ್ರೀಕಾಂತ್ ನಡುವಿನಮನಿ ಎಂಬುವರು ಜೀವಾಪಾಯದಿಂದ ಪಾರಾಗಿದ್ದಾರೆ.
ಎಂಎಚ್ 05 ಎಬಿ 6674 ನಂಬರಿನ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಜೆಸಿಬಿ ಮೂಲಕ ಕಾರನ್ನು ಹೊರತೆಗೆಯಲಾಗಿದೆ.