'ಬಫರ್ ಜೋನ್' ಎಂದು ಪಶ್ಚಿಮ ಘಟ್ಟ ಪ್ರದೇಶಗಳನ್ನು ಘೋಷಿಸಿರುವುದರ ಮಧ್ಯೆ ಅರಣ್ಯ ಇಲಾಖೆಯಿಂದ ರಹಸ್ಯ ಕರಡು ತಯಾರಿಕೆ!

ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶಗಳ ಘೋಷಣೆಗೆ ಸಂಬಂಧಿಸಿದಂತೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯ ವಿರುದ್ಧ ಹಲವು ರಾಜಕಾರಣಿಗಳು, ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶಗಳ ಘೋಷಣೆಗೆ ಸಂಬಂಧಿಸಿದಂತೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯ ವಿರುದ್ಧ ಹಲವು ರಾಜಕಾರಣಿಗಳು, ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವುದರ ಮಧ್ಯೆ, ಅರಣ್ಯಗಳ ಸುತ್ತ 10 ಕಿಮೀ ವ್ಯಾಪ್ತಿಯನ್ನು ಸೂಕ್ಷ್ಮ ಪರಿಸರ ವಲಯ (Buffer Zone) ಎಂದು ಘೋಷಿಸಲು ಸದ್ದಿಲ್ಲದೆ ಕರಡು ಸಿದ್ಧವಾಗುತ್ತಿದೆ. 

ಸುಪ್ರೀಂ ಕೋರ್ಟ್ ನ ಆದೇಶಗಳು ಇದುವರೆಗೆ ಬಹುತೇಕರ ಗಮನಕ್ಕೆ ಬಂದಿಲ್ಲ. ಸುಪ್ರೀಂ ಕೋರ್ಟ್ ನ ಕೆಲವು ಆದೇಶಗಳು ಕಠಿಣವಾಗಿದ್ದು ಅವುಗಳ ಪ್ರಾಯೋಗಿಕ ಜಾರಿ ಸವಾಲಾಗಿರುವುದರಿಂದ ರಾಜ್ಯ ಸರ್ಕಾರಕ್ಕೆ ಇದು ಸರಿಯಾಗುವುದಿಲ್ಲ ಎಂದು ಪರಿಸರವಾದಿಗಳು, ಪರಿಸರ ಸಂರಕ್ಷಣಕಾರರು ವಾದಿಸುತ್ತಿದ್ದಾರೆ. 

ಈ ಆದೇಶವನ್ನು ಪ್ರಶ್ನಿಸಿ ಈಗಾಗಲೇ ಕೆಲವು ನಾಗರಿಕರು ಮತ್ತು ಪರಿಸರ ಕಾರ್ಯಕರ್ತರು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದಾರೆ. 

10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬಫರ್ ಜೋನ್ ಎಂದು ಘೋಷಿಸಿದರೆ ಮಾನವಪರ ಅಭಿವೃದ್ಧಿ ಕೆಲಸಗಳು, ಹಳ್ಳಿಗರಿಗೆ ಬೇಕಾದ ರಸ್ತೆ, ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಇದು ಜನಜೀವನಕ್ಕೆ ಕಷ್ಟವಾಗುತ್ತದೆ. ಅರಣ್ಯ ಪ್ರದೇಶಗಳು, ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯಗಳ 1 ಕಿಲೋ ಮೀಟರ್ ವ್ಯಾಪ್ತಿ ಪ್ರದೇಶವನ್ನು ಆರ್ಥಿಕವಾಗಿ ಸೂಕ್ಷ್ಮ ಪ್ರದೇಶ (ESZ) ಅಥವಾ ಬಫರ್ ವಲಯ ಎಂದು ಘೋಷಿಸಿ ನಿಯಮ ಪಾಲಿಸುವ ಕ್ರಮ ಜಾರಿಯಲ್ಲಿದೆ. 10 ಕಿಲೋ ವ್ಯಾಪ್ತಿ ಎಂದು ಹೇಳುವ ಸುಪ್ರೀಂ ಕೋರ್ಟ್ ಆದೇಶ ಜಾರಿ ಕಷ್ಟ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. 

ಸಂಪನ್ಮೂಲ ಸಂಗ್ರಹದಲ್ಲಿ ಸಮಸ್ಯೆ: ಪರಿಸರ, ಅರಣ್ಯ ಸಚಿವಾಲಯ ಹೊರಡಿಸಿದ ಕರಡಿಗೆ ಸಮಾನವಾಗಿ ಸುಪ್ರೀಂ ಕೋರ್ಟ್ ಆದೇಶವಿದೆ ಎಂಬುದು ಪರಿಸರ ಸಂರಕ್ಷಣಕಾರರ ವಾದವಾಗಿದೆ. ಕಸ್ತೂರಿರಂಗನ್ ವರದಿ ಪಶ್ಚಿಮ ಘಟಕ್ಕೆ ಸಂಬಂಧಿಸಿದ್ದಾಗಿದ್ದರೆ ಸುಪ್ರೀಂ ಕೋರ್ಟ್ ಆದೇಶವು ರಾಜ್ಯದ ಎಲ್ಲಾ ಅರಣ್ಯಗಳಿಗೆ ಸಂಬಂಧಪಟ್ಟದ್ದಾಗಿದೆ. 

ಕರ್ನಾಟಕದಲ್ಲಿ ಅಭಿವೃದ್ಧಿ, ಕೃಷಿ ಮತ್ತು ದೊಡ್ಡ ಮಟ್ಟದಲ್ಲಿ ಏಕ ಬೆಳೆ ವ್ಯವಸಾಯ ಹೆಚ್ಚಾಗಿರುವುದರಿಂದ ಅರಣ್ಯ ಪ್ರದೇಶಗಳು ಕಡಿಮೆಯಾಗಿವೆ ಎಂದು ಅಧ್ಯಯನವೊಂದು ಹೇಳುತ್ತದೆ. ಈ ವರದಿ ಜುಲೈ 19ರಂದು ಬಿಡುಗಡೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com