ಹುಬ್ಬಳ್ಳಿ: ನೀರಸಾಗರ ಜಲಾಶಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಯುವಕ!

ನೀರಸಾಗರ ಜಲಾಶಯದಲ್ಲಿ ಭಾನುವಾರ ಸಂಜೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 22 ವರ್ಷದ ಯುವಕನೊಬ್ಬ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ನೀರಸಾಗರ ಜಲಾಶಯ, ಯುವಕ ಕಿರಣ್ (ಒಳಚಿತ್ರದಲ್ಲಿ)
ನೀರಸಾಗರ ಜಲಾಶಯ, ಯುವಕ ಕಿರಣ್ (ಒಳಚಿತ್ರದಲ್ಲಿ)
Updated on

ಹುಬ್ಬಳ್ಳಿ: ನೀರಸಾಗರ ಜಲಾಶಯದಲ್ಲಿ ಭಾನುವಾರ ಸಂಜೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 22 ವರ್ಷದ ಯುವಕನೊಬ್ಬ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಮಳೆ, ಪ್ರವಾಹ ಹಾಗೂ ಕತ್ತಲು ಕೂಡಾ ಆಗಿದ್ದರಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಕಲಘಟಗಿ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಇಂದು ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಿದ್ದಾರೆ. 

ಧಾರವಾಡ ಜಿಲ್ಲೆ ಬೇಗೂರು ಗ್ರಾಮದ ನಿವಾಸಿ ಕಿರಣ್ ರಾಜ್ ಪುರ ನೀರಿನಲ್ಲಿ ಹೊಚ್ಚಿನಿಂದ ಯುವಕನಾಗಿದ್ದಾನೆ. ತನ್ನ ಸ್ನೇಹಿತರೊಂದಿಗೆ ಜಲಾಶಯದ ಬಳಿ ಬಂದಿದ್ದ ಈತ ಸೆಲ್ಫಿ ತೆಗೆದುಕೊಳ್ಳಲು ತುದಿಗೆ ಹೋದಾಗ ಹರಿಯುವ ನೀರಿನಲ್ಲಿ ಜಾರಿ ಬಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆತ ನೀರಿನಲ್ಲಿ ಕೋಚಿಕೊಂಡು ಹೋಗಿದ್ದು, ಪತ್ತೆ ಹಚ್ಚಲು ಅವನ ಸ್ನೇಹಿತರು ಮಾಡಿದ ಪ್ರಯತ್ನಗಳು ವ್ಯರ್ಥವಾಯಿತು.

ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಲಾಶಯದ ಬಳಿಗೆ ಬರುತ್ತಿದ್ದು, ಅವರು ನೀರಿಗೆ ಇಳಿಯದಂತೆ ಅಧಿಕಾರಿಗಳು ಹಾಗೂ ಕಾವಲುಗಾರರು ಎಚ್ಚರಿಕೆ ವಹಿಸಬೇಕಾಗಿದೆ. ಆದರೆ, ಹಲವು ಮಂದಿ ಎಚ್ಚರಿಕೆ ನಿರ್ಲಕ್ಷಿಸಿ, ಸೆಲ್ಫಿ ಮತ್ತು ಫೋಟೋಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ನೀರಿನ ಮಟ್ಟ ಕಡಿಮೆಯಾಗುವವರೆಗೆ ಜಲಾಶಯದ ಬಳಿ ಪ್ರವಾಸಿಗರನ್ನು ನಿಷೇಧಿಸಲು ಪೊಲೀಸರು ಈಗ ಯೋಜಿಸಿದ್ದಾರೆ. ನೀರಿನ ಮಟ್ಟ ಹೆಚ್ಚಿದ್ದು, ಇಲ್ಲಿ ಬಿದ್ದರೆ ಬದುಕುಳಿಯುವುದು ಅಸಾಧ್ಯವಾಗಿದೆ. ಪರಿಣಿತ ಈಜುಗಾರರು ಸಹ ಇದನ್ನು ಮಾಡಲು ಸಾಧ್ಯವಿಲ್ಲ. ಮೃತ ಯುವಕ ಕಿರಣ್ ರಾಜ್ ಪುರ ಅವರ ಕುಟುಂಬ ಸದಸ್ಯರು ಅಪಘಾತದ ಸ್ಥಳದ ಬಳಿಗೆ  ದಿದ್ದರು. ನಾವು ಅವರನ್ನು ವಾಪಸ್ ಕಳುಹಿಸಿದ್ದೇವೆ. ನಾವು ಈ ಅಪಘಾತದ ಬಗ್ಗೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com