ಮೈಸೂರು: ಸ್ನೇಹಿತರ ನಡುವಿನ ಇನ್‌ಸ್ಟಾಗ್ರಾಂ ವಾಗ್ವಾದ ಕೊಲೆಯಲ್ಲಿ ಅಂತ್ಯ!

ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತರ ನಡುವೆ ವಾಗ್ವಾದವುಂಟಾಗಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ನಗರದ ಎಪಿಎಂಸಿ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತರ ನಡುವೆ ವಾಗ್ವಾದವುಂಟಾಗಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ನಗರದ ಎಪಿಎಂಸಿ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.

ಹುಣಸೂರು ತಾಲೂಕಿನ ಅಂಗಟಹಳ್ಳಿಯ ನಿವಾಸಿ ಬೀರೇಶ್(23) ಮೃತ ವ್ಯಕ್ತಿ. ಈತನ ಸ್ನೇಹಿತರಾದ ಗೋಕುಲ್ ರಸ್ತೆಯ ಕುಟ್ಟಿ ಜಿಮ್‌ನ ತರಬೇತುದಾರ ನಿತಿನ್ ಅಲಿಯಾಸ್ ವಠಾರ ಹಾಗೂ ಕಲ್ಕುಣಿಕೆಯ ಮನು ಆರೋಪಿಗಳು.    

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಕೊಲೆ ಆರೋಪಿ ನಿತಿನ್ ಮದುವೆಯಾಗಿದ್ದ. ಯುವತಿ ಆರ್ಥಿಕವಾಗಿ ಸಬಲಳಾಗಿದ್ದಳು. ಮದುವೆ ಬಗ್ಗೆ ಬೀರೇಶ್ ಕಾಮೆಂಟ್ ಮಾಡಿದ್ದ. ನಿತಿನ್ ಮದುವೆ ವಿಚಾರವನ್ನ ಪ್ರಸ್ತಾಪಿಸಿ ಬಿರೇಶ್ ಹೆಂಡತಿನ ನೋಡ್ಕೊಳಕೆ ಆಗಲ್ಲಾ ಅಂದ ಮೇಲೆ ಮದುವೆ ಯಾಕ ಬೇಕು ಎಂದು ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ.

ಇದನ್ನ ಗಮನಿಸಿದ ನಿತಿನ್ ಕಮೆಂಟ್ ಫೋಟೋ ತೆಗೆದು ಎಲ್ಲಾ ಸ್ನೇಹಿತರಿಗೂ ಕಳುಹಿಸಿದ್ದಾನೆ. ಕಳೆದ ಒಂದು ವಾರದಿಂದ ಈ ವಿಚಾರವಾಗಿ ಬಿರೇಶ್ ಮತ್ತು ನಿತಿನ್ ನಡುವೆ ಜಗಳ ನಡೆಯುತ್ತಲ್ಲೇ ಇತ್ತು. ಮಧ್ಯಾಹ್ನ ನಿನ್ನ ಜೊತೆ ಮಾತನಾಡಬೇಕು ಬಾ ಎಂದು ಬಿರೇಶನನ್ನ ಬೈಕ್ ನಲ್ಲಿ ಕುರಿಸಿಕೊಂಡು ನಿತಿನ್ ಮತ್ತು ಮನೋಜ್ ತ್ರಿಬಲ್ ರೈಡ್ ಹೊರಟಿದ್ದಾರೆ. ಹುಣುಸೂರು ನಗರದ ಸರಸ್ವತಿ ಪ್ಲಾಜಾ ಬಳಿ ಬರುತ್ತಿದಂತೆ ಹಿಂಬದಿಯಲ್ಲಿ ಕುಳಿತಿದ್ದ ನಿತಿನ್ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಬೈಕ್ ನಿಂದ ಬಿರೇಶ್ ಕೆಳಗೆ ಬಿದ್ದಿದ್ದಾನೆ.

ರಕ್ತದ ಮಡುವಿನಲ್ಲಿದ್ದ ಬಿರೇಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಬಿರೇಶ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಮೃತನ ಪೋಷಕರು ನಿತಿನ್ ಮತ್ತು ಮನೋಜ್ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವವರ ಪತ್ತೆಗೆ ಬಲೆ ಬೀಸಿದ್ದಾರೆ.

ಬೀರೇಶ್, ನಿತಿನ್ ಪತ್ನಿಯ ನಕಲಿ ಖಾತೆಯನ್ನು ಸೃಷ್ಟಿಸಿ ಅಸಭ್ಯ ಸಂದೇಶಗಳನ್ನು ಪೋಸ್ಟ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಿತಿನ್ ಪತ್ನಿ ಗರ್ಭಿಣಿಯಾಗಿದ್ದು ಆರೋಪಿ ನಿತಿನ್ ಮತ್ತು ಮನು ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹುಣಸೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com